ಉಡುಪಿ: ಕನ್ನಡ ಚಲನಚಿತ್ರ ಖ್ಯಾತ ಹಿರಿಯ ನಟ ಶಶಿಕುಮಾರ್ (Shashi Kumar) ಮೇ 1ರಂದು ಉಚ್ಚಂಗಿ ಸಹಿತ ಮಾರಿಯಮ್ಮನ ಕ್ಷೇತ್ರ ಹೊಸ ಮಾರಿಗುಡಿ ದೇವಸ್ಥಾನ (Kapu Marigudi Temple) ಕಾಪು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಾರಿಯಮ್ಮನ ಸ್ವರ್ಣ ಗದ್ದುಗೆ ಮತ್ತು ವಿವಿಧ ಶೈಲಿಯ ಕಲಾತ್ಮಕ ಕೆತ್ತನೆಗಳನ್ನು ಕಂಡು ಈ ಕೆಲಸವನ್ನೆಲ್ಲ ಕಾಪುವಿನ ಅಮ್ಮ ಮಾಡಿಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗ ಮತ್ತೆ ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಧೋನಿಯವರಂತೆ 5 ಐಪಿಎಲ್ ಟ್ರೋಫಿ ಗೆಲ್ಲುವುದು ನನ್ನ ಗುರಿ: ಕೆಎಲ್ ರಾಹುಲ್
ಈ ವೇಳೆ ನಟ ಶಶಿಕುಮಾರ್ ಅವರಿಗೆ ದೇವಳದ ವ್ಯವಸ್ಥಾಪನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಿ, ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಲಾಯಿತು. ಇದನ್ನೂ ಓದಿ: ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ವಂಚನೆ ಕೇಸ್; ಕುಖ್ಯಾತ ಆರೋಪಿ ಕಮಲೇಶ್ ಪರೇಖ್ ಬಂಧಿಸಿದ CBI

