ಮದುವೆ ಬ್ರೋಕರ್ ಹೆಸರಲ್ಲಿ ವಂಚನೆ – ಹೆಣ್ಣು ನೋಡಲು ಬಂದವರ ಬೈಕ್, ಹಣ ಕಳ್ಳತನ

1 Min Read

ರಾಯಚೂರು: ಮದುವೆ ಬ್ರೋಕರ್ ಹೆಸರಲ್ಲಿ ಹೆಣ್ಣು ತೊರಿಸುವುದಾಗಿ ಕರೆದು ಬೆದರಿಸಿ ಬೈಕ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ರಾಯಚೂರಿನ ಕವಿತಾಳ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿ ದೊಡ್ಡಬಸವ ಸೆರೆ ಸಿಕ್ಕಿದ್ದಾನೆ. ಇದನ್ನೂ ಓದಿ: ಆಪ್ ತೊರೆದು ಬಿಜೆಪಿ ಸೇರಿದ ಸಂಸದ ಸಂದೀಪ್ ಪಾಠಕ್‌ಗೆ ಶಾಕ್ – ಪಂಜಾಬ್‌ನ 2 ಜಿಲ್ಲೆಗಳಲ್ಲಿ ಜಾಮೀನು ರಹಿತ FIR

ಹೆಣ್ಣು ನೋಡಲು ಬೈಕ್‌ನಲ್ಲಿ ಬರುವವರಿಗೆ ಬೆದರಿಸಿ ಹಣ, ಬೈಕ್ ಕಸಿದುಕೊಳ್ಳುತ್ತಿದ್ದ. ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ಆರೋಪಿ ದೊಡ್ಡಬಸವನನ್ನ ಬಂಧಿಸಿರುವ ಪೊಲೀಸರು ಆರೋಪಿಯಿಂದ 8.40 ಲಕ್ಷ ರೂ. ಮೌಲ್ಯದ 14 ಬೈಕ್ ಗಳು ಜಪ್ತಿ ಮಾಡಿದ್ದಾರೆ.

ಬಳ್ಳಾರಿ, ಸಿರಗುಪ್ಪ, ಗಂಗಾವತಿ, ಮಾನ್ವಿ, ಬಳಗಾನೂರು ಸೇರಿ ಹಲವೆಡೆ ಕೃತ್ಯ ಎಸಗಿರುವ ಆರೋಪಿ ಮದುವೆಗೆ ಹೆಣ್ಣು ತೋರಿಸುವುದಾಗಿ ನಂಬಿಸಿ ಕರೆದು ಬೈಕ್, ಹಣ ವಸೂಲಿ ಮಾಡಿ ಪರಾರಿಯಾಗುತ್ತಿದ್ದ. ಕೊಪ್ಪಳ ಜಿಲ್ಲೆಯ ಶರಣಪ್ಪ ಎಂಬುವವರ ದೂರಿನ ಮೇರೆಗೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಿಟ್ & ರನ್‌ಗೆ ಬೈಕ್ ಸವಾರ ಸಾವು – ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕೊಪ್ಪಳ ಜಿಲ್ಲೆಯಿಂದ ‌ಸ್ನೇಹಿತ ಈಶಪ್ಪ ಜೊತೆಗೆ ‌ಕನ್ಯಾ ನೋಡಲು ಬಂದಿದ್ದ ಶರಣಪ್ಪ‌ನಿಗೆ ಚಾಕು ತೋರಿಸಿ ಬೈಕ್ ಕಿತ್ತುಕೊಂಡು ಖದೀಮ ದೊಡ್ಡ ಬಸವ ಪರಾರಿಯಾಗಿದ್ದ. ಖದೀಮನ ಸಂಪೂರ್ಣ ಮಾಹಿತಿ ಕಲೆಹಾಕಿ ದಾಳಿ ಮಾಡಿದ ಕವಿತಾಳ ಪೊಲೀಸರು ದೊಡ್ಡ ಬಸವನನನ್ನ ಬಂಧಿಸಿದ್ದಾರೆ. ಆರೋಪಿಯ ಬಳಗಾನೂರು ಮನೆ ಮೇಲೆ ದಾಳಿ ಮಾಡಿದಾಗ ಗಿರಿವಿ ಇಡಲು ಸಂಗ್ರಹಿಸಿದ್ದ 14 ಬೈಕ್ ಗಳನ್ನ ‌ಜಪ್ತಿ ಮಾಡಲಾಗಿದೆ. ವಿಚಾರಣೆ ಬಳಿಕ ಆರೋಪಿಯನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article