ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚನೆ ಕೇಸ್;‌ ಕುಖ್ಯಾತ ಆರೋಪಿ ಕಮಲೇಶ್ ಪರೇಖ್‌ ಬಂಧಿಸಿದ CBI

1 Min Read

ನವದೆಹಲಿ: ಬ್ಯಾಂಕಿಂಗ್ ಮತ್ತು ಆರ್ಥಿಕ ವಂಚನೆಯ ದೊಡ್ಡ ಪ್ರಕರಣದಲ್ಲಿ ಸಿಬಿಐಗೆ (CBI) ಮಹತ್ವದ ಯಶಸ್ಸು ದೊರಕಿದೆ. ದೀರ್ಘಕಾಲದಿಂದ ಪರಾರಿಯಾಗಿದ್ದ ಪ್ರಮುಖ ಕುಖ್ಯಾತ ಆರೋಪಿ ಕಮಲೇಶ್ ಪರೇಖ್‌ನನ್ನು (Kamlesh Parekh) ಅಧಿಕಾರಿಗಳು ಬಂಧಿಸಿದ್ದಾರೆ.

ಇಂಟರ್‌ಪೋಲ್‌ನ ರೆಡ್ ಕಾರ್ನರ್ ನೋಟಿಸ್ ಆಧರಿಸಿ ಯುಎಇ ಅಧಿಕಾರಿಗಳು ಪರೇಖ್‌ನನ್ನು ಬಂಧಿಸಿ, ಭಾರತದ ಅಧಿಕೃತ ವಿನಂತಿಯ ಮೇರೆಗೆ ಒಪ್ಪಿಸಿದರು. ಮೇ 1ರಂದು ಭಾರತಕ್ಕೆ ಕರೆತರಲಾದ ಪರೇಖ್‌ನನ್ನು ದೆಹಲಿಯಲ್ಲಿ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ವಿದೇಶಾಂಗ ಮತ್ತು ಗೃಹ ಸಚಿವಾಲಯದ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಇದನ್ನೂ ಓದಿ: ಆಪ್ ತೊರೆದು ಬಿಜೆಪಿ ಸೇರಿದ ಸಂಸದ ಸಂದೀಪ್ ಪಾಠಕ್‌ಗೆ ಶಾಕ್ – ಪಂಜಾಬ್‌ನ 2 ಜಿಲ್ಲೆಗಳಲ್ಲಿ ಜಾಮೀನು ರಹಿತ FIR

ಕಮಲೇಶ್ ಪರೇಖ್ ಇತರ ಪ್ರಮೋಟರ್‌ಗಳು ಮತ್ತು ನಿರ್ದೇಶಕರೊಂದಿಗೆ ಸೇರಿ ಬ್ಯಾಂಕ್‌ಗಳಿಂದ ಪಡೆದ ಹಣವನ್ನು ವಿದೇಶಿ ಕಂಪನಿಗಳಿಗೆ ಡೈವರ್ಟ್ ಮಾಡಿದ್ದಾನೆ ಎಂಬ ಆರೋಪವಿದೆ. ಇದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಫಿಕ್ಷನ್ ಎಕ್ಸ್‌ಪೋರ್ಟ್ ಚಟುವಟಿಕೆಗಳು, ಸಂದೇಹಾಸ್ಪದ ಹಣ ವರ್ಗಾವಣೆ ಮತ್ತು ಬ್ಯಾಂಕಿಂಗ್ ಚಾನಲ್‌ಗಳ ದುರ್ಬಳಕೆಯ ಮೂಲಕ ಈ ದೊಡ್ಡ ಮಟ್ಟದ ವಂಚನೆ ನಡೆದಿದೆ ಎಂದು ತನಿಖೆಯಲ್ಲಿ ಬಯಲಾಗಿದೆ.

ಸಿಬಿಐ ಅಧಿಕಾರಿಗಳು ಈಗ ಪರೇಖ್ ವಿಚಾರಣೆ ನಡೆಸಿ, ಆತನ ಪೂರ್ಣ ನೆಟ್‌ವರ್ಕ್ ಮತ್ತು ಇತರ ಆರೋಪಿಗಳ ಪಾತ್ರವನ್ನು ಬಯಲು ಮಾಡುವಲ್ಲಿ ತೊಡಗಿದ್ದಾರೆ. ಭಾರತಪೋಲ್ ಪ್ಲಾಟ್‌ಫಾರ್ಮ್ ಮೂಲಕ ಸಿಬಿಐ ಇಂಟರ್‌ಪೋಲ್‌ನೊಂದಿಗೆ ಸಹಕರಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ 150ಕ್ಕೂ ಹೆಚ್ಚು ವಂಚಕರನ್ನು ಭಾರತಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೊಬೈಲ್‌ಗಳಲ್ಲಿ ಮೊಳಗಿದ ‘ಎಮರ್ಜೆನ್ಸಿ’ ಸೈರನ್‌ – ಫೋನ್‌ಗೆ ಬಂದ ಆಪತ್ಕಾಲ ಎಚ್ಚರಿಕೆ ಏನು?

Share This Article