ಸಚಿವ ಡಿ.ಸುಧಾಕರ್ ಆರೋಗ್ಯದಲ್ಲಿ ಚೇತರಿಕೆ

1 Min Read

ಚಿತ್ರದುರ್ಗ: ಸಚಿವ ಡಿ.ಸುಧಾಕರ್ (D.Sudhakar) ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಅವರ ಸಹೋದರ ಡಿ.ಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಬಳಿ ಮಾಹಿತಿ ನೀಡಿದ್ದು, ಡಿ.ಸುಧಾಕರ್‌ಗೆ ಪ್ರಜ್ಞೆ ಬಂದಿದೆ. ಕಣ್ಣು ಬಿಟ್ಟು ನೋಡಿದ್ದಾರೆ. ನೂರಕ್ಕೆ ನೂರರಷ್ಟು ಗುಣಮುಖರಾಗುವ ವಿಶ್ವಾಸವಿದೆ. ಡಿ.ಸುಧಾಕರ್ ಮತ್ತೆ ಹಿರಿಯೂರಿಗೆ ಬಂದು ಜನಸೇವೆ ಮಾಡಲಿದ್ದಾರೆ. ಹೀಗಾಗಿ, ಕ್ಷೇತ್ರದ ಜನರು ಸೇರಿದಂತೆ ಎಲ್ಲರೂ ಧೈರ್ಯವಾಗಿರಿ. ಸಮಾಧಾನದಿಂದ ಇರುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಇಂದು

ಸಚಿವ ಸುಧಾಕರ್ ಅವರು ಮೊಣಕಾಲು ಸಂಬಂಧ ಆಪರೇಷನ್‌ಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಅವರಿಗೆ ಶ್ವಾಸಕೋಶ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಹೆಚ್ಚು ಉಲ್ಬಣ ಆದ್ದರಿಂದ ಮಣಿಪಾಲ್ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಸಚಿವರ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆ – ಗಿರೀಶ್ ಮಟ್ಟಣ್ಣನವರ್ ವಿರುದ್ಧ FIR

Share This Article