ನರ್ಮದಾ ನದಿ ದೋಣಿ ದುರಂತದಲ್ಲಿ ಕರುಳು ಹಿಂಡುವ ದೃಶ್ಯ – 4 ವರ್ಷದ ಗಂಡು ಮಗು, ತಾಯಿ ಪರಸ್ಪರ ಅಪ್ಪಿಕೊಂಡೇ ಜಲಸಮಾಧಿ

1 Min Read

– ಮೃತರ ಸಂಖ್ಯೆ 9ಕ್ಕೆ ಏರಿಕೆ

ಭೋಪಾಲ್: ಮಧ್ಯಪ್ರದೇಶದ (Madhyar Pradesh) ಜಬಲ್‌ಪುರದ ನರ್ಮದಾ ನದಿಯಲ್ಲಿ (Narmada River) ದೋಣಿ ದುರಂತದಲ್ಲಿ ಕರುಳು ಹಿಂಡುವ ದೃಶ್ಯವೊಂದು ಕಂಡುಬಂದಿದೆ. ತಾಯಿಯೊಬ್ಬರು 4 ವರ್ಷದ ಗಂಡು ಮಗುವನ್ನು ಅಪ್ಪಿಕೊಂಡು ಜಲಸಮಾಧಿಯಾಗಿದ್ದಾರೆ.

ದೋಣಿ ದುರಂತದ ರಕ್ಷಣಾ ಕಾರ್ಯಾಚರಣೆ ವೇಳೆ 4 ವರ್ಷದ ಗಂಡು ಮಗುವನ್ನು ತಾಯಿ ಅಪ್ಪಿಕೊಂಡಿರುವ ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಈ ದೃಶ್ಯ ಕರುಳು ಹಿಂಡುವಂತಿದೆ. ಈವರೆಗೆ 24 ಜನರನ್ನು ರಕ್ಷಿಸಿದ್ದು, ಈ ಪೈಕಿ 17 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಿಕನ್ ತರಲು ಹೋಗುತ್ತಿದ್ದವನಿಗೆ ಖಾಸಗಿ ಬಸ್ ಡಿಕ್ಕಿ – ಬಾಲಕ ಸಾವು

ಗುರುವಾರ (ಏ.30) ಮಧ್ಯಪ್ರದೇಶದ ಬಾರ್ಗಿ ಅಣೆಕಟ್ಟು ಬಳಿ ನರ್ಮದಾ ನದಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ದೋಣಿ ನಿಯಂತ್ರಣ ಕಳೆದುಕೊಂಡು ನೀರು ತುಂಬಲಾರಂಭಿಸಿ ದುರಂತ ಸಂಭವಿಸಿತ್ತು. ಸ್ಥಳೀಯ ಪೊಲೀಸರು, ಜಿಲ್ಲಾ ಅಧಿಕಾರಿಗಳು ಮತ್ತು ರಾಜ್ಯ ವಿಪತ್ತು ಪಡೆ ಶೋಧಕಾರ್ಯ ನಡೆಸಿದ್ದು, ನಾಪತ್ತೆಯಾದವರನ್ನು ಪತ್ತೆ ಹಚ್ಚುವಲ್ಲಿ ಕಾರ್ಯನಿರತರಾಗಿದ್ದಾರೆ.

Share This Article