ಬೆಂಗಳೂರು: ಸಾರಿಗೆ ನೌಕರರ (Transport Employees) 26 ತಿಂಗಳ ಹಿಂಬಾಕಿ ಪಾವತಿಗೆ ಸರ್ಕಾರ ಅನುಮೋದನೆ ನೀಡಿದ್ದು, ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
1271 ಕೋಟಿ ರೂ. ಹಿಂಬಾಕಿ ಪಾವತಿಗೆ ಅನುಮೋದನೆ ಸಿಕ್ಕಿದೆ. ಅದರಲ್ಲಿ 450 ಕೋಟಿ ರೂ. ಬಿಡುಗಡೆ ಮಾಡಿದೆ. 2021ರ ಜ.1 ರಿಂದ 2023ರ ಫೆ.28 ರವರೆಗೆ ಹಿಂಬಾಕಿ ಪಾವತಿಸಿದೆ. ನಾಲ್ಕು ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಸಹಾನುಭೂತಿಯಿಂದ ಅನುದಾನ ಬಿಡುಗಡೆಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಒಟ್ಟು ನಾಲ್ಕು ಸಾರಿಗೆ ನಿಗಮದ ನೌಕರರಿಗೂ ಹಿಂಬಾಕಿ ಪಾವತಿಯಾಗಲಿದೆ. ಏಕಕಾಲಕ್ಕೆ ನೌಕರರಿಗೆ ಹಣ ಪಾವತಿ ಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: Transport Strike – 38ರ ಬದಲು 26 ತಿಂಗಳ ಹಿಂಬಾಕಿಗೆ ಸರ್ಕಾರ ಒಪ್ಪಿಗೆ
ಕಳೆದ ಫೆಬ್ರವರಿಯಲ್ಲಿ ಈ ಬಗ್ಗೆ ಮಾತನಾಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಾರಿಗೆ ನೌಕರರ ಬಹುದಿನಗಳ ಬೇಡಿಕೆಗೆ ಸರ್ಕಾರ (Congress Government) ಸ್ಪಂದನೆ ಮಾಡಿದೆ. 38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ಹಿಂಬಾಕಿ ನೀಡಲು ಒಪ್ಪಿಗೆ ನೀಡಿದೆ. 26 ತಿಂಗಳ ಹಿಂಬಾಕಿಗೆ ಬಜೆಟ್ ನಂತರ 1,271 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದರು.
ನೌಕರರ ಪ್ರಮುಖ ಬೇಡಿಕೆಗಳು ಏನಿತ್ತು?
38 ತಿಂಗಳ ಹಿಂಬಾಕಿ ಹಣ ನೀಡಬೇಕು, ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು, ಕಾರ್ಮಿಕರ ಕಿರುಕುಳ ನಿಲ್ಲಬೇಕು ಹಾಗೂ 1-1-2024 ರಿಂದ ವೇತನ ಜಾರಿಗೊಳಿಸಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿತ್ತು. ಇದನ್ನೂ ಓದಿ: ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್

