ಡಿಜಿಟಲ್ ಅರೆಸ್ಟ್ ತೊಡಗಿದ್ದ 9,400 ವಾಟ್ಸಪ್‌ ಖಾತೆಗಳು ಡಿಲೀಟ್‌

2 Min Read

-ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದಿಂದ ಮಾಹಿತಿ

ನವದೆಹಲಿ: ಡಿಜಿಟಲ್ ಅರೆಸ್ಟ್ ವಂಚನೆಗಳಲ್ಲಿ ತೊಡಗಿದ್ದ 9,400 ಖಾತೆಗಳನ್ನು ಮೇಟಾ ಒಡೆತನದ ವಾಟ್ಸಪ್‌ ಕಂಪನಿಯು ಕಳೆದ 12 ವಾರಗಳಲ್ಲಿ ನಿಷೇಧಗೊಳಿಸಿದೆ ಎಂದು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ಸುಪ್ರೀಂಕೋರ್ಟ್‌ಗೆ (Supreme Court) ತಿಳಿಸಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಡಿಜಿಟಲ್ ಅರೆಸ್ಟ್ (Digital Arrest) ಸಂಬಂಧಿತ ವಂಚನೆಗಳ ವಿರುದ್ಧದ ಪ್ರಕರಣದ ವಿಚಾರಣೆಯ ವೇಳೆ ಅಟಾರ್ನಿ ಜನರಲ್ ಅವರು ಮಾಹಿತಿ ನೀಡಿದರು. ಸುಪ್ರೀಂಕೋರ್ಟ್ ಈಗಾಗಲೇ ಡಿಜಿಟಲ್ ಅರೆಸ್ಟ್ ಮೋಸಗಳ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಈ ವೇಳೆ ಅಟಾರ್ನಿ ಜನರಲ್ ಅವರು ವಾಟ್ಸಪ್ ಕಂಪನಿ ಸಲ್ಲಿಸಿದ ವರದಿಯನ್ನು ಕೋರ್ಟ್‌ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ಕಾರ್‌ನಲ್ಲಿ ಸಿಎಂ-ಡಿಸಿಎಂ ಪ್ರಯಾಣ; ಇಬ್ಬರು ನಾಯಕರಿಂದ ಅಚ್ಚರಿ ನಡೆ

ಸರ್ಕಾರಿ ಏಜೆನ್ಸಿಗಳಾದ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C), ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (MeitY) ಮತ್ತು ದೂರಸಂಪರ್ಕ ಇಲಾಖೆ (DoT)ಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ವಾಟ್ಸಪ್ ಈ ವಿಶೇಷ ಕ್ರಮ ಕೈಗೊಂಡಿದೆ ಎಂದು ವಿವರಿಸಿದ್ದಾರೆ.

ಮೋಸಗಾರರು “ದೆಹಲಿ ಪೊಲೀಸ್”, “ಮುಂಬೈ HQ”, “CBI”, “ATS Department” ಇತ್ಯಾದಿ ಹೆಸರುಗಳನ್ನು ಬಳಸಿ, ಅಧಿಕೃತ ಲೋಗೋಗಳನ್ನು ಪ್ರೊಫೈಲ್ ಫೋಟೋಗಳಾಗಿ ಇಟ್ಟುಕೊಂಡು ಜನರನ್ನು ಬೆದರಿಸುತ್ತಿದ್ದರು. ಸುಳ್ಳು ಸಹಿ ಮತ್ತು ಸೀಲ್‌ಗಳನ್ನು ಬಳಸಿ ಹಣ ವಸೂಲಿ ಮಾಡುತ್ತಿದ್ದರು. ಸರ್ಕಾರಿ ಏಜೆನ್ಸಿಗಳು ಗುರುತಿಸಿದ ಸುಮಾರು 3,800 ಖಾತೆಗಳಿಗಿಂತ ಹೆಚ್ಚು ಖಾತೆಗಳ ವಿರುದ್ಧ ವಾಟ್ಸಪ್ ಕ್ರಮ ತೆಗೆದುಕೊಂಡಿದೆ.

ಲೋಗೋ ಮ್ಯಾಚಿಂಗ್ ಸಿಸ್ಟಂ, ಡಿಸ್‌ಪ್ಲೇ ನೇಮ್ (ಪುಷ್‌ನೇಮ್) ಲಾಗಿಂಗ್, ಸ್ಕ್ಯಾಮ್ ಪ್ಯಾಟರ್ನ್ ಗುರುತಿಸುವ ದೊಡ್ಡ ಭಾಷಾ ಮಾಡೆಲ್ ಸ್ಕ್ಯಾಮ್ ಅಸೆಟ್‌ಗಳ ಡೇಟಾಬೇಸ್ ಬಳಸಿ ಈ ಕ್ರಮ ತೆಗೆದುಕೊಂಡಿದೆ. ಪ್ರತಿ ಸಿಗ್ನಲ್ ಅನ್ನು ಒಂದು ಉದಾಹಣೆಯಾಗಿ ತೆಗೆದುಕೊಂಡು ಸಂಪೂರ್ಣ ಕ್ರೈಮ್‌ ನೆಟ್‌ವರ್ಕ್ ಅನ್ನು ಮ್ಯಾಪ್ ಮಾಡಿ, ಡಿಲೀಟ್‌ ಮಾಡುವುದಾಗಿ ವಾಟ್ಸಾಪ್ ಹೇಳಿದೆ.

ಡಿಜಿಟಲ್ ಅರೆಸ್ಟ್ ತಡೆಯಲು ವಾಟ್ಸಪ್ ಹಲವಾರು ಹೊಸ ನಿಯಮಗಳನ್ನು ನಿಯೋಜಿಸುತ್ತಿದೆ. ಇದರಲ್ಲಿ ಲೋಗೋ ಪತ್ತೆ ವ್ಯವಸ್ಥೆಯೂ ಸೇರಿದೆ. ಹೊಸದಾಗಿ ರಚಿಸಲಾದ ಅಥವಾ ಅವಧಿ ಮೀರಿದ ಖಾತೆಯಿಂದ ಬಳಕೆದಾರರಿಗೆ ಕರೆ ಬಂದಾಗ ಎಚ್ಚರಿಕೆ ನೀಡಲು ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸುವ ಬಗ್ಗೆ ಚಿಂತಿಸುತ್ತಿದೆ. ಅನುಮಾನಾಸ್ಪದ ಸಿಮ್ ಕಾರ್ಡ್‌ಗಳನ್ನು ಗುರುತಿಸಿದ 2 ರಿಂದ 3 ಗಂಟೆಗಳ ಒಳಗೆ ನಿರ್ಬಂಧಿಸುವ ಕಾರ್ಯವಿಧಾನದ ಕಡೆಗೆ ಸಮಿತಿಯು ಕೆಲಸ ಮಾಡುತ್ತಿದೆ ಎಂದು ವಾಟ್ಸಪ್ ಸ್ಪಷ್ಟಪಡಿಸಿದೆ.ಇದನ್ನೂ ಓದಿ: ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Share This Article