ಅಬ್ಬಬ್ಬಾ.. ಬೆಂಗಳೂರಿನಲ್ಲಿ ಒಂದು ಗುಂಡಿ ಮುಚ್ಚಲು 1 ಲಕ್ಷ!- ಬಯಲಾಯ್ತು ಜಿಬಿಎ ‘ದುಬಾರಿ’ ಗುಂಡಿ ಬಿಸಿನೆಸ್!

7 Min Read

– ಚಾಮರಾಜಪೇಟೆಯಲ್ಲಿ ಒಂದು ಗುಂಡಿಗೆ 1 ಲಕ್ಷ ಖರ್ಚು
– ಇದು ರಸ್ತೆ ರಿಪೇರಿಯೋ ಅಥವಾ ಚಿನ್ನದ ಲೇಪನವೋ?

ಬೆಂಗಳೂರು: ರಾಜಧಾನಿಯ ರಸ್ತೆ ಗುಂಡಿ ಮುಚ್ಚುವ ಹೆಸರಿನಲ್ಲಿ ಗ್ರೇಟರ್‌ ಬೆಂಗಳೂರು ಅಥಾರಿಟಿ(GBA) ವ್ಯಾಪ್ತಿಯಲ್ಲಿ ಕೋಟಿ ಕೋಟಿ ಹಣ ಲೂಟಿಯಾಗಿದೆಯೇ? ಒಂದೊಂದು ಗುಂಡಿ ಮುಚ್ಚಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆಯೇ? ಗುಂಡಿ(Pothole) ಮುಚ್ಚಲು ಹೋದವರು ಸರ್ಕಾರಿ ಖಜಾನೆಯನ್ನೇ ಮುಚ್ಚಿದ್ರಾ ಹೀಗೊಂದು ಪ್ರಶ್ನೆ ಎದ್ದಿದೆ.

ಹೌದು. ಬಿಜೆಪಿ ಶಾಸಕ ಅಶ್ವಥ್ ನಾರಾಯಣ (Ashwath Narayan) ಅವರು ವಿಧಾನಸಭೆಯಲ್ಲಿ ಕೇಳಿದ ಚುಕ್ಕಿ ಗುರುತಿಲ್ಲದ ಪ್ರಶ್ನೆಗೆ ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ನೀಡಿರುವ ಶಾಕಿಂಗ್‌ ಉತ್ತರದಿಂದ ಭಾರೀ ಅನುಮಾನ ವ್ಯಕ್ತವಾಗಿದೆ. ಜಿಬಿಎ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ 6 ತಿಂಗಳಲ್ಲಿ (ಸೆಪ್ಟೆಂಬರ್‌ನಿಂದ ಫೆಬ್ರವರಿವರೆಗೆ) ನಡೆದ ಕಾಮಗಾರಿಯ ಅಂಕಿ-ಅಂಶಗಳಿಂದ ʼದುಬಾರಿ’ ಗುಂಡಿ ಪುರಾಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್ – ಮನೆಯಿಂದಲೇ ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ಲಿಂಕ್ ಬಿಡುಗಡೆ

ಜಿಬಿಎ ಗುಂಡಿ ಪುರಾಣ:
ಒಟ್ಟು ಪತ್ತೆಯಾದ ಗುಂಡಿಗಳು – 41,150
ಮುಚ್ಚಲಾದ ಗುಂಡಿಗಳು – 39,887
ಖರ್ಚು ಮಾಡಿದ ಒಟ್ಟು ಹಣ – 33.85 ಕೋಟಿ ರೂ.
ಬಾಕಿ ಉಳಿದಿರುವ ಗುಂಡಿಗಳು – 1,263

ಒಂದು ಗುಂಡಿಗೆ ಒಂದು ಲಕ್ಷ:
ಈ ವರದಿಯಲ್ಲಿ ಅತ್ಯಂತ ಆಘಾತಕಾರಿ ಅಂಶವೆಂದರೆ, ಒಂದೊಂದು ಕ್ಷೇತ್ರದಲ್ಲಿ ಒಂದೊಂದು ದರದಲ್ಲಿ ಗುಂಡಿ ಮುಚ್ಚಲಾಗಿದೆ. ಕೆಲವು ಕಡೆ ಒಂದು ಗುಂಡಿ ಮುಚ್ಚಲು ವ್ಯಯಿಸಿದ ಹಣ ಕೇಳಿದರೆ ನೀವು ದಂಗಾಗೋದು ಗ್ಯಾರಂಟಿ. ಚಾಮರಾಜಪೇಟೆಯಲ್ಲಿ 1 ಲಕ್ಷ ರೂ., ಶಿವಾಜಿ ನಗರದಲ್ಲಿ 60 ಸಾವಿರ ರೂ., ಗೋವಿಂದರಾಜ ನಗರ 49 ಸಾವಿರ ರೂ., ವಿಜಯನಗರ 47 ಸಾವಿರ ರೂ., ಗಾಂಧಿ ನಗರ 31 ಸಾವಿರ ರೂ., ಆಗಿದ್ದರೆ ಶಾಂತಿನಗರ, ಪದ್ಮನಾಭನಗರ, ರಾಜಾಜಿನಗರದಲ್ಲಿ 20 ಸಾವಿರ ರೂ. ವೆಚ್ಚದಲ್ಲಿ ಗುಂಡಿಯನ್ನು ಮುಚ್ಚಲಾಗಿದೆ.

ಗುಂಡಿ ಮುಚ್ಚಿದ್ರೋ ಅಥವಾ ಚಿನ್ನ ಲೇಪಿಸಿದ್ರೋ?
ಕೇವಲ 6 ತಿಂಗಳ ಅವಧಿಯಲ್ಲಿ 33 ಕೋಟಿಗೂ ಅಧಿಕ ಹಣವನ್ನು ಗುಂಡಿ ಮುಚ್ಚಲು ಬಳಸಲಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಆದರೆ ವಾಸ್ತವದಲ್ಲಿ ರಸ್ತೆಗಳ ಸ್ಥಿತಿ ಸುಧಾರಿಸಿದೆಯೇ ಎಂಬುದು ದೊಡ್ಡ ಪ್ರಶ್ನೆ. ಚಾಮರಾಜಪೇಟೆಯಂತಹ ಕ್ಷೇತ್ರದಲ್ಲಿ ಒಂದು ಸಣ್ಣ ಗುಂಡಿ ಮುಚ್ಚಲು ಒಂದು ಲಕ್ಷ ರೂಪಾಯಿ ಖರ್ಚು ಮಾಡಿರುವುದು ಭ್ರಷ್ಟಾಚಾರದ ವಾಸನೆ ಬಡಿಯುವಂತೆ ಮಾಡಿದೆ. ಒಟ್ಟಿನಲ್ಲಿ ಜಿಬಿಎ ವ್ಯಾಪ್ತಿಯ 28 ಕ್ಷೇತ್ರಗಳಲ್ಲಿ 28 ರೀತಿಯ ಲೆಕ್ಕಾಚಾರ ತೋರಿಸುವ ಮೂಲಕ ಗುಂಡಿ ಮುಚ್ಚುವ ಪ್ರಕ್ರಿಯೆಯನ್ನು ಸರ್ಕಾರ ‘ಮಾಯಾ ಬಜಾರ್’ ಮಾಡಿಕೊಂಡಿದೆ ಎಂಬ ಆರೋಪ ಜನರಿಂದ ಕೇಳಿಬಂದಿದೆ. ಇದನ್ನೂ ಓದಿ: ಅರಿಶಿಣಪುಡಿ, ಮಸಾಲೆ ಪುಡಿಗಳಲ್ಲಿ ಸೀಸದ ಅಂಶ ಪತ್ತೆ – ಸರ್ಕಾರದಿಂದಲೇ ಅಧಿಕೃತ ಟೆಸ್ಟ್‌ಗೆ ಆದೇಶ

ಯಾವ ಕ್ಷೇತ್ರದಲ್ಲಿ ಎಷ್ಟು ಗುಂಡಿ? ಎಷ್ಟು ಖರ್ಚು?
1. ಚಾಮರಾಜಪೇಟೆ (ಅತ್ಯಂತ ದುಬಾರಿ)
ಒಟ್ಟು ಗುಂಡಿ: 150
ಮುಚ್ಚಿದ ಗುಂಡಿ: 140
ಗುಂಡಿ ಮುಚ್ಚಲು ಖರ್ಚಾದ ಹಣ: 1.40 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 1,00,000 ರೂ. (ಒಂದು ಲಕ್ಷ)

2. ಶಿವಾಜಿನಗರ
ಒಟ್ಟು ಗುಂಡಿ: 250
ಮುಚ್ಚಿದ ಗುಂಡಿ: 232
ಗುಂಡಿ ಮುಚ್ಚಲು ಖರ್ಚಾದ ಹಣ: 1.40 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 60,344 ರೂ.

3. ಗೋವಿಂದರಾಜನಗರ
ಒಟ್ಟು ಗುಂಡಿ: 374
ಮುಚ್ಚಿದ ಗುಂಡಿ: 366
ಗುಂಡಿ ಮುಚ್ಚಲು ಖರ್ಚಾದ ಹಣ: 1.80 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 49,180 ರೂ.

4. ವಿಜಯನಗರ
ಒಟ್ಟು ಗುಂಡಿ: 403
ಮುಚ್ಚಿದ ಗುಂಡಿ: 382
ಗುಂಡಿ ಮುಚ್ಚಲು ಖರ್ಚಾದ ಹಣ: 1.80 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 47,120 ರೂ.

5. ಮಹಾಲಕ್ಷ್ಮಿ ಲೇಔಟ್
ಒಟ್ಟು ಗುಂಡಿ: 438
ಮುಚ್ಚಿದ ಗುಂಡಿ: 438
ಗುಂಡಿ ಮುಚ್ಚಲು ಖರ್ಚಾದ ಹಣ: 1.60 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 36,529 ರೂ.

6. ಗಾಂಧಿ ನಗರ
ಒಟ್ಟು ಗುಂಡಿ: 450
ಮುಚ್ಚಿದ ಗುಂಡಿ: 438
ಗುಂಡಿ ಮುಚ್ಚಲು ಖರ್ಚಾದ ಹಣ: 1.40 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 31,963 ರೂ.

7. ರಾಜಾಜಿ ನಗರ
ಒಟ್ಟು ಗುಂಡಿ: 352
ಮುಚ್ಚಿದ ಗುಂಡಿ: 332
ಗುಂಡಿ ಮುಚ್ಚಲು ಖರ್ಚಾದ ಹಣ: 90 ಲಕ್ಷ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 27,108 ರೂ.

8. ದಾಸರಹಳ್ಳಿ (ಮೊದಲ ಹಂತ)
ಒಟ್ಟು ಗುಂಡಿ: 516
ಮುಚ್ಚಿದ ಗುಂಡಿ: 497
ಗುಂಡಿ ಮುಚ್ಚಲು ಖರ್ಚಾದ ಹಣ: 1.20 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 24,144 ರೂ.

9. ಪದ್ಮನಾಭನಗರ
ಒಟ್ಟು ಗುಂಡಿ: 454
ಮುಚ್ಚಿದ ಗುಂಡಿ: 452
ಗುಂಡಿ ಮುಚ್ಚಲು ಖರ್ಚಾದ ಹಣ: 1 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 22,123 ರೂ.

10. ಶಾಂತಿನಗರ
ಒಟ್ಟು ಗುಂಡಿ: 650
ಮುಚ್ಚಿದ ಗುಂಡಿ: 638
ಗುಂಡಿ ಮುಚ್ಚಲು ಖರ್ಚಾದ ಹಣ: 1.40 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 21,943 ರೂ.

11. ಸಿ.ವಿ.ರಾಮನ್ ನಗರ
ಒಟ್ಟು ಗುಂಡಿ: 715
ಮುಚ್ಚಿದ ಗುಂಡಿ: 699
ಗುಂಡಿ ಮುಚ್ಚಲು ಖರ್ಚಾದ ಹಣ: 1.40 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 20,028 ರೂ.

12. ಮಲ್ಲೇಶ್ವರಂ
ಒಟ್ಟು ಗುಂಡಿ: 745
ಮುಚ್ಚಿದ ಗುಂಡಿ: 735
ಗುಂಡಿ ಮುಚ್ಚಲು ಖರ್ಚಾದ ಹಣ: 1.40 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 19,047 ರೂ.

13. ಚಿಕ್ಕಪೇಟೆ
ಒಟ್ಟು ಗುಂಡಿ: 520
ಮುಚ್ಚಿದ ಗುಂಡಿ: 510
ಗುಂಡಿ ಮುಚ್ಚಲು ಖರ್ಚಾದ ಹಣ: 90 ಲಕ್ಷ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 17,647 ರೂ.

14. ಆರ್.ಆರ್. ನಗರ
ಒಟ್ಟು ಗುಂಡಿ: 1192
ಮುಚ್ಚಿದ ಗುಂಡಿ: 1148
ಗುಂಡಿ ಮುಚ್ಚಲು ಖರ್ಚಾದ ಹಣ: 1.85 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 16,114 ರೂ.

15. ಬಿಟಿಎಂ ಲೇಔಟ್
ಒಟ್ಟು ಗುಂಡಿ: 375
ಮುಚ್ಚಿದ ಗುಂಡಿ: 344
ಗುಂಡಿ ಮುಚ್ಚಲು ಖರ್ಚಾದ ಹಣ: 53 ಲಕ್ಷ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 15,406 ರೂ.

16. ಬಸವನಗುಡಿ
ಒಟ್ಟು ಗುಂಡಿ: 612
ಮುಚ್ಚಿದ ಗುಂಡಿ: 605
ಗುಂಡಿ ಮುಚ್ಚಲು ಖರ್ಚಾದ ಹಣ: 90 ಲಕ್ಷ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 14,876 ರೂ.

17. ಬೊಮ್ಮನಹಳ್ಳಿ
ಒಟ್ಟು ಗುಂಡಿ: 742
ಮುಚ್ಚಿದ ಗುಂಡಿ: 719
ಗುಂಡಿ ಮುಚ್ಚಲು ಖರ್ಚಾದ ಹಣ: 89 ಲಕ್ಷ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 12,378 ರೂ.

 

18. ಪುಲಕೇಶಿ ನಗರ
ಒಟ್ಟು ಗುಂಡಿ: 862
ಮುಚ್ಚಿದ ಗುಂಡಿ: 862
ಗುಂಡಿ ಮುಚ್ಚಲು ಖರ್ಚಾದ ಹಣ: 1 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 11,600 ರೂ.

19. ಸರ್ವಜ್ಞ ನಗರ
ಒಟ್ಟು ಗುಂಡಿ: 1369
ಮುಚ್ಚಿದ ಗುಂಡಿ: 1321
ಗುಂಡಿ ಮುಚ್ಚಲು ಖರ್ಚಾದ ಹಣ: 1.50 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 11,355 ರೂ.

20. ಬ್ಯಾಟರಾಯನಪುರ
ಒಟ್ಟು ಗುಂಡಿ: 1673
ಮುಚ್ಚಿದ ಗುಂಡಿ: 1352
ಗುಂಡಿ ಮುಚ್ಚಲು ಖರ್ಚಾದ ಹಣ: 1.20 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 8,888 ರೂ.

21. ಯಲಹಂಕ
ಒಟ್ಟು ಗುಂಡಿ: 380
ಮುಚ್ಚಿದ ಗುಂಡಿ: 350
ಗುಂಡಿ ಮುಚ್ಚಲು ಖರ್ಚಾದ ಹಣ: 30 ಲಕ್ಷ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 8,571 ರೂ.

22. ಬೆಂಗಳೂರು ದಕ್ಷಿಣ
ಒಟ್ಟು ಗುಂಡಿ: 2240
ಮುಚ್ಚಿದ ಗುಂಡಿ: 2151
ಗುಂಡಿ ಮುಚ್ಚಲು ಖರ್ಚಾದ ಹಣ: 1.12 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 5,209 ರೂ.

23. ಯಶವಂತಪುರ
ಒಟ್ಟು ಗುಂಡಿ: 3109
ಮುಚ್ಚಿದ ಗುಂಡಿ: 3109
ಗುಂಡಿ ಮುಚ್ಚಲು ಖರ್ಚಾದ ಹಣ: 1.60 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 5,146 ರೂ.

24. ಕೆ.ಆರ್.ಪುರಂ
ಒಟ್ಟು ಗುಂಡಿ: 1705
ಮುಚ್ಚಿದ ಗುಂಡಿ: 1473
ಗುಂಡಿ ಮುಚ್ಚಲು ಖರ್ಚಾದ ಹಣ: 70 ಲಕ್ಷ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 4,752 ರೂ.

25. ಮಹದೇವಪುರ
ಒಟ್ಟು ಗುಂಡಿ: 5635
ಮುಚ್ಚಿದ ಗುಂಡಿ: 5462
ಗುಂಡಿ ಮುಚ್ಚಲು ಖರ್ಚಾದ ಹಣ: 1.90 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 3,478 ರೂ.

26. ದಾಸರಹಳ್ಳಿ (ಎರಡನೇ ಬಾರಿ)
ಒಟ್ಟು ಗುಂಡಿ: 13150
ಮುಚ್ಚಿದ ಗುಂಡಿ: 13092
ಗುಂಡಿ ಮುಚ್ಚಲು ಖರ್ಚಾದ ಹಣ: 2.60 ಕೋಟಿ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 1,985 ರೂ.

27. ಹೆಬ್ಬಾಳ
ಒಟ್ಟು ಗುಂಡಿ: 812
ಮುಚ್ಚಿದ ಗುಂಡಿ: 812
ಗುಂಡಿ ಮುಚ್ಚಲು ಖರ್ಚಾದ ಹಣ: 10 ಲಕ್ಷ ರೂ.
ಒಂದು ಗುಂಡಿಗೆ ಸರಾಸರಿ ವೆಚ್ಚ: 1,231 ರೂ.

28. ಜಯನಗರ (ಅಚ್ಚರಿ!)
ಒಟ್ಟು ಗುಂಡಿ: 588
ಮುಚ್ಚಿದ ಗುಂಡಿ: 565
ಗುಂಡಿ ಮುಚ್ಚಲು ಖರ್ಚಾದ ಹಣ: ಶೂನ್ಯ (ಹಣ ಖರ್ಚು ಮಾಡದೇ ಗುಂಡಿ ಮುಚ್ಚಿದೆ ಜಿಬಿಎ!)
ಒಂದು ಗುಂಡಿಗೆ ಸರಾಸರಿ ವೆಚ್ಚ: 0 ರೂ.

Share This Article