ಬ್ರಹ್ಮರಕೊಟ್ಲು ಟೋಲ್‌ಗೇಟ್‌ ಬಂದ್‌: ನಾಳೆ ಬೃಹತ್‌ ಜನಾಂದೋಲನ ನಡಿಗೆ

1 Min Read

ಮಂಗಳೂರು: ಇಲ್ಲಿನ ಬ್ರಹ್ಮರಕೊಟ್ಲು (Brahmarakotlu Toll Plaza) ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಕನಿಷ್ಠ ಮೂಲ ಸೌಕರ್ಯವನ್ನೂ ನೀಡದೆ 23 ವರ್ಷಗಳಿಂದ ಕಾನೂನುಬಾಹಿರವಾಗಿ ಸುಂಕ ವಸೂಲಿ ಮಾಡುತ್ತಿರುವ ಟೋಲ್ ಗೇಟ್ ಸಂಪೂರ್ಣ ಮುಚ್ಚಲು ಆಗ್ರಹಿಸಿ ಏ.28 ರಂದು ಬೃಹತ್‌ ಜನಾಂದೋಲನ ನಡಿಗೆ ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್‌ ನಾಯಕರು, ಟೋಲ್‌ ಗೇಟ್ ತೆರವು ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಎಚ್ಚರಿಸಿದ್ದಾರೆ.

ಗುರುಪುರ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿ.ಸಿ. ರೋಡ್‌ ನಾರಾಯಣಗುರು ವೃತ್ತದಿಂದ ಬ್ರಹ್ಮರಕೂಟ್ಲು ಟೋಲ್‌ ಗೇಟ್‌ವರೆಗೆ ಜನಾಂದೋಲನ ನಡಿಗೆ ನಡೆಯಲಿದ್ದು, ಈ ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ ಆದೇಶಕ್ಕೆ 6 ತಿಂಗಳ ಬ್ರೇಕ್ ಹಾಕಿದ `ಮಹಾ’ ಸರ್ಕಾರ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಎಚ್ಚೆತ್ತು ಈ ಟೋಲ್ ಸಂಗ್ರಹಕ್ಕೆ ಸಂಬಂಧಪಟ್ಟಂತೆ ನಿಯಮಾವಳಿ ಉಲ್ಲಂಘನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನುಬಾಹಿರವಾಗಿ ಸುಂಕ ವಸೂಲಾತಿ ಶಾಶ್ವತ ಮುಚ್ಚುವ ತನಕ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗುರುಪುರ ಕಾಂಗ್ರೆಸ್‌ ಅಧ್ಯಕ್ಷ ಬಿ.ಎಲ್.ಪಿ. ಪದ್ಮನಾಭ ಕೋಟ್ಯಾನ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಕೆಪಿಸಿಸಿ ಸದಸ್ಯ ಆರ್.ಕೆ.ಪೃಥ್ವಿರಾಜ್‌, ಬುಡಾ ಅಧ್ಯಕ್ಷ ಬೇಬಿ ಕುಂದರ್, ಕೃಷ್ಣ ಅಮೀನ್, ಭಾಷ ಗುರುಪುರ, ಮೊಹಮ್ಮದ್ ಉಂಙ, ಅಬ್ದುಲ್ ಮಜೀದ್ ಸೂರಲ್ಪಾಡಿ, ಗಣೇಶ್ ಪೂಜಾರಿ, ಮಾಲತಿ ಗಂಜೀಮಠ, ಯಶವಂತ ಶೆಟ್ಟಿ, ಸುನೀಲ್ ಪೂಜಾರಿ, ಜಯಂತಿ ವಾಮಂಜೂರು, ಭಾಷ ಮಾಸ್ಟರ್, ಚಂದ್ರಹಾಸ ಶೆಟ್ಟಿ, ದಯಾನಂದ ಶೆಟ್ಟಿ, ಶರೀಫ್ ಕನ್ನಿಬೆಟ್ಟು, ರೊನಾಲ್ಡ್ ಅಡ್ಯಾರ್, ಕೀರ್ತಿರಾಜ್, ಶ್ರೀಧರ್, ಮೋಹನ್ ಕರ್ಕೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article