ಆರ್‌ಸಿಬಿ ವಿರುದ್ಧ ಶತಕ ಸಿಡಿಸಿ ಕ್ರಿಸ್ ಗೇಲ್ ದಾಖಲೆ ಮುರಿದ ಸಾಯಿ ಸುದರ್ಶನ್

1 Min Read

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್‌ನ ಆರಂಭಿಕ ಆಟಗಾರ ಸಾಯಿ ಸುದರ್ಶನ್ (Sai Sudharsan) ಶತಕ ಸಿಡಿಸಿದರು. ಈ ಶತಕದ ಮೂಲಕ ಐಪಿಎಲ್‌ನ (IPL) ಇನ್ನಿಂಗ್ಸ್‌ಗಳಲ್ಲಿ 2000 ರನ್‌ಗಳನ್ನು ಗಳಿಸಿದ ಅತ್ಯಂತ ವೇಗದ ಆಟಗಾರ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದರು.

57 ಎಸೆತಗಳಲ್ಲಿ ಸಾಯಿ ಸುದರ್ಶನ್‌ ಶತಕ ಪೂರೈಸಿದರು. ಗೇಲ್ 48 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಗೈದಿದ್ದರು. ಸುದರ್ಶನ್ ಕೇವಲ 47 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಇನ್ನಿಂಗ್ಸ್‌ನಲ್ಲಿ ಅತಿ ವೇಗವಾಗಿ 2000 ರನ್‌ ಗಳಿಸಿದ ಆಟಗಾರರು
ಸಾಯಿ ಸುದರ್ಶನ್ 47
ಕ್ರಿಸ್ ಗೇಲ್ 48
ಶಾನ್ ಮಾರ್ಷ್ 52
ರುತುರಾಜ್ ಗಾಯಕ್ವಾಡ್ 57
ಕೆಎಲ್ ರಾಹುಲ್ 60

Share This Article