ಷೇರು ಮಾರುಕಟ್ಟೆಯಲ್ಲಿ ಲಕ್ಷ ಲಕ್ಷ ಲಾಸ್‌ – ನೇಣಿಗೆ ಶರಣಾದ ಯುವಕ

1 Min Read

ಕಾರವಾರ: ಷೇರು ಮಾರುಕಟ್ಟೆಯಲ್ಲಿ (Stock Market) ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿ ಕಳೆದುಕೊಂಡ ಯುವಕನೊಬ್ಬ ಮನನೊಂದು ನೇಣಿಗೆ ಶರಣಾದ ಘಟನೆ ಉತ್ತರಕನ್ನಡ (Uttarakannada) ಜಿಲ್ಲೆಯ ಸಿದ್ದಾಪುರದಲ್ಲಿ (Siddapura) ನಡೆದಿದೆ.

- Advertisement -

ನಗರದ ನಿವಾಸಿ ಹರ್ಷವರ್ಧನ್ (22) ನೇಣಿಗೆ ಶರಣಾದ ಯುವಕ. ಈತ ಮೊಬೈಲ್ ಮೂಲಕ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದ. ಹೀಗೆ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ. ಇದರಿಂದ ಬೇಸತ್ತು ಮನೆಯಲ್ಲೇ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಲಾಸ್ – ಮನನೊಂದು ವ್ಯಕ್ತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

- Advertisement -

- Advertisement -

ಈ ಸಂಬಂಧ ಹರ್ಷವರ್ಧನ್ ತಂದೆ ಚಂದ್ರಶೇಖರ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್‌ ಎಫೆಕ್ಟ್‌ – ಯುನೈಟೆಡ್ ಬ್ರಿವರೀಸ್, ಯುನೈಟೆಡ್ ಸ್ಪಿರಿಟ್ಸ್ ಷೇರು ದಿಢೀರ್‌ ಭಾರೀ ಏರಿಕೆ

- Advertisement -

Share This Article