ಚೆನ್ನೈ: ಐಪಿಎಲ್ 2026ರ (IPL 2026) ಆವೃತ್ತಿ ಮಧ್ಯೆ ಸಿಎಸ್‌ಕೆ (CSK) ಸ್ಟಾರ್ ಬೌಲರ್ ಮುಖೇಶ್ ಚೌಧರಿ (Mukesh Chowdary) ಅವರ ತಾಯಿ ನಿಧನರಾಗಿದ್ದಾರೆ.

ಕಳೆದ ಒಂದು ವರ್ಷದಿಂದ ಅನಾರೋಗ್ಯದ ಬಳಲುತ್ತಿದ್ದ ತಾಯಿ ಪ್ರೇಮ್ ದೇವಿ ಅವರು ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ (ಏ.21) ನಿಧನರಾಗಿದ್ದಾರೆ. ಇದನ್ನೂ ಓದಿ: ಜಡೇಜಾ ಜಾದೂ – ತವರಲ್ಲೇ ಜೈಂಟ್ಸ್ ಕೆಡವಿ ಆರ್‌ಸಿಬಿ ಹಿಂದಿಕ್ಕಿದ ರಾಯಲ್ಸ್


ಮೂಲಗಳ ಪ್ರಕಾರ, ಶನಿವಾರ (ಏ.18) ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸಿಎಸ್‌ಕೆ ಪಂದ್ಯದ ನಂತರ ಮುಖೇಶ್ ಚೌಧರಿ ಅವರು ರಾಜಸ್ಥಾನದ ಭಿಲ್ವಾರಾದ ತಮ್ಮ ಊರಿಗೆ ತೆರಳಿದರು. ಬಳಿಕ ಅಣ್ಣ ಡಾ. ರಾಜೇಶ್ ಚೌಧರಿ ಅವರೊಂದಿಗೆ ಸೇರಿ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.

The CSK family mourns the passing of Mukesh Choudhary’s mother.
We stand with Mukesh and his family, keeping them in our thoughts and prayers during this incredibly difficult time.
— Chennai Super Kings (@ChennaiIPL) April 23, 2026
ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮುಖೇಶ್ ಚೌಧರಿ ಅವರ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದೆ. ಈ ನೋವಿನ ಸಂದರ್ಭದಲ್ಲಿ ಮುಖೇಶ್ ಮತ್ತು ಅವರ ಕುಟುಂಬದೊಂದಿಗೆ ನಾವಿರುತ್ತೇವೆ ಎಂದು ಬರೆದುಕೊಂಡಿದೆ.
ಈ ಆವೃತ್ತಿಯಲ್ಲಿ ಈವರೆಗೆ ಮುಖೇಶ್ ಚೌಧರಿ ಒಂದೇ ಒಂದು ಪಂದ್ಯವನ್ನು ಆಡಿದ್ದು, ಮುಂಬೈ ವಿರುದ್ಧದ ಪಂದ್ಯದ ಬಳಿಕ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎನ್ನಲಾಗಿದೆ. ಇದನ್ನೂ ಓದಿ: ಏನಿದು ಐಪಿಎಲ್ ಲೋನ್ ನಿಯಮ – ಆರ್‌ಸಿಬಿ ಆಟಗಾರ ಟೂರ್ನಿ ಮಧ್ಯೆಯೇ ಸಿಎಸ್‌ಕೆ ಪರ ಆಡೋಕೆ ಸಾಧ್ಯನಾ?

