ಕತ್ತು ಸೀಳಿ ನಿವೃತ್ತ ಆರ್‌ಬಿಐ ಅಧಿಕಾರಿಯ ಬರ್ಬರ ಹತ್ಯೆ

2 Min Read

ನೆರೆಮನೆಯವರ ಪಾತ್ರವಿದೆ ಎಂದು ಕುಟುಂಬಸ್ಥರ ಆರೋಪ

ನವದೆಹಲಿ: ಕತ್ತು ಸೀಳಿ ನಿವೃತ್ತ ಆರ್‌ಬಿಐ ಅಧಿಕಾರಿಯನ್ನು (RBI Officer) ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ (Newdelhi) ಪಂಚಕುಯಿಯನ್ ಪ್ರದೇಶದಲ್ಲಿ ನಡೆದಿದೆ.

ಮಾಧೋ ರಾಮ್ ಕೊಲೆಯಾದ ಅಧಿಕಾರಿ. ಎರಡು ವರ್ಷಗಳ ಹಿಂದೆ ಆರ್‌ಬಿಐ ಅಧಿಕಾರಿ ಹುದ್ದೆಯಿಂದ ನಿವೃತ್ತಿ ಹೊಂದ್ದಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಿಲ್ಲದ ಮಧ್ಯಪ್ರಾಚ್ಯ ಸಂಘರ್ಷ – ಭಾರತದಲ್ಲಿ LPG ಬಳಕೆ 13% ಕುಸಿತ

ಕುಟುಂಬಸ್ಥರ ಮಾಹಿತಿ ಪ್ರಕಾರ, ಮೃತರ ಪತ್ನಿ ಸೀಮಾಪುರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಮನೆಯಲ್ಲಿ ಮೃತ ವ್ಯಕ್ತಿ ಒಬ್ಬರೇ ಇದ್ದಾಗ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದರು.

ಮೃತರ ಮಗಳು ಶಿವಾನಿ ಮಾತನಾಡಿ, ನಾನು ನೆಲಮಹಡಿಯಲ್ಲಿದ್ದೆ. ಅಕ್ಕಪಕ್ಕದ ಮನೆಯವರು ನನ್ನನ್ನು ಎಬ್ಬಿಸಿದ್ದರು. ಬಳಿಕ ಮೇಲಕ್ಕೆ ಓಡಿ ಹೋದಾಗ ನನ್ನ ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕುತ್ತಿಗೆಯಿಂದ ರಕ್ತ ಬರುತ್ತಿತ್ತು. ನೋಡೋಕೆ ಆಗಲಿಲ್ಲ ಎಂದು ಭಾವುಕರಾದರು.ಇದನ್ನೂ ಓದಿ: ರಾಜ್ಯಸಭಾ ಕಾರ್ಯದರ್ಶಿಯಾಗಿ ಕೋಲಾರದ ಸೋಮಶೇಖರ್‌ ನೇಮಕ – ಪ್ರತಿಷ್ಠಿತ ಸ್ಥಾನಕ್ಕೇರಿದ ಕರ್ನಾಟಕದ ಮೊದಲ ಅಧಿಕಾರಿ

ನೆರೆಮನೆಯವರ ಪಾತ್ರವಿದೆ ಎಂದು ಕುಟುಂಬಸ್ಥರ ಆರೋಪ:
ಮೃತರ ಪತ್ನಿ ಉಷಾ ಅವರ ಪ್ರಕಾರ, ನಾನು ಕಾರ್ಯಕ್ರಮಕ್ಕಾಗಿ ಮನೆಯಿಂದ ಹೊರಡುವ ಮುನ್ನ ನನ್ನ ಪತಿಯನ್ನು ಕೊನೆಯ ಬಾರಿ ಶಂಕಿತ ವ್ಯಕ್ತಿಯ ಜೊತೆಗೆ ನೋಡಿದ್ದೆ. ಹೀಗಾಗಿ ನೆರೆಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹೊರಡುವ ಮೊದಲು ನಾನು ಗಂಡನ ಬಳಿ ಹಣ ತೆಗೆದುಕೊಳ್ಳುತ್ತಿದ್ದೆ. ಆಗ ಆ ವ್ಯಕ್ತಿ ಅಲ್ಲಿಯೇ ಕುಳಿತಿದ್ದ. ಜೊತೆಗೆ ಕುಡಿಯಲು ನೀರು ಕೇಳಿದ್ದ. ಆದರೆ ನಾನು ಹೋದ ಬಳಿಕ ಕೊಲೆ ಮಾಡುತ್ತಾನೆ ಎಂದುಕೊಂಡಿರಲಿಲ್ಲ. ಆ ವ್ಯಕ್ತಿ ಚಿನ್ನದ ಸರ, ಉಂಗುರ ಹಾಗೂ ಹಣದ ಮೇಲೆ ಕಣ್ಣಿಟ್ಟಿದ್ದ. ಆದರೆ ಅದನ್ನೆಲ್ಲ ಕೇಳಿದ್ದರೆ ನನ್ನ ಪತಿ ಕೊಡುತ್ತಿದ್ದರು. ಅದರ ಬದಲು ಕೊಲೆ ಮಾಡಿದ್ದಾನೆ ಎಂದು ಆಕ್ರೋಶ ಹೊರಹಾಕಿದರು.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ತನಿಖೆ ಆರಂಭಸಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧಕಾರ್ಯ ನಡೆದಿದೆ.ಇದನ್ನೂ ಓದಿ: ರಾಜ್ಯಕ್ಕೆ ಬಂದಾಗ ಸಿಎಂ ಕಿವಿಯಲ್ಲಿ ಮೋದಿ ಹೇಳಿದ್ದೇನು?- ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

Share This Article