ಬಿಹಾರದಲ್ಲಿ ಮತ್ತೊಂದು ಏರ್‌ಪೋರ್ಟ್‌ ನಿರ್ಮಾಣ – ಶೀಘ್ರದಲ್ಲೇ ವಿಮಾನ ಸೇವೆ ಆರಂಭ

1 Min Read

ಪಾಟ್ನಾ: ಗಯಾ, ಪಾಟ್ನಾ, ಮುಜಾಫರ್‌ಪುರ, ದರ್ಭಾಂಗಾ ಮುಂತಾದ ನಗರಗಳಲ್ಲಿ ಪ್ರಮುಖ ವಿಮಾನ ನಿಲ್ದಾಣಗಳನ್ನು ಹೊಂದಿರುವ ಬಿಹಾರದಲ್ಲಿ ಮತ್ತೊಂದು ವಿಮಾನ ನಿಲ್ದಾಣ ತಲೆ ಎತ್ತುತ್ತಿದೆ. ಇಲ್ಲಿನ ಪಟಾಹಿ ಯಲ್ಲಿ ಏರ್‌ಪೋರ್ಟ್‌ (Patahi Airport) ನಿರ್ಮಾಣ ಪ್ರಕ್ರಿಯೆ ಶುರುವಾಗಿದ್ದು, ಶೀಘ್ರದಲ್ಲೇ ವಿಮಾನ ಸೇವೆಗಳು ಆರಂಭವಾಗಲಿದೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಸಚಿವ ಡಾ. ರಾಜಭೂಷಣ್ ಚೌಧರಿ (Raj Bhushan Choudhary) ತಿಳಿಸಿದ್ದಾರೆ.

ಪಟಾಹಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಈಗಾಗಲೇ ಕೇಂದ್ರ ವಿಮಾನಯಾನ ಸಚಿವ ರಾಮ್‌ ಮನೋಹರ್‌ ನಾಯ್ಡು ಅವರನ್ನ ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಹೊಸ ವಿಮಾನ ನಿಲ್ದಾಣ ನಿರ್ಮಾಣದ ಜೊತೆಗೆ ಹಳೇ ಏರ್‌ಪೋರ್ಟ್‌ಗಳ ನವೀಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕಾರ್ಯವಿಧಾನಗಳನ್ನ ಶೀಘ್ರದಲ್ಲೇ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಈ ಏರ್‌ಪೋರ್ಟ್‌ ನಿರ್ಮಾಣ ಬಳಿಕ ಲಘು ವಿಮಾನ ಸೇವೆಗಳು ಇಲ್ಲಿಂದ ಶುರುವಾಗಲಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಇಲ್ಲಿ ತರಬೇತಿ ಕೇಂದ್ರ ಸಹ ತೆರೆಯಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (Airports Authority of India) ಕ್ರಮ ಕೈಗೊಳ್ಳುತ್ತಿದ್ದು, ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ನರಮೇಧಕ್ಕೆ 1 ವರ್ಷ – ಪ್ರವಾಸಿಗರ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

ಟೆಂಡರ್‌ ಪ್ರಕ್ರಿಯೆ ಪೂರ್ಣ
ಪಟಾಹಿ ಏರ್‌ಪೋರ್ಟ್‌ ವಿಮಾನ ನಿಲ್ದಾಣದ ಟೆಂಡರ್‌ ಈಗಾಗಲೇ ಅಂತಿಮವಾಗಿದೆ. ಮಾ.18 ರಂದು ದೆಹಲಿಯಲ್ಲಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕಚೇರಿಯಲ್ಲಿ ಡೆಂಟರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಪೂರ್ಣಿಯಾದಲ್ಲಿರುವ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿದೆ.

ಹೊಸ ಏರ್‌ಪೋರ್ಟ್‌ ನಿರ್ಮಿಸುವ ಜೊತೆಗೆ 43 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನೆರವೇರಲಿವೆ. ಇದರಲ್ಲಿ ರನ್‌ವೇ, ಟ್ಯಾಕ್ಸಿವೇ, ಪಾರ್ಕಿಂಗ್, ಕಚೇರಿಗಳು ಮತ್ತು ಇತರ ಯೋಜನೆಗಳ ನಿರ್ಮಾಣವೂ ಸೇರಿದೆ. ಇದನ್ನೂ ಓದಿ: ಕಾಂಗ್ರೆಸ್‌ ಜೊತೆ ಸೇರಿ ಟಿಎಂಸಿ ಪಿತೂರಿ, ಬಂಗಾಳದ ಮಹಿಳೆಯರಿಗೆ ಮತ್ತೆ ದ್ರೋಹ: ಮೋದಿ ವಾಗ್ದಾಳಿ

Share This Article