ಅರೆಬೈಲ್ ಘಟ್ಟದಲ್ಲಿ ಚಾಲಕನ ಸಮೇತ ಕಾರು ಸುಟ್ಟ ಕೇಸ್ – ಹ‌ತ್ಯೆ ಮಾಡಿದ ಮೂವರ ಬಂಧನ

1 Min Read

ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರಿನ ಸಮೇತ ಚಾಲಕನನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 8 ರಂದು ಕಾರು ಸುಟ್ಟುಹೋಗಿ ಚಾಲಕ ಸಾವು ಕಂಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಬೆಳಗಾವಿ ಮೂಲದ ಮೋಸ್ಟ್ ವಾಂಟೆಂಡ್ ಆರೋಪಿ ನಿತೀಶ್ ಡಾಪಳೆ ಕೊಲೆಯಾದ ದುರ್ದೈವಿ. ಆತನ ಸಹಚರರಾದ ಮೂವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಘಾಟ್‌ನಲ್ಲಿ ಟಿಟಿ ವಾಹನ ಪಲ್ಟಿ – ಪ್ರವಾಸಕ್ಕೆ ಹೋಗಿದ್ದ ಒಂದೇ ಶಾಲೆಯ ಸಿಬ್ಬಂದಿ, ಶಿಕ್ಷಕರು ಸೇರಿ 9 ಮಂದಿ ಸಾವು

50 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ನಿತೀಶ್ ಡಾಪಳೆಯನ್ನು ಆತನ ಆರು ಜನ ಸಹಚರರು ಹುಬ್ಬಳ್ಳಿಯಲ್ಲಿ ಕೊಲೆ ಮಾಡಿದ್ದು, ನಂತರ ಯಲ್ಲಾಪುರದ ಅರೆಬೈಲ್ ಘಟ್ಟಕ್ಕೆ ತಂದು ಕಾರು ಸಮೇತ ಅಪಘಾತ ರೀತಿಯಲ್ಲಿ ಸುಟ್ಟು ಹಾಕಿದ್ದರು.

ಮೊದಲು ಅಪಘಾತದಲ್ಲಿ ಸಾವು ಎಂದು ಯಲ್ಲಾಪುರ ಪೊಲೀಸರು ದೂರು ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿದಾಗ ಹತ್ಯೆಯಾಗಿರುವುದು ಬಯಲಿಗೆ ಬಂದಿದೆ. ತಕ್ಷಣ ತನಿಖೆ ಕೈಗೊಂಡ ಪೊಲೀಸರು ಹುಬ್ಬಳ್ಳಿ ಮೂಲದ ನಯೀಮ್ ಮೌಲಾ, ದಾದಾ ಪೀರ್, ಸೋಯಬ್ ಮೂವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡ ಶಾನು, ಜಮೀರ್ ಹಾಗೂ ಆಯುಬ್ ಮೂವರಿಗಾಗಿ ಯಲ್ಲಾಪುರ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ. ಇದನ್ನೂ ಓದಿ: ನಾಸಿಕ್‌ ಸ್ವಯಂಘೋಷಿತ ದೇವಮಾನವನ ಆಪ್ತ ಸಹಾಯಕ, ಆತನ ಪತ್ನಿ ಅಪಘಾತದಲ್ಲಿ ದುರ್ಮರಣ

Share This Article