– ರಾಘವ್ ಚಡ್ಡಾ ಬದಲಿಗೆ ಉಪನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ ಪರಿಶೀಲನೆ
ಅಮೃತಸರ: ಆಮ್ ಆದ್ಮಿ ಪಕ್ಷದ (AAP) ರಾಜ್ಯಸಭಾ ಸಂಸದ ಮತ್ತು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಸಂಸ್ಥಾಪಕ-ಚಾನ್ಸಲರ್ ಅಶೋಕ್ ಮಿತ್ತಲ್ (Ashok Mittal) ಅವರಿಗೆ ಸೇರಿದ ವಿವಿಧ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಉಲ್ಲಂಘನೆಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ದಾಳಿ ನಡೆಸಲಾಗಿದೆ. ಪಂಜಾಬ್ನ ಜಲಂಧರ್, ಫಗ್ವಾರಾ ಮತ್ತು ಹರಿಯಾಣದ ಗುರುಗ್ರಾಮ್ನ ಸುಮಾರು 8 ರಿಂದ 10 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯ ನಡೆದಿದೆ. ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕ್ಯಾಂಪಸ್ ಮಾತ್ರವಲ್ಲದೆ, ಈ ಸಮೂಹಕ್ಕೆ ಸೇರಿದ ಲವ್ಲಿ ಆಟೋಸ್, ಲವ್ಲಿ ಸ್ವೀಟ್ಸ್, ಮತ್ತು ಗುರುಗ್ರಾಮ್ನಲ್ಲಿರುವ ಟೆಟರ್ ಕಾಲೇಜ್ ಆಫ್ ಬಿಸಿನೆಸ್ ಹಾಗೂ ಮಾಸ್ಟರ್ಸ್ ಯೂನಿಯನ್ ಕಾಲೇಜ್ ಆಫ್ ಬಿಸಿನೆಸ್ ಸಂಸ್ಥೆಗಳ ಮೇಲೆಯೂ ದಾಳಿ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲೇ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ದಾಖಲು – ಆರೆಂಜ್ ಅಲರ್ಟ್ ಘೋಷಣೆ
ಸಂಸದ ಅಶೋಕ್ ಮಿತ್ತಲ್ ಅವರ ಮನೆ ಮತ್ತು ಅವರ ಸಹೋದರರಾದ ರಮೇಶ್ ಹಾಗೂ ನರೇಶ್ ಮಿತ್ತಲ್ ಅವರ ಮನೆಗಳ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಪ್ರಸ್ತುತ ಹಣಕಾಸಿನ ದಾಖಲೆಗಳು ಮತ್ತು ವಿದೇಶಿ ವಹಿವಾಟುಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಬೆಳವಣಿಗೆಯು ಅಶೋಕ್ ಮಿತ್ತಲ್ ಅವರು ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರ ಬದಲಿಗೆ ಎಎಪಿ ಉಪನಾಯಕರಾಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ನಡೆದಿದೆ. ಇದನ್ನೂ ಓದಿ: 20,400 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತು ಭಾರತಕ್ಕೆ ಬಂದ ʻಜಗ ವಿಕ್ರಮ್’ ಟ್ಯಾಂಕರ್
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಈ ಕ್ರಮವನ್ನು ಖಂಡಿಸಿದ್ದು, ಇದು ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ಮಾಡುತ್ತಿರುವ ರಾಜಕೀಯ ದ್ವೇಷದ ದಾಳಿ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಡಿಎಂಕೆ ಹಾಗೂ ಮಿತ್ರಪಕ್ಷಗಳಿಗೆ ಮೂರನೇ ಎರಡರಷ್ಟು ಸ್ಥಾನಗಳ ಸುಲಭ ಬಹುಮತ: ಡಿಕೆಶಿ

