20,400 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತು ಭಾರತಕ್ಕೆ ಬಂದ ʻಜಗ ವಿಕ್ರಮ್’ ಟ್ಯಾಂಕರ್‌

1 Min Read

ಗಾಂಧಿನಗರ: 20,400 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತ ಭಾರತದ ಹಡಗು (Indian LPG Vesse) ʻಜಗ ವಿಕ್ರಮ್’ (Jag Vikram) ಯಶಸ್ವಿಯಾಗಿ ಗುಜರಾತ್‌ನ ಕಾಂಡ್ಲಾ (Kandla) ಬಂದರಿಗೆ ಬಂದು ತಲುಪಿದೆ. ಅಮೆರಿಕ ಮತ್ತು ಇರಾನ್ ನಡುವಿನ ಇತ್ತೀಚಿನ ಕದನ ವಿರಾಮದ ಮಾತುಕತೆ ನಂತರ ಜಲಸಂಧಿಯನ್ನು ದಾಟಿ ಬಂದ ಭಾರತದ ಮೊದಲ ಹಡಗು ಇದಾಗಿದೆ.

ಜಗ ವಿಕ್ರಮ್ ಸುರಕ್ಷಿತವಾಗಿ ಹಾರ್ಮುಜ್ (Hormuz) ಜಲಸಂಧಿಯನ್ನು ದಾಟಿದ 9ನೇ ಹಡಗಾಗಿದೆ. ಮುಂಬೈ ಮೂಲದ ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಕಂಪನಿ ಮಾಲೀಕತ್ವದ ಈ ಹಡಗು ಮಧ್ಯಮ ಗಾತ್ರದ್ದಾಗಿದೆ. ಈ ಹಡಗು 20,400 ಟನ್ ಸಾಮರ್ಥ್ಯದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಾಗಾಣಿಕೆಯ ಸಾಮರ್ಥ್ಯ ಹೊಂದಿದೆ. ಈ ಹಡಗಿನಲ್ಲಿ 24 ಮಂದಿ ಭಾರತೀಯ ಸಿಬ್ಬಂದಿ ಇದ್ದರು. ಇದನ್ನೂ ಓದಿ: ಹಾರ್ಮುಜ್‌ ದಾಟಲು ಯತ್ನಿಸಿದ 2 ತೈಲ ಟ್ಯಾಂಕರ್‌ ತಡೆದ ಯುಎಸ್‌ ನೌಕಾಪಡೆ – ವಾಪಸ್‌ ಹೋಗುವಂತೆ ವಾರ್ನಿಂಗ್

ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗಿನ ಜಾವದ ನಡುವೆ ಹಾರ್ಮುಜ್ ಜಲಸಂಧಿಯನ್ನು ಈ ಟ್ಯಾಂಕರ್ ದಾಟಿತ್ತು. ಬಳಿಕ ಒಮಾನ್ ಕೊಲ್ಲಿಯ ಸಮೀಪದಲ್ಲಿ ಸಂಚರಿಸಿತ್ತು. ಶನಿವಾರ ಮಧ್ಯಾಹ್ನ ಪೂರ್ವ ಭಾಗದ ಜಲಸಂಧಿಯನ್ನು ದಾಟಿತ್ತು. ಇದೀಗ ಕಾಂಡ್ಲಾ ಬಂದರಿಗೆ ಈ ಹಡಗು ತಲುಪಿದೆ.

ಪರ್ಷಿಯನ್ ಕೊಲ್ಲಿಯಲ್ಲಿ ಇನ್ನೂ 15 ಭಾರತೀಯ ಹಡಗುಗಳು ಸಿಲುಕಿದ್ದು, ಅವುಗಳನ್ನು ಶೀಘ್ರದಲ್ಲೇ ತಾಯ್ನಾಡಿಗೆ ಕರೆತರಲು ವಿದೇಶಾಂಗ ಮತ್ತು ಹಡಗು ಸಚಿವಾಲಯ ಶ್ರಮಿಸುತ್ತಿದೆ. ಇದನ್ನೂ ಓದಿ: ಅಮೆರಿಕ ದಿಗ್ಭಂಧನಕ್ಕೆ ಸೆಡ್ಡು – ಹಾರ್ಮುಜ್‌ ದಾಟಿದ ಇರಾನ್‌ ಬಂದರಿನಿಂದ ಬಂದ 2 ಹಡಗು

Share This Article