ಉಡುಪಿ| ಬಾವಿಗೆ ಬಿದ್ದಿದ್ದ ಚಿರತೆ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

1 Min Read

ಉಡುಪಿ: ಕಾರ್ಕಳ (Karkala) ತಾಲೂಕಿನ ನಿಟ್ಟೆ ಸಮೀಪದ ಬೋರ್ಗಲ್ಲುಗುಡ್ಡೆ ಎಂಬಲ್ಲಿ ಬಾವಿಗೆ ಬಿದ್ದ ಚಿರತೆಯೊಂದನ್ನು (Leopard) ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಇಂದು ಬೆಳಗ್ಗೆ ಎದ್ದಾಗ ವಾಸದ ಮನೆಗಳಿರುವ ಕಾಲೊನಿಯಲ್ಲಿ ಬಾವಿಯೊಳಗೆ ಚಿರತೆ ಪತ್ತೆಯಾಗಿತ್ತು. ಬಾವಿಯ ಪೈಪು ಹಿಡಿದು ಚಿರತೆ ಘರ್ಜಿಸುತ್ತಿತ್ತು. ಚಿರತೆಯು ಆಹಾರ ಅರಸಿ ಸ್ಥಳೀಯ ಮನೆಗೆ ಬಂದಿದೆ. ಈ ವೇಳೆ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ವಿಜಯನಗರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ – ಪಪ್ಪಾಯ ಬೆಳೆ ಸಂಪೂರ್ಣ ನಾಶ

ಬಾವಿಯಲ್ಲಿ ಚಿರತೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ರುತ್ರನ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್ ಮಾರ್ಗದರ್ಶನದಂತೆ ಚಂದ್ರಕಾಂತ್ ಕರುಣಾಕರ್, ಗಸ್ತು ಅರಣ್ಯಪಾಲಕ ಸುರೇಶ್ ಮತ್ತು ಸ್ಥಳೀಯರ ಸಹಕಾರದೊಂದಿಗೆ ಬಾವಿಗೆ ಬಿದ್ದ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.

ಈ ಭಾಗದಲ್ಲಿ ಅನೇಕ ದಿನಗಳಿಂದ ಚಿರತೆಯ ಕಾಟವಿದ್ದು, ಜನರು ಓಡಾಡಲು ಭಯಪಡುತ್ತಿದ್ದರು. ಇದೀಗ ರಕ್ಷಿಸಲಾದ ಚಿರತೆಯನ್ನು ಕಾಡಿಗೆ ಬಿಡಲಾಗಿದೆ. ಇದನ್ನೂ ಓದಿ: ಕಾರು, ಟಿಪ್ಪರ್ ನಡುವೆ ಡಿಕ್ಕಿ – ಕೇರಳ ಮೂಲದ ಇಬ್ಬರು ಸಾವು

Share This Article