ಫೋನ್‌ ಬಳಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ರೋಮಿ – RR ವ್ಯವಸ್ಥಾಪಕನಿಗೆ ಬಿಸಿಸಿಐ ನೋಟಿಸ್‌; ಕಾಡ್ತಿದೆಯಾ ಬ್ಯಾನ್‌ ಭೀತಿ?

3 Min Read

– ಮ್ಯಾಚ್‌ ಫಿಕ್ಸಿಂಗ್‌ನಲ್ಲಿ 2 ವರ್ಷ ಬ್ಯಾನ್‌ ಆಗಿದ್ದ ಫ್ರಾಂಚೈಸಿ

ಗುವಾಹಟಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ ಏಪ್ರಿಲ್‌ 10 ರಂದು ನಡೆದ ಪಂದ್ಯದ ವೇಳೆ ಸಿಬ್ಬಂದಿ ಮಾಡಿದ ಯಡವಟ್ಟು ಈಗ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ಫ್ರಾಂಚೈಸಿಯನ್ನ ಸಂಕಟಕ್ಕೆ ಸಿಲುಕಿಸಿದೆ. ಆರ್‌ಆರ್‌ ಫ್ರಾಂಚೈಸಿ ವ್ಯವಸ್ಥಾಪಕ ರೋಮಿ ಭಿಂದರ್‌ಗೆ ಭ್ರಷ್ಟಾಚಾರಾ ವಿರೋಧಿ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನೋಟಿಸ್‌ ಜಾರಿಗೊಳಿಸಿದೆ.

ಹೌದು. ರಾಯಲ್ಸ್ ಫ್ರಾಂಚೈಸಿಯ ವ್ಯವಸ್ಥಾಪಕ ಭಿಂದರ್‌ ಮೊಬೈಲ್ ಫೋನ್ (Mobile Phone) ಬಳಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದ್ದವು. ಇದನ್ನ ಸೂಕ್ಷ್ಮವಾಗಿ ಪರಿಗಣಿಸಿರುವ ಬಿಸಿಸಿಐ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ. ಇದನ್ನೂ ಓದಿ: RCB ವಿರುದ್ಧ ಗೆದ್ದ RRಗೆ ಬಿಗ್ ಶಾಕ್ – ತಂಡದ ಮೇಲೆ ಶಿಸ್ತುಕ್ರಮದ ತೂಗುಗತ್ತಿ

mobile phones are not allowed during matches in the Indian Premier League Rajasthan Royals were seen breaking the rule and using a mobile phone during the match

ಏನಾಗಿತ್ತು?
ಏಪ್ರಿಲ್‌ 10 ರಂದು ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ‌ ರಾಜಸ್ಥಾನ್‌ ರಾಯಲ್ಸ್‌ ಭರ್ಜರಿ ಜಯ ಸಾಧಿಸಿತ್ತು. ಆದ್ರೆ ಪಂದ್ಯದ ವೇಳೆ ತನ್ನ ಬ್ಯಾಟಿಂಗ್‌ ಮುಗಿಸಿದ್ದ ವೈಭವ್‌ ಸೂರ್ಯವಂಶಿ ಜೊತೆಗೆ ಡಗೌಟ್‌ನಲ್ಲಿ ಕುಳಿತಿದ್ದಾಗ ಭಿಂದರ್‌ (Romi Bhinder) ತನ್ನ ಫೋನ್‌ ಬಳಸುತ್ತಿದ್ದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಮೊಬೈಲ್‌ ಬಳಸಲು ಅನುಮತಿ ಕೊಟ್ಟಿದ್ಯಾರು ಅಂತ ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಐಪಿಎಲ್‌ ಮಂಡಳಿಯ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕೂಡ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಕ್ರಮಕ್ಕೆ ಮುಂದಾಗಿದೆ.

ರೋಮಿ ಭಿಂದರ್ ಅವರಿಗೆ ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕ (ACSU) ನೋಟಿಸ್ ಕಳುಹಿಸಿದೆ. ಡಗೌಟ್‌ನಲ್ಲಿ ಫೋನ್‌ ಬಳಸಿದ್ದಕ್ಕೆ 48 ಗಂಟೆಗಳ ಒಳಗೆ ಕಾರಣ ತಿಳಿಸುವಂತೆ ಡೆಡ್‌ಲೈನ್‌ ನೀಡಲಾಗಿದೆ. ಅಲ್ಲದೇ ಘಟನೆ ಬಗ್ಗೆ ತನಿಖೆ ನಡೆಸಿ ಪೂರ್ಣ ವರದಿ ಸಲ್ಲಿಸುವಂತೆ IPL ಆಡಳಿತ ಮಂಡಳಿಯ ಅಧ್ಯಕ್ಷ ಅರುಣ್ ಧುಮಾಲ್ ಅವರಿಗೆ ACSU ಸೂಚಿಸಿದೆ. ಇದನ್ನೂ ಓದಿ: RCB ವಿರುದ್ಧ ಅಬ್ಬರದ ಬ್ಯಾಟಿಂಗ್ – ವೈಭವ್ ಆಟಕ್ಕೆ ವಿರಾಟ್ ಕೊಹ್ಲಿ ಮೆಚ್ಚುಗೆ

ಪ್ರಾಥಮಿಕ ಮೂಲಗಳ ಪ್ರಕಾರ, ಭಿಂದರ್‌ ಆರೋಗ್ಯೆ ಸಮಸ್ಯೆಗೆ ಸಂಬಂಧಿಸಿದ ವಿಚಾರಕ್ಕೆ ಫೋನ್‌ ಬಳಸಿರಬಹುದು ಎಂದು ತಿಳಿದುಬಂದಿದೆ. ಏಕೆಂದ್ರೆ ಫ್ರಾಂಚೈಸಿಯ ವ್ಯವಸ್ಥಾಪಕರು ಈ ಹಿಂದೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಅದರಿಂದ 10 ಕೆಜಿಗಿಂತ ಹೆಚ್ಚು ತೂಕ ಕಳೆದುಕೊಂಡಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದಾಗಿ ಅವರನ್ನು ದೀರ್ಘಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ದರಿಂದ ವೈದ್ಯಕೀಯ ಕಾರಣಗಳಿಗಾಗಿ ಭಿಂದರ್‌ಗೆ ಡಗೌಟ್‌ಗೆ ಫೋನ್‌ ಕೊಂಡೊಯ್ಯಲು ಅನುಮತಿಸಲಾಗುತ್ತಿತ್ತು. ಆದ್ರೆ ಅಲ್ಲಿ ಕುಳಿತಿರುವಾಗ ಫೋನ್‌ ಬಳಕೆಗೆ ವಿಶೇಷ ಅನುಮತಿ ಇರಲಿಲ್ಲ ಎಂದು ಹೇಳಲಾಗ್ತಿದೆ.

ಇನ್ನೂ ಭಿಂದರ್‌, ಬಾಲಕ ವೈಭವ್‌ ಸೂರ್ಯವಂಶಿ ಪಕ್ಕದಲ್ಲಿ ಕುಳಿತಾಗ ಫೋನ್‌ ತೆಗೆದ್ದು, ಮತ್ತೆ ಮ್ಯಾಚ್‌ ಫಿಕ್ಸಿಂಗ್‌ ಬಗ್ಗೆ ಪ್ರಶ್ನೆಗಳು ಕೇಳುವಂತೆ ಮಾಡಿದೆ. ಇದನ್ನೂ ಓದಿ: IPL 2026 – ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಅಂಪೈರ್ ನಿರ್ಣಯ ಕಾರಣವಾಯ್ತಾ?

ಮ್ಯಾಚ್‌ ಫಿಕ್ಸಿಂಗ್‌ನಿಂದ 2 ವರ್ಷ ಬ್ಯಾನ್‌ ಆಗಿದ್ದ ಆರ್‌ಆರ್‌
ರಾಜಸ್ಥಾನ್ ರಾಯಲ್ಸ್ (RR) ತಂಡವು 2013ರ ಐಪಿಎಲ್ ಸ್ಪಾಟ್-ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಕಾರಣ 2016 ಮತ್ತು 2017ರ ಅವಧಿಗೆ ಐಪಿಎಲ್‌ನಿಂದ ನಿಷೇಧಕ್ಕೊಳಗಾಗಿತ್ತು.

ಐಪಿಎಲ್‌ ನಿಯಮ ಹೇಳೋದೇನು?
ಐಪಿಎಲ್ ಮಾರ್ಗಸೂಚಿಗಳ ಪ್ರಕಾರ, ಭ್ರಷ್ಟಾಚಾರ ತಡೆಗಟ್ಟಲು ಡಗೌಟ್ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರು ಮತ್ತು ತಂಡದ ಸಿಬ್ಬಂದಿಗೆ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

Share This Article