ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಉನ್ನತ ಮಹಿಳಾ ನಕ್ಸಲ್ ಕಮಾಂಡರ್ ಬಲಿ

1 Min Read

ರಾಯ್ಪುರ: ಛತ್ತೀಸ್‌ಗಢದ (Chhattisgarh) ಕಂಕೇರ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ (Encounter) ಉನ್ನತ ನಕ್ಸಲ್ ಕಮಾಂಡರ್ (Maoist Leader) ಒಬ್ಬಳನ್ನು ಹತ್ಯೆಗೈಯ್ಯಲಾಗಿದೆ.

ಹತ್ಯೆಯಾದ ನಕ್ಸಲ್‌ ಕಮಾಂಡರ್‌ನ್ನು ರೂಪಿ ಎಂದು ಗುರುತಿಸಲಾಗಿದೆ. ಟೆಬೆಥಿಯಾ-ಪರ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಚ್‌ಪಲ್ಲಿ-ಅರಾಮ್‌ಜೋರಾ-ಹಿದೂರ್ ಬೆಲ್ಟ್‌ನಲ್ಲಿ ಶಸ್ತ್ರಸಜ್ಜಿತ ನಕ್ಸಲರಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಮಾಹಿತಿ ಆಧರಿಸಿ ಪೊಲೀಸ್ ಮತ್ತು ಭದ್ರತಾ ಪಡೆಗಳ ಜಂಟಿ ತಂಡ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ನಂತರ ಮಾಚ್‌ಪಲ್ಲಿ ಪ್ರದೇಶದಲ್ಲಿ ಹಠಾತ್ ಆಗಿ ಗುಂಡಿನ ದಾಳಿ ನಡೆಯಿತು. ಈ ವೇಳೆ ಭದ್ರತಾ ಪಡೆ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ತಲೆಗೆ 1 ಕೋಟಿ ಬಹುಮಾನ ಹೊಂದಿದ್ದ ಮಾವೋವಾದಿ ಸೇರಿ 15 ನಕ್ಸಲರ ಹತ್ಯೆ

ಗುಂಡಿನ ಚಕಮಕಿ ನಿಂತ ಬಳಿಕ ಎನ್‌ಕೌಂಟರ್ ನಡೆದ ಸ್ಥಳದಿಂದ ಮಹಿಳಾ ಮಾವೋವಾದಿ ಕೇಡರ್‌ ರೂಪಿ ಶವವನ್ನು ವಶಕ್ಕೆ ಪಡೆಯಲಾಗಿದೆ. ಆಕೆ ಏರಿಯಾ ಕಮಿಟಿ ಸದಸ್ಯೆ (ACM) ಶ್ರೇಣಿಯ ಮಾವೋವಾದಿ ಕಮಾಂಡರ್ ಆಗಿದ್ದಳು. 2025 ರಲ್ಲಿ ಮನ್ಪುರ್-ಮೊಹ್ಲಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಹಿರಿಯ ದಂಡಕಾರಣ್ಯ ವಿಶೇಷ ವಲಯ ಸಮಿತಿ (DKSZC) ನಾಯಕ ವಿಜಯ್ ರೆಡ್ಡಿಯ ಪತ್ನಿಯಾಗಿದ್ದಳು.

ರೂಪಿಗೆ ಶರಣಾಗಲು ಪದೇ ಪದೇ ಮನವಿ ಮಾಡಲಾಗಿತ್ತು. ಆದರೂ ನಕ್ಸಲ್‌ ಚಟವಟಿಕೆಯಲ್ಲಿ ಸಕ್ರಿಯಳಾಗಿದ್ದಳು. ಆಕೆ ಬಸ್ತಾರ್‌ನಲ್ಲಿ ಉಳಿದಿದ್ದ ಕೊನೆಯ ತೆಲುಗು ಮೂಲದ ಮಾವೋವಾದಿ ಕಾರ್ಯಕರ್ತರಲ್ಲಿ ಒಬ್ಬಳಾಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಕೇರ್ ಪ್ರದೇಶದಲ್ಲಿ ಸುಮಾರು ಹತ್ತು ಮಾವೋವಾದಿ ಕಾರ್ಯಕರ್ತರು ಇನ್ನೂ ಸಕ್ರಿಯರಾಗಿದ್ದಾರೆ. ಅವರಿಗಾಗಿ ಭದ್ರತಾ ಪಡೆ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ರೂಪಿಯ ಹತ್ಯೆ ಕುಗ್ಗುತ್ತಿರುವ ಮಾವೋವಾದಿಗಳನ್ನು ಮತ್ತಷ್ಟು ದುರ್ಬಲಗೊಳಿಸಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ನಾಲ್ವರು ಮಾವೋವಾದಿಗಳು ಬಲಿ

Share This Article