ನಮ್ಮ ಬೆಕ್ಕು ಮರಿ ಹಾಕಲು ನಿಮ್ಮ ಗಂಡು ಬೆಕ್ಕೇ ಕಾರಣ – ಮಾರಾಮಾರಿ ನಡೆಸುತ್ತಿದ್ದವರಿಗೆ ಪೊಲೀಸರು ಮಾಡಿದ್ದೇನು?

1 Min Read

ಬೆಂಗಳೂರು: ನಮ್ಮ ಬೆಕ್ಕು (Cat) ಮರಿ ಹಾಕಲು ನಿಮ್ಮ ಗಂಡು ಬೆಕ್ಕೇ ಕಾರಣ ಎಂದು ಹೆಣ್ಣು ಬೆಕ್ಕಿನ ಮಾಲೀಕರು ಗಂಡು ಬೆಕ್ಕು ಸಾಕಿದ್ದವರ ಬಳಿ ಗಲಾಟೆ ಮಾಡಿದ ಹಾಸ್ಯಮಯ ಪ್ರಕರಣ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಎರಡು ಮನೆಯ ಬೆಕ್ಕುಗಳ ‘ಲವ್ ಸ್ಟೋರಿ’ಗೆ ಇಡೀ ಏರಿಯಾ ಸಾಕ್ಷಿಯಾಗಿದ್ದು, ಕೊನೆಗೆ ಪೊಲೀಸರು (Police) ಮಧ್ಯ ಪ್ರವೇಶಿಸುವಂತಾಗಿದೆ. ನೆರೆಹೊರೆಯವರ ಎರಡು ಬೆಕ್ಕುಗಳು ಪ್ರಕೃತಿ ನಿಯಮದಂತೆ ಸೇರಿವೆ. ಇದರಿಂದ ಹೆಣ್ಣು ಬೆಕ್ಕು ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಮರಿಗಳು ಹುಟ್ಟಿದ ಕೂಡಲೇ ಸಿಟ್ಟಿಗೆದ್ದ ಹೆಣ್ಣು ಬೆಕ್ಕಿನ ಮಾಲೀಕರು, ಗಂಡು ಬೆಕ್ಕಿನ ಮಾಲೀಕರೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ನಮ್ಮ ಬೆಕ್ಕು ಮರಿ ಹಾಕಿರೊದಕ್ಕೆ ನಿಮ್ಮ ಬೇಕ್ಕೇ ಕಾರಣ. ಮರಿಗಳನ್ನ ನೀವೇ ಸಾಕಿ ಎಂದು ಮರಿಗಳನ್ನು ಗಂಡು ಬೆಕ್ಕಿನವರ ಮನೆಗೆ ಬಿಟ್ಟಿದ್ದಾರೆ. ಇದನ್ನೂ ಓದಿ: ಜಯಮೃತ್ಯುಂಜಯ ಶ್ರೀ ವಿರುದ್ಧದ ಕೇಸ್‌ಗೆ ಬಿಗ್ ಟ್ವಿಸ್ಟ್ – ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದ ಸಂತ್ರಸ್ತೆ

ಇದೇ ವಿಚಾರವಾಗಿ ಶುರುವಾದ ಜಗಳ ತಾರಕಕ್ಕೇರಿ, ಜೋರಾದ ಕಿರುಚಾಟ ಇಡೀ ಪ್ರದೇಶದ ಗಮನ ಸೆಳೆದಿದೆ. ಅಷ್ಟೇ ಅಲ್ಲದೇ ಹೆಣ್ಣು ಬೆಕ್ಕಿನ ಮನೆಯವರು ʻನಿಮ್ಮ ಮಕ್ಕಳಿಗೆ ಆಸಿಡ್ ಹಾಕುತ್ತೇವೆʼ ಎಂದು ಬೆದರಿಕೆ ಹಾಕುವ ಹಂತಕ್ಕೆ ತಲುಪಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಈ ವೇಳೆ ಗಂಡು ಬೆಕ್ಕಿನ ಮನೆಯವರು ತಕ್ಷಣವೇ 112ಕ್ಕೆ ಕರೆ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಕಡೆಯವರ ಜಗಳವನ್ನು ಬಿಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಬಳಿಕ ನಾಲ್ಕು ಬೆಕ್ಕಿನ ಮರಿಗಳಲ್ಲಿ ಎರಡೆರಡು ಬೆಕ್ಕುಗಳನ್ನು ಎರಡೂ ಮನೆಯವರಿಗೆ ಹಂಚಿ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ. ಇದನ್ನೂ ಓದಿ: ಇಬ್ಬರ ಜೊತೆ ಮದುವೆ, ಒಬ್ಬಳ ಜೊತೆ ಎಂಗೇಜ್ಮೆಂಟ್ – ಸಿಕ್ಕಿಬಿದ್ದ ಚಪಲಚನ್ನಿಗರಾಯನಿಗೆ ಪೆಟ್ಟೋ ಪೆಟ್ಟು!

Share This Article