ತನ್ನನ್ನು ಯೇಸುಕ್ರಿಸ್ತನಂತೆ ಬಿಂಬಿಸಿ ಟ್ರಂಪ್‌ ಪೋಸ್ಟ್‌ – ಜೀಸಸ್ ಶಾಂತಿಯ ಸಂಕೇತ ಎಂದ ಪೋಪ್‌ಗೆ ತಿರುಗೇಟು

1 Min Read

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್  (Donald Trump) ತಮ್ಮನ್ನು ಯೇಸುಕ್ರಿಸ್ತನಂತೆ (Jesus) ಬಿಂಬಿಸಿ ರಚಿಸಲಾದ AI ಚಿತ್ರವನ್ನು ಸಾಮಾಜಿಕ ಜಾಲತಾಣ ಟ್ರೂತ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಚಿತ್ರವನ್ನು ಪವಾಡದ ಮೂಲಕ ಯೇಸು ರೋಗಿಯೊಬ್ಬನನ್ನು ಗುಣಪಡಿಸುವ ರೀತಿ ರಚಿಸಲಾಗಿದೆ. ಚಿತ್ರದಲ್ಲಿ ಹಿಂದೆ ಅಮೆರಿಕದ ಧ್ವಜ ಹಾಗೂ ಯುದ್ಧ ವಿಮಾನಗಳು ಹಾರಾಡುವ ದೃಶ್ಯವಿದೆ. ಲಿಬರ್ಟಿ ಪ್ರತಿಮೆ ಹಾಗೂ ಹದ್ದುಗಳ ಹಾರಾಟವನ್ನು ಸಹ ಚಿತ್ರದಲ್ಲಿ ನೋಡಬಹುದಾಗಿದೆ. ಈ ಮೂಲಕ ಪೋಪ್‌ 14ನೇ ಲಿಯೋ ಅವರ ಟೀಕೆಗೆ, ಕಟುವಾಗಿ ಟ್ರಂಪ್‌ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕ-ಇರಾನ್‌ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯಾಹು 1 ಫೋನ್ ಕಾಲ್‌ ಎಲ್ಲವನ್ನ ಹಾಳುಮಾಡಿತು: ಇರಾನ್‌ ಹೊಸ ಬಾಂಬ್‌

ಪೋಪ್‌ಗೆ ತಿರುಗೇಟು
ಜೀಸಸ್ ಶಾಂತಿಯ ಸಂಕೇತ, ಅವರು ಯಾವ ಯುದ್ಧವನ್ನೂ ಬೆಂಬಲಿಸಲ್ಲ. ಯೇಸು ಬೆಂಬಲದ ಹೆಸರಿನಲ್ಲಿ ಯಾರೂ ಯುದ್ಧವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಪೋಪ್ 14ನೇ ಲಿಯೊ (Pope Leo XIV) ಹೇಳಿಕೆ ನೀಡಿದ್ದರು. ಈ ಮೂಲಕ ಧರ್ಮದ ಹೆಸರಿನಲ್ಲಿ ಯುದ್ಧ ಮಾಡುವುದನ್ನು ಪೋಪ್ ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಟ್ರಂಪ್, ಅಪರಾಧಗಳ ಕುರಿತು ಮೃದುಧೋರಣೆ ಹೊಂದಿರುವ ಪೋಪ್ ಲಿಯೋ ಅವರಿಗೆ ವಿದೇಶಾಂಗ ನೀತಿಯ ಕುರಿತು ಏನೂ ಗೊತ್ತಿಲ್ಲ. ನಾನು ಅವರ ಅಭಿಯಾನಿಯಲ್ಲ. ಅವರು ಪೋಪ್ ಆಗಿ ತಮ್ಮ ಕಾರ್ಯವನ್ನು ಮಾಡಿದರೆ ಸಾಕು ಎಂದಿದ್ದರು.

ಶ್ವೇತಭವನ ಹಾಗೂ ವ್ಯಾಟಿಕನ್‌ ನಡುವೆ ಸಂಬಂಧ ಹದಗೆಟ್ಟಿರುವ ಹೊತ್ತಲ್ಲಿ ಟ್ರಂಪ್ ಪೋಸ್ಟ್‌ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಇರಾನ್‌ ಜೊತೆಗಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಶೇ.11 ರಷ್ಟು ಏರಿಕೆ

Share This Article