ಗದಗ: ನಾನು ನಾಲ್ಕು ಬಾರಿ ಶಾಸಕನಾಗಿದ್ದೆನೆ, ನನಗೂ ಸಚಿವ ಸ್ಥಾನ ಬೇಕು ಎಂದು ಜಿಲ್ಲೆ ರೋಣ ಕ್ಷೇತ್ರದ ಹಿರಿಯ ಶಾಸಕ ಜಿ.ಎಸ್ ಪಾಟೀಲ (GS Patil) ಆಗ್ರಹಿಸಿದರು. 8 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, 4 ಬಾರಿ ಆಯ್ಕೆ ಆಗಿದ್ದೇನೆ. ನನಗೆ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ಗೆ ಕೇಳುತ್ತೆನೆ, ಅದಕ್ಕಾಗಿ ದೆಹಲಿಗೆ ಹೋಗ್ತಾಯಿದ್ದೇನೆ ಎಂದರು.
ಇಂದು ಹುಬ್ಬಳ್ಳಿಯಿಂದ (Hubballi) ದೆಹಲಿಗೆ ಪ್ರಯಾಣ ಬೆಳಸಿದರು. ಈ ವೇಳೆ ಮಾತನಾಡಿದ ಅವರು, ಹಿರಿಯ ಶಾಸಕರ ಕೂಡಾ ಬರ್ತಾರೆ. ಎರಡೂವರೆ ವರ್ಷ ಪೂರೈಸಿದವರನ್ನ ಬದಲಾವಣೆ ಮಾಡಬೇಕು. ಇನ್ನುಳಿದ ಹಿರಿಯ ಶಾಸಕರನ್ನ ಪರಿಗಣಿಸಬೇಕು. ಉಳಿದ ಯಾರೇ ಶಾಸಕರಿರಲಿ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಒತ್ತಾಯಕ್ಕಾಗಿ ನಾವೇಲ್ಲಾ ದೆಹಲಿಗೆ ಹೊರಟಿದ್ದೆವೆ. ನನಗೂ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹ ಮಾಡ್ತೆನೆ. ಇದನ್ನೂ ಓದಿ: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ದೆಹಲಿಗೆ ಭೇಟಿ ನೀಡೋದ್ರಲ್ಲಿ ತಪ್ಪಿಲ್ಲ: ಸಿದ್ದರಾಮಯ್ಯ
ನಮ್ಮ ಪಕ್ಷದ ವರಿಷ್ಠರಾದ ಸುರ್ಜೇವಾಲಾ, ವೇಣುಗೋಪಾಲ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಗೆ ಭೇಟಿ ಮಾಡುತ್ತೇನೆ. ಅವರ ಬಳಿ ನಮ್ಮ ಅಳಲು ತೋಡಿಕೊಳ್ಳುತ್ತೆವೆ. ಸುಮಾರು 35ಕ್ಕೂ ಅಧಿಕ್ಕ ಹಿರಿಯ ಶಾಸಕರು ದೆಹಲಿಗೆ ಹೋರಟಿದ್ದೇವೆ. ಹಿರಿಯ ಸಚಿವರನ್ನು ಕೈಬಿಟ್ಟು ಅವರಿಗೆ ಪಕ್ಷದ ಜವಾಬ್ದಾರಿ ನೀಡ್ಬೇಕು. ಮೂರು, ನಾಲ್ಕು ಭಾರಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹ ಮಾಡ್ತೆವೆ ಅಂತಿದ್ದಾರೆ ರೋಣ ಶಾಸಕಜಿ.ಎಸ್ ಪಾಟೀಲ. ಇದನ್ನೂ ಓದಿ: ಲಂಚ ಪಡೆಯುವಂತೆ PSI ಒತ್ತಡ – ಕಿರುಕುಳಕ್ಕೆ ಬೇಸತ್ತು ದಯಾಮರಣ ಕೋರಿ ಸಿಎಂ, ಗೃಹ ಸಚಿವರಿಗೆ ಠಾಣೆಯ ಅಧಿಕಾರಿಗಳ ಪತ್ರ


