ಸಚಿವ ಸಂಪುಟ ಪುನಾರಚನೆಗೆ ತೀವ್ರಗೊಂಡ ಕೂಗು – ದೆಹಲಿಗೆ ಹೊರಟ ಹಿರಿಯ ಶಾಸಕರ ತಂಡ

2 Min Read

ಬೆಂಗಳೂರು: ನಾಯಕತ್ವ ಗೊಂದಲ, ದಾವಣಗೆರೆ ಜಟಾಪಟಿ ನಡುವೆ ಹಿರಿಯ ಶಾಸಕರು ಮಂತ್ರಿಗಿರಿ ಬೇಡಿಕೆಯೊಂದಿಗೆ ಇಂದು ದೆಹಲಿ ಫ್ಲೈಟ್ ಹತ್ತಿದ್ದಾರೆ. ಎರಡಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಸುಮಾರು 30 ಶಾಸಕರು ಮಂತ್ರಿಗಿರಿಗೆ ಹಕ್ಕೊತ್ತಾಯ ಮಾಡಲು ಬೆಂಗಳೂರಿನಿಂದ (Bengaluru) ಇಂದು ಮಧ್ಯಾಹ್ನ ದೆಹಲಿಗೆ ತೆರಳಿದ್ರು.

ಕಾಂಗ್ರೆಸ್‌ನಲ್ಲಿ (Congress) ಸಂಪುಟ ಪುನಾರಚನೆ ಕೂಗು ಜೋರಾಗಿಯೇ ಮೊಳಗ್ತಿದೆ. ಉಪಚುನಾವಣೆ ಮುಗಿದ ಬೆನ್ನಲ್ಲೇ ಹಿರಿಯ ಶಾಸಕರು ಸಚಿವ ಸ್ಥಾನಕ್ಕೆ ಡಿಮ್ಯಾಂಡ್ ಇಡಲು ದೆಹಲಿ ಪರೇಡ್ ನಡೆಸಿದ್ದಾರೆ.

ಸುಮಾರು 30 ಜನ ಕಾಂಗ್ರೆಸ್ ಹಿರಿಯ ಶಾಸಕರು ಇಂದು ಮಧ್ಯಾಹ್ನ ದೆಹಲಿ ವಿಮಾನ ಹತ್ತಿದರು. ನಾಳೆ ಬೆಳಗ್ಗೆ ಇನ್ನು ಕೆಲವರು ದೆಹಲಿಗೆ ಹೋಗಿ ಗುಂಪು ಸೇರಿಕೊಳ್ಳಲಿದ್ದಾರೆ. 3-4 ದಿನಗಳ ಕಾಲ ದೆಹಲಿಯಲ್ಲೇ ಇರಲಿರುವ ಹಿರಿಯ ಶಾಸಕರ ತಂಡ ಹೈಕಮಾಂಡ್ ನಾಯಕರ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಬಲವಾದ ಹಕ್ಕೊತ್ತಾಯ ಮಂಡಿಸಲು ತೀರ್ಮಾನಿಸಿದ್ದಾರೆ. ರಾಹುಲ್ ಭೇಟಿಗೂ ಶಾಸಕರ ತಂಡ ಸಮಯ ಕೇಳಿದ್ದಾರಂತೆ‌.

ದೆಹಲಿಗೆ ಹೋದವರು ಯಾರ‍್ಯಾರು?
1.ಟಿಬಿ ಜಯಚಂದ್ರ – ಶಿರಾ ಕ್ಷೇತ್ರ
2.ಅಶೋಕ್ ಪಟ್ಟಣ್ – ರಾಮದುರ್ಗ ಕ್ಷೇತ್ರ
3.ಎಸ್.ಎನ್ ಸುಬ್ಬಾರೆಡ್ಡಿ – ಬಾಗೇಪಲ್ಲಿ ಕ್ಷೇತ್ರ
4.ಸಿ ಪುಟ್ಟರಂಗಶೆಟ್ಟಿ – ಚಾಮರಾಜನಗರ ಕ್ಷೇತ್ರ
5.ಹಂಪನಗೌಡ ಬಾದರ್ಲಿ – ಸಿಂಧನೂರು ಕ್ಷೇತ್ರ
6.ಡಿಜಿ ಶಾಂತನಗೌಡ – ಹೊನ್ನಾಳ್ಳಿ ಕ್ಷೇತ್ರ
7.ಬಸವರಾಜ್ ಶಿವಣ್ಣನವರ್ – ಬ್ಯಾಡಗಿ ಕ್ಷೇತ್ರ
8.ಎ.ಆರ್ ಕೃಷ್ಣಮೂರ್ತಿ – ಕೊಳ್ಳೇಗಾಲ ಕ್ಷೇತ್ರ
9.ಪ್ರಸಾದ್ ಅಬ್ಬಯ್ಯ – ಹು-ಧಾ ಪೂರ್ವ ಕ್ಷೇತ್ರ
10.ಯುಬಿ ಬಣಕರ್ – ಹಿರೇಕೆರೂರು ಕ್ಷೇತ್ರ
11.ಜಿ.ಎಸ್ ಪಾಟೀಲ್ – ರೋಣ ಕ್ಷೇತ್ರ
12.ಯಶವಂತರಾಯ ಗೌಡ ಪಾಟೀಲ್ – ಇಂಡಿ ಕ್ಷೇತ್ರ
13.ಷಡಕ್ಷರಿ – ತಿಪಟೂರು ಕ್ಷೇತ್ರ
14.ಎಸ್.ಎನ್ ನಾರಾಯಣಸ್ವಾಮಿ – ಬಂಗಾರಪೇಟೆ ಕ್ಷೇತ್ರ
15.ಲಕ್ಷ್ಮಣ ಸವದಿ – ಅಥಣಿ ಕ್ಷೇತ್ರ
16.ಅಪ್ಪಾಜಿ ನಾಡಗೌಡ – ಮುದ್ದೇಬಿಹಾಳ ಕ್ಷೇತ್ರ
17.ಪ್ರಿಯಕೃಷ್ಣ – ಗೋವಿಂದರಾಜನಗರ ಕ್ಷೇತ್ರ
19.ರಮೇಶ್ ಬಂಡಿ ಸಿದ್ದೇಗೌಡ – ಶ್ರೀರಂಗಪಟ್ಟಣ ಕ್ಷೇತ್ರ
20.ಬಿ. ಶಿವಣ್ಣ – ಆನೇಕಲ್ ಕ್ಷೇತ್ರ
21.ರಾಘವೇಂದ್ರ ಹಿಟ್ನಾಳ್ – ಕೊಪ್ಪಳ ಕ್ಷೇತ್ರ
22.ಬೇಳೂರು ಗೋಪಾಲಕೃಷ್ಣ- ಸಾಗರ ಕ್ಷೇತ್ರ

ಇನ್ನೂ ಸಚಿವಾವಾಕಾಂಕ್ಷಿ ಶಾಸಕರ ಗುಂಪಿನ ಜೊತೆ ಹೋಗದ ಶಾಸಕರ ನಡೆ ಕುತೂಹಲ ಮೂಡಿಸಿದೆ. ಬಹುತೇಕ ಡಿಕೆಶಿ ಬೆಂಬಲಿಗರು ಇಂದು ದೆಹಲಿಗೆ ಹೋಗ್ತಿಲ್ಲ. ದೆಹಲಿಗೆ ಹೋಗಬೇಕಿದ್ದವರ ಒಟ್ಟು 39 ಶಾಸಕರ ಲಿಸ್ಟ್ ರೆಡಿಯಾಗಿತ್ತು. ಅಂತಿಮ ಹಂತದಲ್ಲಿ 15-18 ಶಾಸಕರು ಇಂದು ದೆಹಲಿ ಪ್ರಯಾಣ ಮಾಡಿಲ್ಲ. ಇವರ ಪೈಕಿ ಕೆಲವರು ಕಾದುನೋಡಿ ದೆಹಲಿಗೆ ಹೋಗಲು ನಿರ್ಧರಿಸಿದ್ದಾರೆ.

ರಾಜ್ಯದ ಎರಡು ಬೈಎಲೆಕ್ಷನ್ ಏನೋ ಮುಗಿದಿವೆ. ಪಂಚ ರಾಜ್ಯಗಳ ಪೈಕಿ ಇನ್ನೂ ಎರಡು ಬೃಹತ್ ರಾಜ್ಯಗಳ ಚುನಾವಣೆ ಬಾಕಿ ಇದೆ. ಇಂಥ ಸಂದರ್ಭದಲ್ಲಿ ಪುನಾರಚನೆ ಹಾಗೂ ಹಿರಿಯರ ಸಂಪುಟ ಸೇರೋ ಬೇಡಿಕೆ ಬಗ್ಗೆ ಹೈಕಮಾಂಡ್ ಸ್ಪಂದನೆ ಯಾವ ರೀತಿ ಇರುತ್ತೋ ಅನ್ನೋದು ಕುತೂಹಲ.

Share This Article