ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಮುಖಾಮುಖಿಯಾಗಿದ್ದು, ಸೌಹಾರ್ದಯುತ ಸಂಭಾಷಣೆ ನಡೆಸಿದ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಬ್ಬರೂ ನಾಯಕರು ಸೌಹಾರ್ದಯುತ ರೀತಿಯಲ್ಲಿ ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಂಡರು. ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಸಂಕ್ಷಿಪ್ತ ವಿನಿಮಯವು ನೆಟ್ಟಿಗರಲ್ಲಿ ಕುತೂಹಲ ಹೆಚ್ಚಿಸಿದೆ. ಇದನ್ನೂ ಓದಿ: ಗಾಯಕಿ ಮಂಗ್ಲಿಯಿಂದ 10 ಕೋಟಿ ವಂಚನೆ? – ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ; FIR ದಾಖಲು
What conversation might have taken place between PM Modi and Rahul Gandhi? pic.twitter.com/wbiYqaoInJ
— Desh Ka Verdict (@DeshKaVerdict) April 11, 2026
ಹೌದು. ಸಮಾಜ ಸುಧಾರಕ ಮಹಾತ್ಮ ಜ್ಯೋತಿರಾವ್ ಫುಲೆ ಅವರ 200 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗೌರವ ಸಲ್ಲಿಸಲು ಶನಿವಾರ ಸಂಸತ್ ಸಂಕೀರ್ಣದಲ್ಲಿ (Parliament Complex) ರಾಷ್ಟ್ರೀಯ ಪಕ್ಷಗಳ ನಾಯಕರು ನೆರೆದಿದ್ದರು. ಈ ವೇಳೆ ಅಲ್ಲಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಜೆ.ಪಿ ನಡ್ಡಾ ಮತ್ತು ಅರ್ಜುನ್ ರಾಮ್ ಮೇಘವಾಲ್, ರಾಹುಲ್ ಗಾಂಧಿ ಮತ್ತು ಇತರರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ನಂತರ ವಿಪಕ್ಷ ರಾಹುಲ್ ಗಾಂಧಿ ಅವರೊಂದಿಗೆ ಕೆಲಕಾಲ ಸೌಹಾರ್ದಯುತ ಮಾತುಕತೆ ನಡೆಸಿದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದ ಬಗ್ಗೆ ಪ್ರಧಾನಿ ಮೋದಿ ಅವರು, ರಾಹುಲ್ ಗಾಂಧಿ ಅವರನ್ನ ವಿಚಾರಿಸಿದ್ದರು. ಬಳಿಕ ಶೀಘ್ರ ಗುಣಮುಖರಾಗುವಂತೆ ಶುಭಹಾರೈಸಿದ್ದರು. ಇದನ್ನೂ ಓದಿ: ವಿಮಾನದ ಸೀಟಲ್ಲಿ ಮೃತ ವಿದ್ಯಾರ್ಥಿಗಳ ಫೋಟೋ, ರಕ್ತದಲ್ಲಿ ಮಿಂದ ಬ್ಯಾಗ್‌ನೊಂದಿಗೆ ಇಸ್ಲಾಮಾಬಾದ್‌ಗೆ ಬಂದ ಇರಾನ್ ನಿಯೋಗ

