ದಾವಣಗೆರೆ: ಇಲ್ಲಿನ ದಕ್ಷಿಣ ಉಪಚಚುನಾವಣೆ (Davanagere By Election) ಮತದಾನ ಮುಗಿದಿದೆ. ಆದ್ರೆ, ಕಾಂಗ್ರೆಸ್‌ನಲ್ಲಿ ಬಂಡಾಯ, ಗೊಂದಲ ಯಾವುದೂ ಬಗೆಹರಿದಿಲ್ಲ. ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಮುನಿಸು ಚುನಾವಣೆ ಮುಗಿದ ಬಳಿಕವೂ ಮುಂದುವರಿದಿದೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್‌ಸಿಯೂ ಆಗಿರುವ ಅಬ್ದುಲ್ ಜಬ್ಬಾರ್ (MLC Abdul Jabbar) ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡದ ಸಚಿವ ಜಮೀರ್ ಅಹ್ಮದ್ (Zameer Ahmed Khan) ವಿರುದ್ಧ ಮತ್ತೊಂದು ಮುಸ್ಲಿಂ ಬಣ ತಿರುಗಿ ಬಿದ್ದಿತ್ತು. ಜಮೀರ್ ಅಹ್ಮದ್ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿಲ್ಲ, ಪ್ರಚಾರಕ್ಕೆ ಅಂತ ಬಂದಿದ್ರೂ ಅವರ ನಡೆ ಯಾರಿಗೂ ಸಮಾಧಾನ ತಂದಿಲ್ಲ. ಮುಸ್ಲಿಂ ನಾಯಕರ ಮನವೊಲಿಕೆ ಮಾಡದೇ ಜಮೀರ್ ನಿರ್ಲಕ್ಷ್ಯ ಮಾಡಿದ್ದಾರೆ. ಜಮೀರ್ ಜೊತೆಗೆ ಎಂಎಲ್‌ಸಿ ಹಾಗೂ ಆಕಾಂಕ್ಷಿ ಅಬ್ದುಲ್ ಜಬ್ಬಾರ್ ಸಹ ಪ್ರಚಾರದಿಂದ ದೂರ ಉಳಿದಿದ್ರು. ಯಾರೆಲ್ಲ ಪ್ರಚಾರ ನಡೆಸಲಿಲ್ವೋ ಅವರ ವಿರುದ್ಧ ಕ್ರಮ ಆಗಲೇಬೇಕೆಂದು ಒಂದು ಬಣ ಪಟ್ಟು ಹಿಡಿದಿತ್ತು. ಈ ಬೆನ್ನಲ್ಲೇ ಜಬ್ಬಾರ್ ರಾಜೀನಾಮೆ ಸಲ್ಲಿಸಿದ್ದಾರೆ.
ಹೈಕಮಾಂಡ್‌ಗೆ ದೂರು
ಪ್ರಕಾರಕ್ಕೆ ಆಗಮಿಸದ ಸಚಿವ ಜಮೀರ್ ವಿರುದ್ಧ ಹೈಕಮಾಂಡ್‌ಗೆ ಖುದ್ದು ಸುರ್ಜೇವಾಲಾ ರಿಪೋರ್ಟ್ ನೀಡಿದ್ದಾರೆ. ದಾವಣಗೆರೆ ಉಪಚುನಾವಣೆ ರಿಸಲ್ಟ್ ಬಳಿಕ ಮುಸ್ಲಿಂ ನಾಯಕರ ವಾರ್ ಮತ್ತಷ್ಟು ಜೋರಾಗುವ ಸಾಧ್ಯತೆಗಳಿವೆ. ಎಸ್‌ಡಿಪಿಐ, ಪಕ್ಷೇತರ ಅಭ್ಯರ್ಥಿ ಮತಗಳ ಹಂಚಿಕೆ ನೋಡಿ ಶಿಸ್ತು ಕ್ರಮ ಆಗುತ್ತಾ..? ಇದು ಮತ್ತೊಂದು ರಾಜಣ್ಣ ಕೇಸ್ ಆಗುತ್ತಾ? ಅಥವಾ ಜಮೀರ್ ಸೇಫ್ ಆಗ್ತಾರಾ ಅಂತ ನೋಡಬೇಕು. ಅಲ್ಲದೇ ಇದು ಜಮೀರ್‌ಗಿರುವ ಮುಸ್ಲಿಂ ಲೀಡರ್‌ಶಿಪ್ ಹಣೆಪಟ್ಟಿ ಕೆಡಿಸಿ ಹಣಿಯೋ ರಾಜಕಾರಣನೋ? ಅಥವಾ ಪವರ್ ಫೈಟ್ ಪರದೆ ಹಿಂದಿನ ಹೊಸ ಆಟವೂ ಇರಬಹುದು.

