ಬ್ರಹ್ಮಾವರ ತಾಲೂಕಿನಲ್ಲಿ ಹೆಚ್ಚಿದ ಚಿರತೆಗಳ ಕಾಟ

0 Min Read

ಉಡುಪಿ: ಬ್ರಹ್ಮಾವರ (Brahmavara) ತಾಲೂಕಿನಲ್ಲಿ ಚಿರತೆಗಳ ಕಾಟ ಹೆಚ್ಚಾಗಿದೆ. ಇಲ್ಲಿನ ನಡೂರು ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ.

ಸ್ಥಳೀಯ ನಿವಾಸಿ ಬಾಬು ಶೆಟ್ಟಿ ಎಂಬವರ ಮನೆಗೆ ಪದೇಪದೇ ಚಿರತೆ ಬರುತ್ತಿದೆ. ಇವರು ಸಾಕಿದ ಕೋಳಿಗಳನ್ನು ಹೊತ್ತೊಯ್ದಿರುವುದು ಮಾತ್ರವಲ್ಲದೆ ದನಗಳಿಗೂ ಪರಚಿ ಗಾಯ ಮಾಡಿದೆ. ಇದನ್ನೂ ಓದಿ: ಮುಳ್ಳುಹಂದಿ ಬೇಟೆಯಾಡಲು ಹೋಗಿ ಚಿರತೆ ಸಾವು

ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಇದೇ ರೀತಿ ಚಿರತೆ ಈ ಪ್ರದೇಶದಲ್ಲಿ ಅನೇಕ ಬಾರಿ ನಡೆಸಿಕೊಂಡಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Share This Article