ಇರಾನ್‌ಗೆ ನೂತನ ಏರ್‌ ಡಿಫೆನ್ಸ್‌ ಸಿಸ್ಟಮ್‌ ಪೂರೈಕೆಗೆ ಚೀನಾ ಸಿದ್ಧತೆ – ಅಮೆರಿಕ ಕಳವಳ

1 Min Read

ವಾಷಿಂಗ್ಟನ್‌: ಮುಂದಿನ ಕೆಲವು ದಿನಗಳಲ್ಲಿ ಚೀನಾ (China) ಇರಾನ್‌ಗೆ (Iran) ನೂತನ ವಾಯು ರಕ್ಷಣಾ ವ್ಯವಸ್ಥೆಗಳನ್ನು ತಲುಪಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕದ (America) ಗುಪ್ತಚರ ಇಲಾಖೆ ಹೇಳಿದೆ. ಈ ಬಗ್ಗೆ ಅಮೆರಿಕ ಗುಪ್ತಚರ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಚೀನಾ ತನ್ನ ಮೂಲವನ್ನು ಮರೆಮಾಚಲು ಬೇರೆ ದೇಶಗಳ ಮೂಲಕ ಈ ಶಸ್ತ್ರಾಸ್ತ್ರ ಸಾಗಣಿಕೆಗೆ ಮುಂದಾಗಿರುವ ಸಾಧ್ಯತೆ ಇದೆ. MANPAD ಗಳು ಎಂದು ಕರೆಯಲ್ಪಡುವ ಭುಜದ ಮೇಲೆ ಹೊತ್ತು ಹಾರಿಸುವ ವಾಯು ವಿರೋಧಿ ಕ್ಷಿಪಣಿ ವ್ಯವಸ್ಥೆಗಳನ್ನು ಕಳುಹಿಸಲು ಚೀನಾ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್, ಶ್ವೇತಭವನ ಮತ್ತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಅಮೆರಿಕದ ಜೊತೆ ಶಾಂತಿ ಮಾತುಕತೆಗೆ ಪಾಕ್‌ಗೆ ಬಂದಿಳಿದ ಇರಾನ್‌ ನಿಯೋಗ

ಇಲ್ಲಿವರೆಗಿನ ಅಮೆರಿಕ ಹಾಗೂ ಇರಾನ್‌ ಯುದ್ಧದಲ್ಲಿ ಏರ್‌ ಡಿಫೆನ್ಸ್‌ ಸಿಸ್ಟಮ್‌ ಬಹಳ ಮಹತ್ವದ ಕೆಲಸ ನಿರ್ವಹಿಸಿವೆ. ಮತ್ತೆ ಪೂರೈಕೆಯಾದರೆ ಅಮೆರಿಕಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಅಮೆರಿಕದ ಯುದ್ಧ ವಿಮಾನಗಳಿಗೂ ಇವು ತೊಂದರೆ ಉಂಟು ಮಾಡುವ ಸಾಮರ್ಥ್ಯ ಹೊಂದಿವೆ.

ವಾಷಿಂಗ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿಯ ವಕ್ತಾರರು ಅಮೆರಿಕ ಗುಪ್ತಚರ ಸಂಸ್ಥೆಯ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಚೀನಾ ಸಂಘರ್ಷದಲ್ಲಿರುವ ಯಾವುದೇ ರಾಷ್ಟ್ರಕ್ಕೂ ಶಸ್ತ್ರಾಸ್ತ್ರಗಳನ್ನು ಪೂರೈಸಿಲ್ಲ ಎಂದು ಹೇಳಿದ್ದಾರೆ. ಚೀನಾ ಅಂತರರಾಷ್ಟ್ರೀಯ ಬದ್ಧತೆಗಳಿಗೆ ಬದ್ಧವಾಗಿದೆ ಮತ್ತು ಆಧಾರರಹಿತ ಆರೋಪ ಮಾಡಬಾರದು ಎಂದು ಹೇಳಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ತಿಂಗಳು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಉನ್ನತ ಮಾತುಕತೆ ನಡೆಯಲಿದೆ. ಈ ಭೇಟಿಗೂ ಮುನ್ನ ಶಸ್ತ್ರಾಸ್ತ್ರ ಪೂರೈಕೆಯ ಸುದ್ದಿ ಓಡಾಡುತ್ತಿದೆ. ಇದನ್ನೂ ಓದಿ: ಮದ್ದುಗುಂಡುಗಳನ್ನ ಯುದ್ಧನೌಕೆಗೆ ತುಂಬಿಸ್ತಿದ್ದೇವೆ – ಮಾತುಕತೆಗೆ ಒಪ್ಪದಿದ್ರೆ ಇರಾನ್‌ ಮೇಲೆ ಭೀಕರ ದಾಳಿ: ಟ್ರಂಪ್‌ ಕೊನೇ ವಾರ್ನಿಂಗ್‌

Share This Article