– ಯುಎಇಯಿಂದ ಗಡೀಪಾರಾಗಿ ಭಾರತಕ್ಕೆ ಬಂದ ಆರೋಪಿ ಹೆಡೆಮುರಿಕಟ್ಟಿದ ಪೊಲೀಸರು
ನವದೆಹಲಿ: ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಾಂಚನಾ ಕುಮಾರಿ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಪ್ರಮುಖ ಆರೋಪಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ (Delhi Airport) ಬಂಧಿಸಲಾಗಿದೆ.
ಕೊಲೆ ಪ್ರಕರಣದ ಆರೋಪಿಯನ್ನು ಯುಎಇಯಿಂದ ಗಡೀಪಾರು ಮಾಡಲಾಯಿತು. ಆರೋಪಿ ದೆಹಲಿ ಏರ್‌ಪೋರ್ಟ್‌ಗೆ ಬಂದು ಇಳಿಯುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಕಮಲ್ ಕೌರ್ ಭಾಭಿ (Kamal Kaur Bhabhi) ಎಂದೇ ಹೆಸರಾಗಿದ್ದ 30 ವರ್ಷದ ಕಾಂಚನಾ ಕುಮಾರಿ 2025 ರ ಜೂನ್ 11 ರಂದು ಬಟಿಂಡಾದ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೋಗಾ ನಿವಾಸಿ ಮತ್ತು ಸ್ವಯಂಘೋಷಿತ ಮೂಲಭೂತವಾದಿ ಸಿಖ್ ನಾಯಕ ಅಮೃತ್‌ಪಾಲ್ ಮೆಹ್ರಾನ್ (30) ಜೂನ್ 2025 ರಲ್ಲಿ ಕುಮಾರಿ ಹತ್ಯೆಯ ನಂತರ ಯುಎಇಗೆ ಪಲಾಯನ ಮಾಡಿದ್ದ. ಬಟಿಂಡಾ ಪೊಲೀಸರು ಆತನನ್ನು ಪ್ರಮುಖ ಆರೋಪಿ ಎಂದು ದೃಢಪಟ್ಟ ನಂತರ ಆತನಿಗಾಗಿ ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿತ್ತು. ಇದನ್ನೂ ಓದಿ: ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
ಪಂಜಾಬ್ ಪೊಲೀಸರು, ಕೇಂದ್ರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುತ್ತಾ, ಮಧ್ಯಪ್ರಾಚ್ಯದಲ್ಲಿ ಆರೋಪಿ ಇದ್ದ ಸ್ಥಳವನ್ನು ಪತ್ತೆಹಚ್ಚಿ ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರು. ಆರೋಪಿಯನ್ನು ಜನವರಿಯಲ್ಲಿ ಯುಎಇಯಲ್ಲಿ ಬಂಧಿಸಲಾಯಿತು. ನಂತರ ಆತನನ್ನು ಭಾರತಕ್ಕೆ ಗಡೀಪಾರು ಮಾಡಲಾಯಿತು.
ಪ್ರಕರಣ ಏನು?
ಕುಮಾರಿ ಲುಧಿಯಾನ ನಿವಾಸಿಯಾಗಿದ್ದರು. ಜೂನ್ 9 ರಂದು, ಪ್ರಚಾರ ಕಾರ್ಯಕ್ರಮಕ್ಕಾಗಿ ಭಟಿಂಡಾಗೆ ಹೋಗುತ್ತಿರುವುದಾಗಿ ತನ್ನ ತಾಯಿಗೆ ತಿಳಿಸಿ ಮನೆಯಿಂದ ಹೊರಟಿದ್ದರು. ಜೂನ್ 11 ರಂದು, ಅವರ ಶವ ಕಾರಿನಲ್ಲಿ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಆರೋಪಿ ಮೆಹ್ರಾನ್ ತನ್ನ ಸಹಚರರೊಂದಿಗೆ ಕುಮಾರಿ ಅವರ ನಿವಾಸದ ಬಳಿ ಇರುವ ಹೋಟೆಲ್‌ನಲ್ಲಿ ತಂಗಿದ್ದರು. ಮೆಹ್ರಾನ್ ಕೂಡ ಎರಡು ಬಾರಿ ಅವರ ಮನೆಗೆ ಭೇಟಿ ನೀಡಿದ್ದರು. ಆದರೆ, ಆಕೆ ಎರಡೂ ಸಂದರ್ಭಗಳಲ್ಲಿ ಇರಲಿಲ್ಲ. ನಂತರ ಮೆಹ್ರಾನ್ ಜೂನ್ 8 ರಂದು ಆಕೆಯನ್ನು ಸಂಪರ್ಕಿಸಿ ಕಾರಿನ ಬಗ್ಗೆ ಪ್ರಚಾರ ಮಾಡಲು ಭಟಿಂಡಾಗೆ ಬರಬೇಕು ಎಂದು ಹೇಳಿದ್ದ.
ಜೂನ್ 9 ರಂದು ಕುಮಾರಿ ಲುಧಿಯಾನದಿಂದ ಭಟಿಂಡಾಗೆ ತನ್ನ ಕಾರಲ್ಲಿ ಬಂದರು. ಮೆಹ್ರಾನ್, ಜಸ್ಪ್ರೀತ್ ಸಿಂಗ್ ಮತ್ತು ನಿಮ್ರಾಜಿತ್ ಸಿಂಗ್ ಆಕೆಯ ವಾಹನ ಹತ್ತಿದರು. ಮೊದಲು, ಮೂವರು ಆರೋಪಿಗಳು ಆಕೆಯ ಕಾರನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಿ, ಅಲ್ಲಿ ರಾತ್ರಿ 12:30 ರವರೆಗೆ ದುರಸ್ತಿ ಮಾಡಿಸಿದ್ದಾರೆ. ನಂತರ ತಮ್ಮ ಸ್ಕಾರ್ಪಿಯೋವನ್ನು ಪೆಟ್ರೋಲ್ ಪಂಪ್‌ನಲ್ಲಿ ನಿಲ್ಲಿಸಿದ್ದಾರೆ. ಬಳಿಕ ನಾಲ್ವರೂ ಕಾಂಚನ್ ಜೊತೆ ಅವಳ ಕಾರಿನಲ್ಲಿ ಒಟ್ಟಿಗೆ ಪ್ರಯಾಣಿಸಿದ್ದಾರೆ. ಇದನ್ನೂ ಓದಿ: ಚೀನಾ-ತೈವಾನ್ ಐತಿಹಾಸಿಕ ಮಾತುಕತೆ – ಈ ಭೇಟಿಗೆ ಇಷ್ಟೊಂದು ಮಹತ್ವ ಯಾಕೆ?
ಮೆಹ್ರಾನ್ ಕಾರು ಚಲಾಯಿಸುತ್ತಿದ್ದಾಗ, ಜಸ್ಪ್ರೀತ್ ಮತ್ತು ನಿಮ್ರಜೀತ್ ಸೇರಿಕೊಂಡು ಕುಮಾರಿಯ ಎರಡೂ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಆಕೆಯ ಪಾಸ್‌ವರ್ಡ್‌ಗಳನ್ನು ಕೇಳಿದ್ದಾರೆ. ಪಾಸ್‌ವರ್ಡ್ ಬಹಿರಂಗಪಡಿಸಲು ನಿರಾಕರಿಸಿದಾಗ, ಇಬ್ಬರು ಸಹಚರರು ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಕೊನೆಗೆ ನಿರ್ಜನ ಪ್ರದೇಶದಲ್ಲಿ ಆಕೆಯ ಕತ್ತುಹಿಸುಕಿ ಹತ್ಯೆ ಮಾಡಿದ್ದಾರೆ.

