Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?

3 Min Read

– ತಮಿಳುನಾಡು ರಾಜಕೀಯ ವಲಯದಲ್ಲಿ ಭಾರೀ ಸಂಚಲನ
– ಪೈರಸಿ ವಿರುದ್ಧ ಗುಡುಗು – ʻಜನನಾಯಗನ್ʼ ಬೆನ್ನಿಗೆ ನಿಂತ ಸ್ಟಾರ್‌ ನಟರು

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ದಳಪತಿ ವಿಜಯ್ ಅಭಿನಯದ ಜನನಾಯಗನ್ ಸಿನಿಮಾದ 5 ನಿಮಿಷದ HD ವಿಡಿಯೋ ಲೀಕ್ ಆಗಿದೆ. ಈ ಸಿನಿಮಾಗೆ ಇನ್ನೂ ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಚಿತ್ರ ಸೆನ್ಸಾರ್ ಬೋರ್ಡ್’ಗೆ ವೀಕ್ಷಣೆಗೆ ಹೋದ ನಂತರ, ಸದಾ ಒಂದಲ್ಲಾ ಒಂದು ರೀತಿಯಲ್ಲಿ ಗಾಸಿಪ್ ಮೆಷಿನ್ ಗಳಿಗೆ ಆಹಾರವಾಗುತ್ತಿರುವ ಚಿತ್ರದ ಹೆಚ್‌ಡಿ ಪ್ರಿಂಟ್ ಈಗ ಸೋರಿಕೆ ಆಗಿದೆ.

ಏಪ್ರಿಲ್ 23 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಷ್ಟರಲ್ಲೇ ಸಿನಿಮಾದ ವಿಡಿಯೋ ಲೀಕ್‌ ಆಗಿರುವುದು ರಾಜಕೀಯ ವಲಯದಲ್ಲಿ ಸಂಚಲನಕ್ಕೂ ಕಾರಣವಾಗಿದೆ. ಚಿತ್ರವು ಸೆನ್ಸಾರ್ ನಲ್ಲಿರುವಾಗ ಸೋರಿಕೆ ಹೇಗೆ ಸಾಧ್ಯವಾಯಿತು? ಚಿತ್ರ ಲೀಕ್ ಆದ ನಂತರ, ಚುನಾವಣೆಯಲ್ಲಿ ಆಗುವ ಪರಿಣಾಮಗಳೇನು ಎನ್ನುವುದು, ಸದ್ಯ ತಮಿಳುನಾಡಿನಲ್ಲಿ ಜನರ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್

ವೃತ್ತಿಜೀವನದ ಕೊನೆಯ ಸಿನಿಮಾ
ಜನನಾಯಗನ್ ಸಿನಿಮಾ ತನ್ನ ವೃತ್ತಿ ಜೀವನದ ಕೊನೆಯ ಸಿನಿಮಾ ಎಂದೇ ದಳಪತಿ ವಿಜಯ್ ಹೇಳಿದ್ದರು. ರಾಜಕೀಯ ಎಂಟ್ರಿಗೆ ಲಾಭವಾಗಲಿ ಎನ್ನುವ ಕಾರಣಕ್ಕಾಗಿಯೇ ಮತ್ತು ಇದಕ್ಕೆ ಹೊಂದಿಕೊಳ್ಳುವ ಚಿತ್ರಕಥೆಯನ್ನ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಚಿತ್ರದ ವಿಜಯ್ ಎಂಟ್ರಿ ಮತ್ತು ಕ್ಲೈಮ್ಯಾಕ್ಸ್’ನಲ್ಲಿ ಮತಯಾಚಿಸುವ ದೃಶ್ಯಗಳು ಈಗಾಗಲೇ ಲೀಕ್ ಆಗಿದ್ದವು. ಈಗ, ಚಿತ್ರದ ಇಡೀ ಹೆಚ್‌ಡಿ (High Defination) ಪ್ರಿಂಟ್, ಪೈರೇಟೆಡ್ ಸೈಟ್ ಗಳಲ್ಲಿ ಸೋರಿಕೆಯಾಗಿದೆ.

ಚಿತ್ರಕ್ಕೆ ಇನ್ನೂ ಸೆನ್ಸಾರ್ ಬೋರ್ಡ್ ನಿಂದ ಸರ್ಟಿಫಿಕೇಟ್ ಸಿಕ್ಕಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಚಿತ್ರ ಬಿಡುಗಡೆಗಾಗಿ ನಿರ್ಮಾಣ ಸಂಸ್ಥೆ ಸುಪ್ರೀಂ ಕೋರ್ಟ್‌ ಮೆಟ್ಟಲೇರಿತ್ತು. ಆದರೆ, ಮದ್ರಾಸ್ ಹೈಕೋರ್ಟ್ ಬೆಂಚ್ ನಲ್ಲೇ ಇತ್ಯರ್ಥ ಮಾಡಿಕೊಳ್ಳಿ ಎಂದು ಟಾಪ್ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನೂ ಓದಿ: ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ

ವಿಜಯ್ ಅಭಿನಯದ ಜನನಾಯಗನ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಂ ಮೆನನ್, ಪ್ರಕಾಶ್ ರಾಜ್, ನಾಸರ್, ಪ್ರಿಯಾಮಣಿ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಮೊದಲು ಈ ವರ್ಷದ ಜನವರಿ 9ನೇ ತಾರೀಕಿಗೆ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಇದನ್ನೂ ಓದಿ: ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು

ʻಜನನಾಯಗನ್ʼʼ ಬೆನ್ನಿಗೆ ನಿಂತ ಸ್ಟಾರ್‌ ನಟರು
ಜನನಾಯಗನ್‌ ಸಿನಿಮಾದ ವಿಡಿಯೋ ತುಣುಕುಗಳು ಸೋರಿಕೆಯಾದ ಬಳಿಕ ಪೈರಸಿ ವಿರುದ್ಧ ಸೌತ್‌ನ ಸ್ಟಾರ್‌ ನಟರು ಆಕ್ರೋಶ ಹೊರಹಾಕಿದ್ದಾರೆ. ನಟ ಚಿರಂಜೀವಿ, ಶಿವಕಾರ್ತಿಕೇಯನ್‌, ವಿಜಯ್‌ ಆಂಟೊನಿ ಸೇರಿ ಹಲವು ನಟರು #KillPiracy ಎನ್ನುವ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್‌ ಹಂಚಿಕೊಂಡಿದ್ದು, ಪೈಸಿ ಕೊಂದು ಸಿನಿಮಾ ಉಳಿಸಬೇಕೆಂದು ಕರೆ ನೀಡಿದ್ದಾರೆ.

Share This Article