ಬೈರುತ್: ಇಸ್ರೇಲಿ (Israel) ಜೆಟ್ಗಳು ಎರಡು ಲೆಬನಾನ್ (Lebanon) ಪಟ್ಟಣಗಳ ಮೇಲೆ ವಾಯುದಾಳಿ ನಡೆಸಿದೆ. ಆ ಮೂಲಕ ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮಕ್ಕೆ ಸೆಡ್ಡು ಹೊಡೆದಿದೆ.
ಲೆಬನಾನ್ ಮೇಲಿನ ದಾಳಿಗಳನ್ನು ಹಿಂತೆಗೆದುಕೊಳ್ಳುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸೂಚಿಸಿದ್ದಾರೆ. ಆದರೂ, ಲೆಬಲಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಇದನ್ನೂ ಓದಿ: ಶಾಂತಿ ಮಾತುಕತೆ ಮಧ್ಯೆ ಪಾಕ್, ಇಸ್ರೇಲ್ ಮಧ್ಯೆ ಭಯಂಕರ ಕಿತ್ತಾಟ
ಲೆಬನಾನ್ನಲ್ಲಿರುವ ಇರಾನ್ನ ಪ್ರಾಕ್ಸಿ ಹೆಜ್ಬೊಲ್ಲಾ ಉತ್ತರ ಇಸ್ರೇಲಿ ಪಟ್ಟಣವನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ. ಶುಕ್ರವಾರ ಇಸ್ರೇಲ್-ಲೆಬನಾನ್ ಗಡಿಯ ಸಮೀಪವಿರುವ ಕಿರ್ಯಾತ್ ಶ್ಮೋನಾ ಮತ್ತು ಉತ್ತರ ಇಸ್ರೇಲ್ನ ಅಪ್ಪರ್ ಗಲಿಲೀ ಪ್ರದೇಶದ ಮಿಸ್ಗಾವ್ ಆಮ್ ಮೇಲೆ ರಾಕೆಟ್ಗಳನ್ನು ಹಾರಿಸಿರುವುದಾಗಿ ಉಗ್ರಗಾಮಿ ಗುಂಪು ಎಚ್ಚರಿಸಿದೆ.
ನಮ್ಮ ದೇಶ ಮತ್ತು ನಮ್ಮ ಜನರ ವಿರುದ್ಧ ಇಸ್ರೇಲಿ-ಅಮೆರಿಕನ್ ಆಕ್ರಮಣ ನಿಲ್ಲುವವರೆಗೂ ಈ ಪ್ರತಿಕ್ರಿಯೆ ಮುಂದುವರಿಯುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

