2nd PUC Result 2026 – 100ಕ್ಕೆ 111 ಅಂಕ ನೀಡಿದ ಪಿಯು ಬೋರ್ಡ್‌!

1 Min Read

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ (Second PUC Result) ಎಡವಟ್ಟಾಗಿದ್ದು ವಿದ್ಯಾರ್ಥಿಯೊಬ್ಬನಿಗೆ 100ಕ್ಕೆ 111 ಅಂಕವನ್ನು ನೀಡಿ ಪಾಸ್‌ ಮಾಡಲಾಗಿದೆ.

ಹಿಂದಿ (Hindi) ವಿಷಯದಲ್ಲಿ ವಿದ್ಯಾರ್ಥಿಗೆ 100 ಅಂಕಗಳಿಗೆ 111 ಅಂಕ ನೀಡಲಾಗಿದೆ. ಅಂಕಪಟ್ಟಿಯಲ್ಲಿರುವ ನೋಂದಣಿ ಸಂಖ್ಯೆಯನ್ನು ಹಾಕಿ ಫಲಿತಾಂಶವನ್ನು ಪಬ್ಲಿಕ್‌ ಟಿವಿ ಪರಿಶೀಲಿಸಿದ್ದು ಈಗಲೂ ವೆಬ್‌ಸೈಟ್‌ನಲ್ಲಿ 111 ಅಂಕವನ್ನೇ ತೋರಿಸುತ್ತಿದೆ.

ಹಿಂದಿ ವಿಷಯದಲ್ಲಿ ಥಿಯರಿಯಲ್ಲಿ ವಿದ್ಯಾರ್ಥಿಗೆ 94 ಅಂಕ ಬಂದಿದ್ದರೆ ಕಾಲೇಜು 17 ಆಂತರಿಕ ಅಂಕಗಳನ್ನು ನೀಡಿದೆ. ಇಲ್ಲಿ 80 ಅಂಕಗಳಿಗೆ 94 ಅಂಕ ನೀಡಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ. ಇದನ್ನೂ ಓದಿ: 2nd PUC Result | 5,46,698 ವಿದ್ಯಾರ್ಥಿಗಳು ಪಾಸ್‌ – ಫಸ್ಟ್‌ ಟೈಮ್‌ ಶೇ.86.48 ಫಲಿತಾಂಶ: ಮಧು ಬಂಗಾರಪ್ಪ ಹರ್ಷ

ಈ ವಿದ್ಯಾರ್ಥಿಯದ್ದು ಮಾತ್ರ ಅಲ್ಲ ಅನೇಕ ವಿದ್ಯಾರ್ಥಿಗಳ ಫಲಿತಾಂಶವನ್ನು ತಪ್ಪಾಗಿ ಪ್ರಕಟಿಸಿದೆ. 6 ವಿಷಯದಲ್ಲೂ 100 ಕ್ಕಿಂತ ಹೆಚ್ಚು ಅಂಕವನ್ನು ನೀಡಲಾಗಿದೆ. ಓರ್ವ ವಿದ್ಯಾರ್ಥಿಗೆ 600 ಅಂಕಕ್ಕೆ 683 ಅಂಕಗಳನ್ನು ನೀಡಲಾಗಿದೆ. ಅಂಕ ಉತ್ತಮಪಡಿಸಿಕೊಳ್ಳಲು ಮರು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದಲ್ಲೂ ತಪ್ಪಾಗಿದೆ.

ಈ ಪೈಕಿ ಡಿಜಿಲಾಕರ್‌ನಲ್ಲಿ ಕೆಲವರ ಅಂಕಪಟ್ಟಿ ಸರಿಯಾಗಿ ಬಂದಿದ್ದರೆ ವೆಬ್‌ಸೈಟ್‌ನಲ್ಲಿ ತಪ್ಪಾಗಿದೆ. ಜವಾಬ್ದಾರಿಯುತವಾಗಿ ಫಲಿತಾಂಶ ಪ್ರಕಟಿಸಬೇಕಾದ ಬೋರ್ಡ್‌ ಈ ರೀತಿಯ ತಪ್ಪು, ತಪ್ಪು ಫಲಿತಾಂಶವನ್ನು ಪ್ರಕಟಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿಸುತ್ತಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಈ ಎಡವಟ್ಟಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತಾಂತ್ರಿಕ ದೋಷದಿಂದ ಈ ಸಮಸ್ಯೆಯಾಗಿದೆ. ಈಗ ಪರಿಶೀಲನೆ ಮಾಡಲಾಗಿದ್ದು ಸಮಸ್ಯೆ ಸರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ವೆಬ್‌ಸೈಟ್‌ನಲ್ಲೂ ಸಮಸ್ಯೆ ಮಾಡಲಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಗಾಬರಿಯಾಗುವ ಅಗತ್ಯವಿಲ್ಲ. 50-60 ವಿದ್ಯಾರ್ಥಿಗಳ ಅಂಕದಲ್ಲಿ ಈ ರೀತಿಯ ಸಮಸ್ಯೆಯಾಗಿದೆ. ತಾಂತ್ರಿಕ ದೋಷವೇ? ಅಥವಾ ನಮ್ಮ ಅಧಿಕಾರಿಗಳ ತಪಪ್ಪಿನಿಂದ ಆಗಿದ್ಯಾ ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Share This Article