ಮುಂದಿನ ವಾರ ತುಮಕೂರು ರಸ್ತೆ ಫ್ಲೈಓವರ್‌ ಬಂದ್‌ ಸಾಧ್ಯತೆ

1 Min Read

ಬೆಂಗಳೂರು: ರಾಜಧಾನಿಯಿಂದ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ಫ್ಲೈ ಓವರ್‌ ರಸ್ತೆ(Tumakuru Flyover) ಮುಂದಿನ ವಾರ ಬಂದ್‌ ಆಗುವ ಸಾಧ್ಯತೆಯಿದೆ.

ಸಂಚಾರ ಪೊಲೀಸರು (Bengaluru Traffic Police) ಅನುಮತಿ ನೀಡಿದರೆ ಸೋಮವಾರ ಬೆಳಗ್ಗೆಯಿಂದ ಶುಕ್ರವಾರದವರೆಗೆ ಬಂದ್‌ ಆಗಲಿದೆ.

ಬಂದ್‌ ಯಾಕೆ?
ತುಮಕೂರು ಫ್ಲೈಓವರ್‌ ರಸ್ತೆಯಲ್ಲಿ ಅಂತಿಮ ಲೋಡ್ ಪರೀಕ್ಷೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಿದ್ದತೆ ನಡೆಸಿದೆ. ಫ್ಲೈ ಓವರ್ ಗೆ ಹೊಸದಾಗಿ 1422 ಕೇಬಲ್ ಅಳವಡಿಕೆ ಹಿನ್ನೆಯಲ್ಲಿ ಲೋಡ್ ಟೆಸ್ಟಿಂಗ್ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು ಸಂಚಾರ ಪೊಲೀಸ್‌ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.  ಇದನ್ನೂ ಓದಿ: 1 ಲಕ್ಷ ಲಂಚ ಪಡೆದು ಪರಾರಿಗೆ ಯತ್ನ – ಅಧಿಕಾರಿಯನ್ನು ಚೇಸ್ ಮಾಡಿ ಹಿಡಿದ ʻಲೋಕಾʼ ಪೊಲೀಸರು

 

ಈ ಪ್ರಸ್ತಾವನೆಗೆ ಬೆಂಗಳೂರು ಪೊಲೀಸರು ಅನುಮತಿ ನೀಡಿದರೆ ಏಪ್ರಿಲ್ 13 ರಿಂದ ಏಪ್ರಿಲ್ 17 ರವರೆಗೆ ಫ್ಲೈ ಓವರ್ ಬಂದ್‌ ಆಗಲಿದೆ. ಸೋಮವಾರ ಬೆಳಗ್ಗೆ 11 ಗಂಟೆಯಿಂದ 17ರ ಬೆಳಗ್ಗೆ 11 ರವರೆಗೆ ಫ್ಲೈ ಓವರ್‌ ಮುಚ್ಚಲಾಗುತ್ತದೆ. 2010 ರಲ್ಲಿ ಸಂಚಾರಕ್ಕೆ‌ ಈ ಮೇಲ್ಸೇತುವೆ ಮುಕ್ತವಾಗಿತ್ತು. ಇದನ್ನೂ ಓದಿ: ಮಾನಸಿಕ ಖಿನ್ನತೆಯಿಂದ ಸಿಜೆ ರಾಯ್‌ ಆತ್ಮಹತ್ಯೆ – ಎಸ್‌ಐಟಿ ತನಿಖೆ ಪೂರ್ಣ

ಪೀಣ್ಯಾ ಫ್ಲೈ ಓವರ್ 82 ಗಂಟೆ ಬಂದ್ ಆದರೆ ಗೊರಗೊಂಟೆ ಪಾಳ್ಯ ಸೇರಿದಂತೆ ಪೀಣ್ಯದವರೆಗೆ ಸವಾರರಿಗೆ ಟ್ರಾಫಿಕ್‌ ಜಾಮ್‌ ಬಿಸಿ ತಟ್ಟಲಿದೆ.
Share This Article