ಬೆಂಗಳೂರು: 10 ಕಿ.ಮೀ. ರಸ್ತೆಯನ್ನು ಆದಷ್ಟು ಶೀಘ್ರವೇ ದುರಸ್ತಿ ಮಾಡುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಮನವಿ ಮಾಡಿದ್ದಾರೆ.
18 ಆವೃತ್ತಿಯ ಟಿಸಿಎಸ್ ವಿಶ್ವ 10 ಓಟ ಏಪ್ರಿಲ್ 26ರಂದು ಬೆಂಗಳೂರಿನಲ್ಲಿ (Bengluru) ನಡೆಯಲಿದೆ. ಕಳೆದ ವರ್ಷ ರಸ್ತೆಗಳಲ್ಲಿ ಎಲ್ಲೆಡೆ ಗುಂಡಿಗಳೇ ತುಂಬಿದ್ದರಿಂದ ಓಟಗಾರರು ತೊಂದರೆ ಅನುಭವಿಸಿದ್ದರು. ಈ ಬಾರಿ ಈ ರೀತಿಯ ಸಮಸ್ಯೆ ಆಗಬಾರದು. ಈ ನಿಟ್ಟಿನಲ್ಲಿ ರೇಸ್ (Race) ನಡೆಯುವ ಮಾರ್ಗದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ವಿಡಿಯೋ ಮೂಲಕ ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: ದತ್ತಪೀಠದ ತಪ್ಪಲಿನಲ್ಲಿ ಬಾಲಕಿ ನಾಪತ್ತೆ ಕೇಸ್ – ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ವಿದ್ಯಾರ್ಥಿನಿ ತಾಯಿ
TCS World 10K Bengaluru is on 26 April 2026.
Last year, runners suffered through pothole filled roads that were also dug up everywhere.
This year can be different.
We appeal to the CM, DCM and Commissioner: please fix the roads on the race route before then.
This race is… pic.twitter.com/2VYyX7F86J
— Tejasvi Surya (@Tejasvi_Surya) April 9, 2026
ತೇಜಸ್ವಿ ಸೂರ್ಯ ಮನವಿ ಏನು?
ಕಳೆದ ವರ್ಷ ಎಲ್ಲೆಡೆ ಗುಂಡಿಗಳಿಂದ ತುಂಬಿದ ರಸ್ತೆಗಳಿಂದ ಓಟಗಾರರು ತೊಂದರೆ ಅನುಭವಿಸಿದ್ದರು. ಈ ರೇಸ್ ಬೆಂಗಳೂರಿನ ಹೆಮ್ಮೆ. ಓಟಗಾರರು ಭಾರತದಾದ್ಯಂತ ಬರುತ್ತಾರೆ. ಅವರನ್ನು ನಿರಾಸೆ ಮಾಡಬಾರದು. ನಗರದ ಎಲ್ಲಾ ರಸ್ತೆಗಳನ್ನು ಸರಿಪಡಿಸುವುದು ಕೇಳುವುದು ಕಷ್ಟ ಎನ್ನುವುದು ನನಗೆ ತಿಳಿದಿದೆ. ಹೀಗಾಗಿ ಓಟದ ಸ್ಪರ್ಧೆ ಸಾಗುವ 10 ಕಿ.ಮೀ ರಸ್ತೆಯನ್ನು ಮಾತ್ರ ದುರಸ್ತಿ ಮಾಡಿ.
ವಿಐಪಿ ಸಂಚಾರಕ್ಕಾಗಿ ರಸ್ತೆಗಳನ್ನು ರಾತ್ರೋರಾತ್ರಿ ದುರಸ್ತಿ ಮಾಡಲು ಸಾಧ್ಯವಿದೆ ಎನ್ನುವುದಾದರೆ ಬೆಂಗಳೂರಿನ ಡಿತವಾಗಿಯೂ ಈ ರಸ್ತೆಗಳನ್ನು ಎರಡು ವಾರಗಳಲ್ಲಿ ದುರಸ್ತಿ ಮಾಡಲು ಸಾಧ್ಯವಿದೆ ಎಂದು ಹೇಳಿದ್ದಾರೆ.

