ಜಾತ್ರೆ ನೋಡ್ತಿದ್ದವನ ಮೇಲೆಯೇ ಹರಿದ ಪಲ್ಲಕ್ಕಿ ಹೊತ್ತ ಟ್ರ‍್ಯಾಕ್ಟರ್ – ಲಗ್ನಪತ್ರಿಕೆ ನೀಡಲು ಹೋಗಿದ್ದ ಯುವಕ ಮಸಣಕ್ಕೆ

1 Min Read

ಬೆಂಗಳೂರು: ಸಂಬಂಧಿಕರಿಗೆ ಲಗ್ನಪತ್ರಿಕೆ ನೀಡಲು ಹೋಗಿದ್ದ ಯುವಕ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತ ಟ್ರ‍್ಯಾಕ್ಟರ್ ಹರಿದು ಮಸಣ ಸೇರಿರುವ ಘಟನೆ ಬೆಂಗಳೂರಿನ (Bengaluru) ಹುಳಿಮಾವಿನಲ್ಲಿ (Hulimavu) ನಡೆದಿದೆ.

ಬನಶಂಕರಿ ನಿವಾಸಿ ಅಕ್ಷತ್ ಮೃತ ದುರ್ದೈವಿ. ಏ.29ರಂದು ಹಸಮಣೆ ಏರಬೇಕಿತ್ತು. ಈ ಹಿನ್ನೆಲೆ ಸಂಬಂಧಿಕರಿಗೆ ಲಗ್ನಪತ್ರಿಕೆ ನೀಡಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: Iran-US-Israel War | ಮಧ್ಯಪ್ರಾಚ್ಯ ಯುದ್ಧಕ್ಕೆ 4.62 ಲಕ್ಷ ಕೋಟಿ ಡಾಲರ್‌ ನೆರವು ಅಗತ್ಯ: ಐಎಂಎಫ್‌

ಹುಳಿಮಾವಿನಲ್ಲಿನ ಸಂಬಂಧಿಕರ ಮನೆಗೆ ಲಗ್ನಪತ್ರಿಕೆ ನೀಡಲು ಯುವಕ ಹೋಗಿದ್ದ. ಈ ವೇಳೆ ಸಂಬಂಧಿಕರು ಜಾತ್ರೆ ನೋಡಿಕೊಂಡು ಬೆಳಿಗ್ಗೆ ಹೋಗು ಎಂದು ಹೇಳಿ ಅಲ್ಲಿಯೇ ಇರಿಸಿಕೊಂಡಿದ್ದರು. ಅದರಂತೆ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವಕ್ಕೆ ತೆರಳಿ, ಅಲ್ಲಿ ಪಲ್ಲಕ್ಕಿಯನ್ನು ನೋಡುತ್ತಾ ನಿಂತಿದ್ದ. ಈ ವೇಳೆ ಪಲ್ಲಕ್ಕಿ ಹೊತ್ತ ಟ್ರ‍್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದ ಯುವಕ ಮೇಲೆ ಹರಿದುಹೋಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತವಾಗುತ್ತಿದ್ದಂತೆ ಟ್ರ‍್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಇನ್ನೂ ಈ ದುರಂತ ಘಟನೆ ನಡೆದರೂ ದೇವಾಲಯದ ಟ್ರಸ್ಟಿಗಳು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಜಾನೆ ಪಲ್ಲಕ್ಕಿಗಳನ್ನು ತೆರವುಗೊಳಿಸಲು ಪೊಲೀಸರು ಒತ್ತಡ ಹೇರಿದ್ರು ಎನ್ನಲಾಗಿದೆ. ಸ್ಥಳಕ್ಕೆ ಬೆಂಗಳೂರು ದಕ್ಷಿಣ ಸಂಚಾರಿ ಡಿಸಿಪಿ ಗೋಪಾಲ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿನ ಪರಿಸ್ಥಿತಿ ನೋಡಿದಾಗ ಟ್ರ‍್ಯಾಕ್ಟರ್ ಡ್ರೈವರ್ ಸಡನ್ ಆಗಿ ಮೂ ಮಾಡಿದ್ದಾನೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಸದ್ಯ ಟ್ರ‍್ಯಾಕ್ಟರ್ ಡ್ರೈವರನ್ನು ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದೇವೆ ಎಂದು ಬೆಂಗಳೂರು ದಕ್ಷಿಣ ಸಂಚಾರಿ ಡಿಸಿಪಿ ಗೋಪಾಲ್ ಅವರು ತಿಳಿಸಿದ್ದಾರೆ.ಇದನ್ನೂ ಓದಿ: ಕದನ ವಿರಾಮವಿದ್ದರೂ ಲೆಬನಾನ್ ಮೇಲೆ ಭಯಾನಕ ದಾಳಿ – ಪಾಕ್ ಸಂಧಾನ ಸಭೆ ನಡೆಯೋದೇ ಡೌಟ್!

Share This Article