ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.86.48 ರಷ್ಟು ಫಲಿತಾಂಶ ಬಂದಿದೆ ಅಂತ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಉತ್ತೀರ್ಣ ಅಂಕವನ್ನು ಶೇ.35ರಿಂದ ಶೇ.33ಕ್ಕೆ ನಿಗದಿ ಮಾಡಿರುವ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ.13 ರಷ್ಟು ಏರಿಕೆಯಾಗಿದೆ.
ಕಳೆದ ವರ್ಷ 7.7% ಫಲಿತಾಂಶ ಕಡಿಮೆ ದಾಖಲಾಗಿತ್ತು. 6 ಲಕ್ಷದ 32 ಸಾವಿರದ 200 ಪೈಕಿ 5 ಲಕ್ಷದ 46 ಸಾವಿರದ 698 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.72.86, ವಾಣಿಜ್ಯ ವಿಭಾಗದಲ್ಲಿ ಶೇ.88.04 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.86.48 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಬಾಲಕರು 2,32,928 (83.65%) ಹಾಗೂ ಬಾಲಕಿಯರು 3,13,770 (88.07%) ಉತ್ತೀರ್ಣ ಆಗಿದ್ದಾರೆ. ಇದನ್ನೂ ಓದಿ: 2nd PUC Result | 5,46,698 ವಿದ್ಯಾರ್ಥಿಗಳು ಪಾಸ್ – ಫಸ್ಟ್ ಟೈಮ್ ಶೇ.86.48 ಫಲಿತಾಂಶ: ಮಧು ಬಂಗಾರಪ್ಪ ಹರ್ಷ
ಇನ್ನೂ ಶೇ.96.39 ಫಲಿತಾಂಶದೊಂದಿಗೆ ಉಡುಪಿ ಪ್ರಥಮವಾಗಿದ್ದರೆ 71.21% ಫಲಿತಾಂಶದೊಂದಿಗೆ ಯಾದಗಿರಿ ಕೊನೇ ಸ್ಥಾನದಲ್ಲಿದೆ. ನಗರ ಪ್ರದೇಶದಲ್ಲಿ 85.95% ರಿಸಲ್ಟ್ ಬಂದಿದ್ದರೆ ಗ್ರಾಮೀಣ ಭಾಗದಲ್ಲಿ 87.62% ರಿಸಲ್ಟ್ ದಾಖಲಾಗಿದೆ. ಡಿಸ್ಟಿಂಕ್ಷನ್ 1.70 ಲಕ್ಷ, ಪ್ರಥಮ ದರ್ಜೆ 2.95 ಲಕ್ಷ, ದ್ವಿತೀಯ ದರ್ಜೆ 63,957 ಹಾಗೂ ಜಸ್ಟ್ ಪಾಸಾದವರು 16,827 ವಿದ್ಯಾರ್ಥಿಗಳು. 5,577 ಮಕ್ಕಳು ಶೇ.33ರ ಪಾಸಿಂಗ್ ಮಾರ್ಕ್ಸ್ನಿಂದ ಪಾಸಾಗಿದ್ದಾರೆ ಅಂತ ಮಧು ಬಂಗಾರಪ್ಪ ಹೇಳಿದರು. ಇದನ್ನೂ ಓದಿ: 2nd PUC Result | ದಕ್ಷಿಣ ಕನ್ನಡದ ದಿಶಾ ರಾಜ್ಯಕ್ಕೆ ಪ್ರಥಮ – 600ಕ್ಕೆ 600 ಅಂಕ
ಸೌಂದರ್ಯ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ
ಇನ್ನೂ 2025-26ನೇ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬೆಂಗಳೂರು ಉತ್ತರ ಭಾಗದ ಪ್ರತಿಷ್ಠಿತ ಸೌಂದರ್ಯ ಪಿಯು ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದ ಸ್ಫೋರ್ತಿ 596 (99.33) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದರೆ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಚಂದನ್ ಎಸ್.ಭಟ್ 595 (99.16), ಸೂರ್ಯಕಿರಣ್ 593 (98.83), ನಿನಾದ್ 592 (98.66) ಅಂಕಗಳನ್ನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಒಟ್ಟಾರೆ ಕಾಲೇಜಿಗೆ ಶೇ.99 ಫಲಿತಾಂಶ ಬಂದಿದ್ದು, ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಕೀರ್ತನ್ ಕುಮಾರ್ ಹಾಗೂ ಆಡಳಿತ ಮಂಡಳಿಯವರು ವುದ್ಯಾರ್ಥಿಗಳಿಗೆ ಶುಭಕೋರಿದ್ದಾರೆ.
ಪಿಯುಸಿ ಟಾಪರ್ಸ್
ವಾಣಿಜ್ಯ ವಿಭಾಗ
* ಅದಿತಿ ಬಾಪು – 600ಕ್ಕೆ 600 ಅಂಕ
ಜೈನ್ ಕಾಲೇಜ್, ಬೆಂಗಳೂರು
* ದಿಶಾ – 600ಕ್ಕೆ 600 ಅಂಕ
ಆಳ್ವಾಸ್ ಕಾಲೇಜ್, ಮೂಡಬಿದ್ರೆ
ವಿಜ್ಞಾನ ವಿಭಾಗ
* ಪ್ರಿನ್ಸಿಲಾ ಕಾರ್ಡೋಜಾ – 600ಕ್ಕೆ 599 ಅಂಕ
ಲರ್ನಿಂಗ್ ಸೆಂಟರ್ ಕಾಲೇಜ್,ಮಂಗಳೂರು
ಕಲಾ ವಿಭಾಗ
ಸಂಗೀತಾ – 600ಕ್ಕೆ 598 ಅಂಕ
ಇಂದು ಪಿಯು ಕಾಲೇಜ್, ಕೊಟ್ಟೂರು (ವಿಜಯನಗರ)
ಅರ್ಚನಾ – 600ಕ್ಕೆ 598 ಅಂಕ
ಇಂದು ಪಿಯು ಕಾಲೇಜ್, ಕೊಟ್ಟೂರು (ವಿಜಯನಗರ)




