ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ – ಆರೋಪಿ ಮಹೇಂದ್ರ ಕಳುಹಿಸಿದ್ದ ಮಸೇಜ್ ರಿಟ್ರೀವ್

2 Min Read

– 10,34 ಲಕ್ಷದಷ್ಟು ಡಿಜಿಟಲ್ ಫೈಲ್, 485 ಫೋನ್ ಪೇ ಚಾಟ್ ಪತ್ತೆ

ಬೆಂಗಳೂರು: ವೈದ್ಯೆ ಕೃತಿಕಾ ರೆಡ್ಡಿ (Krithika Reddy) ಕೊಲೆ ಪ್ರಕರಣದ ಆರೋಪಿಯಾಗಿರುವ ಮಹೇಂದ್ರ ರೆಡ್ಡಿ (Mahendra Reddy) ಕಳುಹಿಸಿದ್ದ ಮೆಸೇಜ್‌ಗಳನ್ನು ಎಫ್‌ಎಸ್‌ಎಲ್ ಇದೀಗ ರಿಟ್ರೀವ್ ಮಾಡಿದೆ.

ಮಾರತ್ತಹಳ್ಳಿಯಲ್ಲಿ ಡರ್ಮಟಾಲಜಿಸ್ಟ್ ಆಗಿದ್ದ ವೈದ್ಯೆ ಕೃತಿಕಾ ರೆಡ್ಡಿ ಕೊಲೆಯಾಗಿತ್ತು. ಪತಿ ಮಹೇಂದ್ರ ರೆಡ್ಡಿಯೇ ಅನಸ್ತೇಷಿಯಾವನ್ನು ಐವಿ ಫ್ಲ್ಯೂಯೆಡ್ ಮೂಲಕ ನೀಡಿ ಕೊಂದಿದ್ದ. ಆರಂಭದಲ್ಲಿ ಕೃತಿಕಾ ರೆಡ್ಡಿ ಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾಳೆ ಎನ್ನಲಾಗಿತ್ತು. ಆದರೆ ಪೋಸ್ಟ್ ಮಾರ್ಟಂ ವೇಳೆ ದೇಹದ ಅನಸ್ತೇಷಿಯಾ ನೀಡಿರೋದು ಗೊತ್ತಾಗಿತ್ತು. ಹಾಗಾಗಿ ಅಸಹಜ ಸಾವು ಎಂದು ದಾಖಲಾಗಿದ್ದ ಕೇಸ್‌ನ್ನು ಪೊಲೀಸರು ಕೊಲೆ ಪ್ರಕರಣ ಎಂದು ಬದಲಾಯಿಸಿಕೊಂಡು ಪತಿಯನ್ನು ಬಂಧಿಸಿದ್ದರು. ಇದನ್ನೂ ಓದಿ: ಮಹೇಂದ್ರ ರೆಡ್ಡಿಗೆ ಬೇರೆ ಯುವತಿ ಜೊತೆ ಸಂಬಂಧ ಶಂಕೆ – ವೈದ್ಯೆ ಕೃತಿಕಾ ಸಾವಿನ ಹಿಂದೆ ಅವಳ ನೆರಳು?

ಪ್ರಕರಣದ ತನಿಖೆ ಮುಂದುವರೆಸಿರುವ ಮಾರತ್ತಹಳ್ಳಿ ಪೊಲೀಸರು ಕೊಲೆಯ ಹಿಂದಿನ ಕಾರಣವನ್ನು ಬಯಲು ಮಾಡಿದ್ದಾರೆ. 2022ರಿಂದಲೇ ಪ್ರೀತಿಯಲ್ಲಿದ್ದ ಆಸಾಮಿ 2024ರಲ್ಲಿ ಕೃತಿಕಾ ರೆಡ್ಡಿ ವಿವಾಹವಾಗಿದ್ದ. ಹಣದಾಸೆಗೆ ಕೃತಿಕಾ ರೆಡ್ಡಿಯನ್ನು ಕೊಂದು ಪ್ರೇಯಸಿ ಜೊತೆಗಿರಲು ಹೊಂಚು ಹಾಕಿದ್ದ. ಅದಕ್ಕೆ ಪೂರಕ ಎಂಬಂತೆ ಕೃತಿಕಾ ರೆಡ್ಡಿ ಕೊಲೆ ಬಳಿಕ ಮಹೇಂದ್ರ ರೆಡ್ಡಿ ಫೋನ್ ಪೇ ಮೂಲಕ ಪ್ರಿಯತಮೆಗೆ ಕಳುಸಿದ್ದ ಮೆಸೇಜ್ ಅನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ

ಮೆಸೇಜ್‌ನಲ್ಲೇನಿದೆ?

  • ಈ ಮೆಸೇಜ್ ನೋಡಿದ ನಂತರ ನನಗೆ ನೀನು ಯಾವುದರಿಂದಲೂ ಮೆಸೇಜ್ ಅಥವಾ ಕರೆ ಮಾಡಬೇಡ. ಎಲ್ಲವೂ ಸರಿಯಾದ ನಂತರ ನಾನು ನಿನಗೆ ಫೋನ್ ಮಾಡ್ತೇನೆ, ಪೊಲೀಸರು ನಮ್ಮ ಸಂಬಂಧದ ಬಗ್ಗೆ ಕೇಳಲು ನಿನ್ನನ್ನ ಕರೆಯಬಹುದು. ಆಗ ನಾವು ಸ್ನೇಹಿತರು ಅಂತಷ್ಟೇ ಹೇಳು. ನೀವು ಪದೇ ಪದೇ ನನಗೆ ಕರೆ ಮಾಡಿದ್ರಾ ಅಂತಾ ಕೇಳಿದರೆ ಹೌದು, ನಾನು ಆಸ್ಪತ್ರೆಯ ಬಗ್ಗೆ ಸಹಾಯ ಕೇಳಿದೆ ಅಂತಾ ಹೇಳು
  • ನಾನು ಬೇಗ ಹೋಗಿ ನನ್ನ ಹೆತ್ತವರಿಗೆ ಮತ್ತು ಕೃತಿಕಾ ಹೆತ್ತವರಿಗೆ ಹೇಳುತ್ತೇನೆ. ನಾನು ಕೃತಿಕಾಳನ್ನು ಕೊಂದಿದ್ದೇನೆ ಆದರೆ ನನ್ನ ಬಳಿ ಪುರಾವೆ ಇಲ್ಲ. ಅಲ್ಲದೇ ಜೈಲಿಗೆ ಹೋಗುತ್ತೇನೆ, ಆಗ ನೀನೂ ಸೇರಿದಂತೆ ಎಲ್ಲರೂ ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ
  • ನಾನು ಇದನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ, ಹೋಗಿ ನೀನು ಆರಾಮವಾಗಿರು. ನೀನು ಬಯಸಿದಂತೆ ನಾನು ಖುಷಿಯಾಗಿದ್ದು, ಸಾಯುತ್ತೇನೆ. ಕೊಲೆಗಾರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ಕೊಲೆಗಾರನಾಗಿಯೇ ಜೀವನವನ್ನು ನಡೆಸುತ್ತೇನೆ.

ಕೊಲೆ ಬಳಿಕ ಮಹೇಂದ್ರ ರೆಡ್ಡಿ ಹೀಗೆ ತನ್ನ ಪ್ರಿಯತಮೆಗೆ ಫೋನ್ ಪೇನಲ್ಲಿ ಮೆಸೇಜ್ ಮಾಡಿದ್ದ. ಮೊಬೈಲ್ ರಿಟ್ರೀವ್‌ಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದ ಮಾರತ್ತಹಳ್ಳಿ ಪೊಲೀಸರು ಇದೀಗ ಎಲ್ಲಾ ಮೆಸೇಜ್‌ಗಳನ್ನು ರಿಟ್ರೀವ್ ಮಾಡಿದ್ದಾರೆ. ಇದು ಕೃತಿಕಾ ರೆಡ್ಡಿ ಕೊಲೆಯ ಪ್ರಮುಖ ಟೆಕ್ನಿಕಲ್ ಸಾಕ್ಷ್ಯವಾಗಿದೆ. ಇನ್ನು ಇಷ್ಟೇ ಅಲ್ಲದೇ ಆರೋಪಿ ಮಹೇಂದ್ರ ರೆಡ್ಡಿ ಮೊಬೈಲ್ ರಿಟ್ರೀವ್‌ನಲ್ಲಿ 485 ಫೋನ್ ಪೇ ಚಾಟ್ ಪತ್ತೆಯಾಗಿದ್ದು, ಈ ಪೈಕಿ ಮೂರು ಮೆಸೇಜ್‌ಗಳನ್ನ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ.

ಮೊಬೈಲ್ ರಿಟೀವ್‌ನಲ್ಲಿ ಒಟ್ಟು 10,34 ಲಕ್ಷದಷ್ಟು ಡಿಜಿಟಲ್ ಫೈಲ್‌ಗಳನ್ನ ರಿಟ್ರೀವ್ ಮಾಡಿದ್ದು, ಪ್ರಮುಖ ಫೈಲ್‌ಗಳನ್ನು ಹೆಚ್ಚುವರಿ ಚಾರ್ಜ್ಶೀಟ್‌ನಲ್ಲಿ ಸಲ್ಲಿಸಲಿದ್ದಾರೆ.ಇದನ್ನೂ ಓದಿ:ಕಳೆದ ಅಕ್ಟೋಬರ್‌ನಿಂದಲೇ ಹತ್ಯೆಗೆ ಸ್ಕೆಚ್‌, ಮರಣೋತ್ತರ ಪರೀಕ್ಷೆಯನ್ನ ನಾನು ನೋಡಬೇಕು ಎಂದಿದ್ದ ಮಹೇಂದ್ರ ರೆಡ್ಡಿ

Share This Article