ಒಡೆದ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಹೊಸ ಫೋನ್‌ ಗಿಫ್ಟ್‌ ಕೊಟ್ಟ ಸಂಜು ಸ್ಯಾಮ್ಸನ್!

1 Min Read

ಡೆದ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಗೆ ಕೇರಳ (Kerala) ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್ (Sanju Samson) ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದ್ದಾರೆ.

ಪಾಲಕ್ಕಾಡ್‌ನ ಕದಂಬಜಿಪುರಂ ಮೂಲದ ಶಬರೀಶ್ ಸಂಜು ಸ್ಯಾಮ್ಸನ್ ಅವರಿಂದ ಫೋನ್ ಉಡುಗೊರೆಯಾಗಿ ಪಡೆದವರು. ಏ.7ರ ಸಂಜೆ 5:30ರ ಸುಮಾರಿಗೆ ಕದಂಬಜಿಪುರಂ ಪುಂಚಪ್ಪಡಂ ಬಸ್ ನಿಲ್ದಾಣದ ಬಳಿ ರೇಂಜ್ ರೋವರ್ ಕಾರಿನಲ್ಲಿ ಸಂಜು ಸ್ಯಾಮ್ಸನ್ ಬಂದಿದ್ದರು. ಈ ವೇಳೆ ಕಾರ್‌ ನಿಲ್ಲಿಸಿ ಫೋನ್‌ನಲ್ಲಿ ಮಾತಾಡುತ್ತಿದ್ದರು. ಅಲ್ಲೇ ಕ್ರಿಕೆಟ್‌ ಆಡುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ಸಂಜು ಅವರ ಅಭಿಮಾನಿ ಶಬರೀಶ್ ಅವರನ್ನು ಗಮನಿಸಿ, ಅಲ್ಲಿಗೆ ತೆರಳಿದ್ದರು.

ಈ ವೇಳೆ ಸಂಜು ವಿಡಿಯೋ ಕಾಲ್​ನಲ್ಲಿದ್ದರು, ಶಬರೀಶ್​ ಬರುವುದನ್ನು ನೋಡಿ ಕಾಯುವಂತೆ ಕೈ ಸನ್ನೆ ಮಾಡಿದರು. ವಿಡಿಯೋ ಕಾಲ್​ನಲ್ಲಿ ಮಾತನಾಡಿದ ಬಳಿಕ, ಶಬರೀಶ್​ನನ್ನು ಹತ್ತಿರ ಕರೆದು ಮಾತನಾಡಿಸಿದರು. ಈ ವೇಳೆ ಸೆಲ್ಫಿ ಕ್ಲಿಕ್ಕಿಸಲು ಶಬರೀಶ್ ಮುಂದಾದರು. ಆಗ ಫೋನ್‌ನ ಡಿಸ್​ಪ್ಲೇ ಬಿರುಕು ಬಿಟ್ಟಿರುವುದನ್ನು ಸಂಜು ಗಮನಿಸಿದರು. ಕೂಡಲೇ ತಮ್ಮ ಕಾರಿನಲ್ಲಿದ್ದ ಸುಮಾರು 40 ಸಾವಿರ ರೂ. ಬೆಲೆ ಬಾಳುವ ಒಂದು ಫೋನ್ ತೆಗೆದು ಗಿಫ್ಟ್‌ ಆಗಿ ಶಬರೀಶ್‌ಗೆ ಕೊಟ್ಟರು. ಬಳಿಕ ಕ್ರಿಕೆಟ್ ಚೆನ್ನಾಗಿ ಆಡುವಂತೆ ಸಲಹೆ ನೀಡಿ‌, ಪ್ರಯಾಣ ಮುಂದುವರಿಸಿದರು.

ಈ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಸರಳ ವ್ಯಕ್ತಿತ್ವದ ಸಂಜು ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಆಡುತ್ತಿರುವ ಸಂಜು, ಆದಷ್ಟು ಬೇಗ ತಮ್ಮ ಫಾರ್ಮ್​ಗೆ ಮರಳಲಿ ಎಂಬುದು ಅಭಿಮಾನಿಗಳ ಬಯಕೆ.

Share This Article