ಶಿವಮೊಗ್ಗ: ಇರಾನ್ – ಇಸ್ರೇಲ್ ಯುದ್ಧದ (Iran – Israel War) ಬಿಸಿ ಜಿಲ್ಲೆಯ ಸೊರಬ (Soraba) ಪಟ್ಟಣಕ್ಕೂ ತಟ್ಟಿದೆ. ನಗರದ 6 ಪೆಟ್ರೋಲ್ (Petrol) ಬಂಕ್‌ಗಳಲ್ಲಿ 5 ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ಇದರಿಂದ ಉಳಿದ ಒಂದು ಬಂಕ್‌ಗೆ ಜನ ಮುಗಿಬಿದ್ದಿದ್ದಾರೆ.
ಇದರಿಂದ ನೂಕುನುಗ್ಗಲು ಉಂಟಾಗಿದ್ದು, ಬಂಕ್‌ನಲ್ಲಿ ಗ್ರಾಹಕರ ನಡುವೆ ಗಲಾಟೆಯಾಗಿದೆ. ಅಲ್ಲದೇ ಗ್ರಾಹಕರು ಬಾಟಲಿಯನ್ನು ಸಹ ಬಂಕ್‌ಗೆ ತಂದಿದ್ದಾರೆ. ಈ ವೇಳೆ ಬಂಕ್ ಸಿಬ್ಬಂದಿ ಬಾಟಲ್‌ಗೆ ಪೆಟ್ರೋಲ್ ಹಾಕಲು ನಿರಾಕರಿಸಿದ್ದಾರೆ. ಇದರಿಂದ ಬಂಕ್ ಸಿಬ್ಬಂದಿ ಜೊತೆ ಜನ ವಾಗ್ವಾದ ಮಾಡಿದ್ದಾರೆ. ಅವಾಚ್ಯ ಶಬ್ಧದಿಂದ ಬಂಕ್ ಸಿಬ್ಬಂದಿಗೆ ನಿಂದಿಸಿ, ತಳ್ಳಾಡಿದ್ದಾರೆ. ಇದನ್ನೂ ಓದಿ: ಪ್ರಮುಖ ವಲಯಗಳಿಗೆ ಹೆಚ್ಚಿನ ಎಲ್‌ಪಿಜಿ ಹಂಚಿಕೆ ಮಾಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ
ಸೊರಬ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಕೇರಳಕ್ಕೆ ಮತ ಚಲಾಯಿಸಲು ಹೊರಟಿದ್ದಾಗ ಕಾರು ಅಪಘಾತ – ವ್ಯಕ್ತಿಯ ಸ್ಥಿತಿ ಗಂಭೀರ

