ಬಳ್ಳಾರಿ: ರೈಲ್ವೇ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡುವ ಮೂಲಕ ರೈಲಿನಲ್ಲಿ(Rail) ಸಾಗಾಟ ಮಾಡ್ತಿದ್ದ ಬರೋಬ್ಬರಿ 40.49ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ವಾಸ್ಕೋ ಡ ಗಾಮಾ ಶಾಲಿಮರ್ ಅಮರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಗಾಂಜಾ(Ganja) ಸಾಗಾಟ ಮಾಡಲಾಗುತ್ತಿತ್ತು. ಶ್ವಾನದಳದ ಮೂಲಕ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ರೈಲ್ವೇ ಪೊಲೀಸರು ಗಾಂಜಾ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ರೈಲಿನ ಜನರಲ್ ಬೋಗಿಯ ಸೀಟ್ ಕೆಳಗಡೆ ಪ್ಯಾಕ್ ಮಾಡಿ ಗಾಂಜಾ ಇಟ್ಟಿದ್ದರು. ಶ್ವಾನದಳದ ಮೂಲಕ 19 ಬಂಡಲ್ ನಲ್ಲಿದ್ದ 20.24 ಲಕ್ಷ ಮೌಲ್ಯದ 40.49 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ತನಿಖೆ ಮುಂದುವರಿದಿದೆ.

