ನವದೆಹಲಿ: ಅಮೆರಿಕ-ಇರಾನ್ (US-Iran) ನಡುವೆ ಕದನ ವಿರಾಮಕ್ಕೆ (Ceasefire) ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದ್ದು ಭಾರತದ ರಾಜತಾಂತ್ರಿಕತೆಗೆ ಆಗಿರುವ ದೊಡ್ಡ ಹಿನ್ನಡೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್(Jairam Ramesh) ಟೀಕಿಸಿದ್ದಾರೆ.
ಮೋದಿ ಸರ್ಕಾರದ (Narendra Modi) ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ ಅವರು, 2008ರ ಮುಂಬೈ ದಾಳಿಯ ನಂತರ ಡಾ. ಮನಮೋಹನ್ ಸಿಂಗ್ ಸರ್ಕಾರವು ಪಾಕಿಸ್ತಾನದ(Pakistan) ದುಷ್ಕೃತ್ಯಗಳನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುವ ಮೂಲಕ ಆ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಒಂಟಿಯಾಗಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಮೋದಿ ಸರ್ಕಾರವು ಪಾಕಿಸ್ತಾನವನ್ನು ಒಂಟಿಯಾಗಿಸುವ ಬದಲು, ಆ ದೇಶವು ಈಗ ಅಮೆರಿಕ-ಇರಾನ್ ನಡುವೆ ಸಂಧಾನಕಾರನಾಗಿ ಹೊರಹೊಮ್ಮುವಂತೆ ಮಾಡಿದೆ ಎಂದು ದೂರಿದ್ದಾರೆ.
ಪಶ್ಚಿಮ ಏಷ್ಯಾದ ಸಂಘರ್ಷದಲ್ಲಿ ಪಾಕಿಸ್ತಾನವು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿರುವುದು ಭಾರತದ ರಾಜತಾಂತ್ರಿಕತೆಗೆ ಆಗಿರುವ ದೊಡ್ಡ ಹಿನ್ನಡೆ. ಪಾಕಿಸ್ತಾನವನ್ನು ಜಾಗತಿಕವಾಗಿ ಒಂಟಿಯಾಗಿಸುವ ಭಾರತದ ಪ್ರಯತ್ನ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
The entire world will cautiously welcome the two-week ceasefire in the West Asia conflict between the US and Israel on the one side and Iran on the other.
The conflict had begun on Feb 28th with the targeted assassinations of the topmost echelons of the regime in Iran. These…
— Jairam Ramesh (@Jairam_Ramesh) April 8, 2026
ಪ್ರಧಾನಿ ಮೋದಿ ಅವರು ತಮ್ಮನ್ನು ತಾವು ‘ವಿಶ್ವಗುರು’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಪಾಕಿಸ್ತಾನದಂತಹ ದೇಶವು ಜಾಗತಿಕ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಮೋದಿ ಅವರ “ವ್ಯಕ್ತಿತ್ವ ಆಧಾರಿತ ವಿದೇಶಾಂಗ ನೀತಿ”ಯ ವೈಫಲ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಘೋಷಣೆಯಲ್ಲೂ ಎಡವಟ್ಟು – ಈಗ ಪಾಕ್ ಪ್ರಧಾನಿ ಫುಲ್ ಟ್ರೋಲ್
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನವನ್ನು ದಲಾಲ್ (ದಲ್ಲಾಳಿ) ಎಂದು ಕರೆದಿದ್ದರು. ಆದರೆ ಈಗ ಅದೇ ದೇಶವು ಶಾಂತಿ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಕೇಂದ್ರ ಸರ್ಕಾರದ ಗೊಂದಲವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಸ್ವಯಂ ಘೋಷಿತ ವಿಶ್ವಗುರುವಿನ 56 ಇಂಚಿನ ಎದೆ ಕುಗ್ಗಿದೆ. ಇಸ್ರೇಲ್ನ ಯುದ್ಧೋನ್ಮಾದದ ಬಗ್ಗೆ ಮಾತ್ರವಲ್ಲದೆ, ಶ್ವೇತಭವನದಲ್ಲಿ ಅವರ ಉತ್ತಮ ಸ್ನೇಹಿತ ಬಳಸುತ್ತಿರುವ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಅವಮಾನಕರ ಭಾಷೆಯ ಬಗ್ಗೆ ಮೋದಿಯ ಮೌನ ಅವರ ಹೇಡಿತನವನ್ನು ಪ್ರದರ್ಶಿಸುತ್ತದೆ ಎಂದು ಕಿಡಿಕಾರಿದ್ದಾರೆ.

