ಕದನ ವಿರಾಮಕ್ಕೆ ಇರಾನ್‌ ವಿಧಿಸಿದ 10 ಷರತ್ತುಗಳು ಏನು?

1 Min Read

ಟೆಹ್ರಾನ್‌: ಅಮೆರಿಕ (USA) ಮತ್ತು ಇರಾನ್‌ (Iran) ನಡುವಿನ ಯುದ್ಧಕ್ಕೆ 14 ದಿನಗಳ ಕದನ ವಿರಾಮ(Ceasefire) ಘೋಷಣೆಯಾಗಿದೆ.

ಕದನ ವಿರಾಮ ಘೋಷಣೆಗೂ ಮುನ್ನ ಇರಾನ್‌ 10 ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳನ್ನು ಅಮೆರಿಕ(USA) ಯಾವ ರೀತಿ ಸ್ವೀಕರಿಸುತ್ತದೆ ಎನ್ನುವುದರ ಮೇಲೆ ಕದನ ವಿರಾಮ ಭವಿಷ್ಯ ನಿರ್ಧಾರವಾಗಲಿದೆ.

ಟ್ರಂಪ್‌ ಹೇಳಿದ್ದೇನು?
ಇರಾನ್‌ ಕಡೆಯಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದ್ದು, ಇದು ಶಾಶ್ವತ ಶಾಂತಿ ಮಾತುಕತೆಗೆ ಉತ್ತಮ ಆಧಾರವಾಗಿದೆ. ಈ ಎರಡು ವಾರಗಳ ಸಮಯವು ಇರಾನ್ ಮತ್ತು ಅಮೆರಿಕದ ನಡುವೆ ದೀರ್ಘಕಾಲದ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಮತ್ತು ಪೂರ್ಣಗೊಳಿಸಲು ಸಹಕಾರಿಯಾಗಲಿದೆ

ಇರಾನ್‌ ವಿಧಿಸಿರುವ ಷರತ್ತುಗಳು ಏನು?
1. ಇರಾಕ್, ಲೆಬನಾನ್ ಮತ್ತು ಯೆಮೆನ್ ಮೇಲಿನ ಯುದ್ಧ ಸಂಪೂರ್ಣ ನಿಲ್ಲಬೇಕು.
2. ಯಾವುದೇ ಸಮಯದ ಮಿತಿಯಿಲ್ಲದೆ ಇರಾನ್ ಮೇಲಿನ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
3. ಈ ಪ್ರದೇಶದಲ್ಲಿನ ಎಲ್ಲಾ ಸಂಘರ್ಷಗಳು ಸಂಪೂರ್ಣವಾಗಿ ಕೊನೆಯಾಗಬೇಕು.
4. ಹಾರ್ಮುಜ್‌ ಜಲಸಂಧಿಯನ್ನು ಪುನಃ ತೆರೆಯುವುದು.
5. ಹಾರ್ಮುಜ್‌ ಜಲಸಂಧಿಯಲ್ಲಿ ಸಂಚಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರೋಟೋಕಾಲ್ ಮತ್ತು ಷರತ್ತುಗಳನ್ನು ವಿಧಿಸಲು ಒಪ್ಪಿಗೆ.
6. ಇರಾನ್‌ಗೆ ಪುನರ್ನಿರ್ಮಾಣ ವೆಚ್ಚಗಳಿಗೆ ಪರಿಹಾರದ ಸಂಪೂರ್ಣ ಪಾವತಿ.
7. ಇರಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ಸಂಪೂರ್ಣ ಬದ್ಧತೆ ನೀಡಬೇಕು.
8. ಅಮೆರಿಕ ಮುಟ್ಟುಗೋಲು ಹಾಕಿರುವ ಇರಾನ್‌ನಿನ ಹಣ ಮತ್ತು ಆಸ್ತಿಯನ್ನು ಬಿಡುಗಡೆ ಮಾಡಬೇಕು.
9. ಇರಾನ್‌ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಬಯಸುವುದಿಲ್ಲ.
10.ಮೇಲಿನ ಷರತ್ತುಗಳ ಅನುಮೋದನೆಯ ನಂತರ ತಕ್ಷಣದ ಕದನ ವಿರಾಮ ಜಾರಿಗೆ ಬರುತ್ತದೆ.

Share This Article