ದಿನ ಭವಿಷ್ಯ: 08-04-2026

2 Min Read

ಶ್ರೀ ಪರಭಾವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಕೃಷ್ಣ ಪಕ್ಷ
ವಾರ: ಬುಧವಾರ, ತಿಥಿ : ಷಷ್ಠಿ
ನಕ್ಷತ್ರ: ಮೂಲ

ರಾಹುಕಾಲ: 12.25 ರಿಂದ 1.58
ಗುಳಿಕಕಾಲ: 11.53 ರಿಂದ 12.25
ಯಮಗಂಡಕಾಲ: 7.48 ರಿಂದ 9.20

ಮೇಷ: ಈ ದಿನ ಕುಟುಂಬ ಸೌಖ್ಯ, ಮಕ್ಕಳಿಂದ ಸಂತಸ, ಉನ್ನತ ಉದ್ಯೋಗ ಲಭ್ಯ, ದೂರ ಪ್ರಯಾಣ ಸಾಧ್ಯತೆ.

ವೃಷಭ: ಈ ದಿನ ಯತ್ನ ಕಾರ್ಯಗಳಲ್ಲಿ ವಿಳಂಬ, ವಿಪರೀತ ವ್ಯಸನ, ಮನೋವ್ಯಥೆ, ತಾಳ್ಮೆಯಿಂದ ವ್ಯವಹಾರಗಳನ್ನ ನಿರ್ವಹಿಸಬೇಕು, ಉದ್ಯಮಿಗಳಿಗೆ ಪ್ರಗತಿ, ಶತ್ರು ಭಾದೆ ನಿವಾರಣೆ.

ಮಿಥುನ: ಈ ದಿನ ಶುಭ ಸಮಾರಂಭಗಳಲ್ಲಿ ಭಾಗಿ, ನಾನಾ ಮೂಲಗಳಿಂದ ವರಮಾನ, ಮನಶಾಂತಿ, ವಿದೇಶ ಯಾನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಜಮೀನು ವಿಷಯಗಳು ಇತ್ಯರ್ಥ.

ಕಟಕ: ಈ ದಿನ ಮಿತ್ರರಿಂದ ಸಹಾಯ, ಅಲ್ಪ ಲಾಭ ಅಧಿಕ ಖರ್ಚು, ತೀರ್ಥಯಾತ್ರದರ್ಶನ, ವಿವಾಹ ಯೋಗ, ಆರೋಗ್ಯ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾತಾಪಿತರಲ್ಲಿ ಪ್ರೀತಿ, ಮನಶಾಂತಿ.

ಸಿಂಹ: ಈ ದಿನ ಮಾಡುವ ಕೆಲಸದಲ್ಲಿ ಲಾಭ, ಧಾರ್ಮಿಕ ಸಮಾರಂಭಕ್ಕಾಗಿ ದೂರ ಪ್ರಯಾಣ, ಸ್ತ್ರೀಯರಿಗೆ ಶುಭ, ವ್ಯವಹಾರಗಳಲ್ಲಿ ಉತ್ತಮ ಪ್ರಗತಿ, ಮನೆಯಲ್ಲಿ ನೆಮ್ಮದಿ ಸಂತೋಷ.

ಕನ್ಯಾ: ಈ ದಿನ ಹಳೆಯ ಗೆಳೆಯ ಭೇಟಿ, ಕೆಟ್ಟ ಆಲೋಚನೆಗಳನ್ನ ಕೈಬಿಡಿ, ಸುಖ ಭೋಜನ, ಉದ್ಯಮಿಗಳಿಗೆ ಪ್ರಗತಿ, ಅನಾವಶ್ಯಕ ದುಂದು ವೆಚ್ಚ.

ತುಲಾ: ಈ ದಿನ ಯತ್ನ ಕಾರ್ಯಸಿದ್ಧಿ, ಬಂಧು ಮಿತ್ರರ ಸಹಾಯ, ಸ್ಥಳ ಬದಲಾವಣೆ, ಶತ್ರು ಭಾದೆ, ಸ್ನೇಹಿತರಿಂದ ಬೆಂಬಲ, ಭೂ ಸಂಬಂಧ ವ್ಯವಹಾರಗಳಿಂದ ಲಾಭ.

ವೃಶ್ಚಿಕ: ಈ ದಿನ ಮಾಡುವ ಕೆಲಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ಧನ ನಷ್ಟ, ಯಾರನ್ನು ಹೆಚ್ಚಾಗಿ ನಂಬಬೇಡಿ, ವಿವಾಹ ಯೋಗ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.

ಧನಸ್ಸು: ಯತ್ನ ಕಾರ್ಯಸಿದ್ಧಿ, ಸ್ತ್ರೀ ಸೌಖ್ಯ, ನಾನಾ ರೀತಿ ಆದಾಯ ಪ್ರಾಪ್ತಿ, ಶತ್ರುನಾಶ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ, ಆಕಸ್ಮಿಕ ಧನ ಲಾಭ, ಪುಣ್ಯಕ್ಷೇತ್ರ ದರ್ಶನ, ಮನಶಾಂತಿ.

ಮಕರ: ತಂಪಾದ ಪಾನೀಯಗಳಿಂದ ಅನಾರೋಗ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಧಿಕಾರಿಗಳಿಂದ ತೊಂದರೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.

ಕುಂಭ: ಬಹಳಷ್ಟು ಶ್ರಮಪಟ್ಟರು ಕಾರ್ಯ ಫಲಿಸುವುದಿಲ್ಲ, ವಿದ್ಯಾರ್ಥಿಗಳಲ್ಲಿ ಗೊಂದಲ, ಋಣಭಾದೆ, ಸ್ನೇಹಿತರ ದುಃಖಕ್ಕೆ ಹಿತವಚನ ಹೇಳುವಿರಿ, ಆರೋಗ್ಯದಲ್ಲಿ ಏರುಪೇರು.

ಮೀನ: ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಚಂಚಲ ಮನಸ್ಸು, ಸಾಲಭಾದೆ, ಅಕಾಲ ಭೋಜನ, ವಿಪರೀತ ವ್ಯಸನ, ಸುಖ ಭೋಜನ, ಮನಶಾಂತಿ.

Share This Article