ಇರಾನ್‌ನ ಹಿಟ್‌ ಲಿಸ್ಟ್‌ ಸಿದ್ಧಪಡಿಸಿದ ಅಮೆರಿಕ – ಮಧ್ಯಪ್ರಾಚ್ಯದಲ್ಲಿ ಇಂದು ರಾತ್ರಿಯೇ ರಣಭೀಕರ ಕಾಳಗ?

2 Min Read

ಟೆಹ್ರಾನ್‌/ವಾಷಿಂಗ್ಟನ್‌: ಮಧ್ಯಪ್ರಾಚ್ಯ ಸಂಘರ್ಷ 39ನೇ ದಿನಕ್ಕೆ ಕಾಲಿಟ್ಟಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಇರಾನ್​​​ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು (Strait Of Hormuz) ಮುಕ್ತಗೊಳಿಸದಿದ್ದರೆ, ತಾವು ನೀಡಿದ ಗಡುವು ಮುಗಿದ ನಂತರ ಇರಾನ್‌ ಅನ್ನು ಸಂಪೂರ್ಣವಾಗಿ ಒಂದೇ ರಾತ್ರಿಯಲ್ಲಿ ನಾಶ ಮಾಡಬಹುದು ಎಂದು ಹೇಳಿದ್ದಾರೆ. ಅಲ್ಲದೇ ಅದಕ್ಕೆ ಬೇಕಾದ ತಯಾರಿ ಆರಂಭಿಸಿದ್ದು ಹಿಟ್ ಲಿಸ್ಟ್ ಅನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಹಾಗಿದ್ರೆ ಇಂದು ರಾತ್ರಿಯ ಬಳಿಕ ಮಧ್ಯಪ್ರಾಚ್ಯ ರಣ ಭೀಕರ ಕಾಳಗಕ್ಕೆ ಸಾಕ್ಷಿಯಾಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ (Middle East Conflict) ಇಂದು ಸಂಜೆಯ ಬಳಿಕ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ, ತಾವು ನೀಡಿದ ಗಡುವು ಮುಗಿದ ನಂತರ ಇರಾನ್‌ ಅನ್ನು ಸಂಪೂರ್ಣವಾಗಿ ಒಂದೇ ರಾತ್ರಿಯಲ್ಲಿ ನಾಶ ಮಾಡಬಹುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಸಿದ್ದಾರೆ. ಇದನ್ನೂ ಓದಿ: ಯುದ್ಧದ ಟೆನ್ಷನ್‌ ಮಧ್ಯೆ ಇರಾನ್‌ಗೆ ದೊಡ್ಡ ಆಘಾತ – ಪ್ರಜ್ಞಾಹೀನ ಸ್ಥಿತಿಯಲ್ಲಿ ಸುಪ್ರೀಂ ಲೀಡರ್‌

ಇರಾನ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ನೀಡಿದ ಗಡುವು ಪಾಲಿಸದಿದ್ದರೆ, ಅಮೆರಿಕದ ಸೈನ್ಯಕ್ಕೆ ಇರಾನ್‌ನಲ್ಲಿರುವ ಪ್ರತಿಯೊಂದು ಸೇತುವೆ ಮತ್ತು ಪ್ರತಿಯೊಂದು ವಿದ್ಯುತ್ ಕೇಂದ್ರಗಳನ್ನು ಕೇವಲ 4 ಗಂಟೆಗಳಲ್ಲಿ ನಾಶಪಡಿಸುವ ಯುದ್ಧ ಯೋಜನೆ ರೆಡಿಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಮಂಗಳವಾರ ಅಂದರೆ ಇಂದು ಸಂಜೆ 8 ಗಂಟೆಯ ಒಳಗಾಗಿ ಇರಾನ್ ತಾರ್ಕಿಕ ನಿರ್ಧಾರವೊಂದಕ್ಕೆ ಬರಬೇಕಿದೆ. ಇದನ್ನೂ ಓದಿ: ಇರಾನ್‌ ಪರಮಾಣು ಸೌಲಭ್ಯದ ಮೇಲೆ ದಾಳಿ – ವಿಕಿರಣ ಸೋರಿಕೆಯ ಆತಂಕ

ಪೆಟಂಗನ್ ಈಗಾಗಲೇ ಇರಾನ್ ನಲ್ಲಿ ಮುಂದೆ ಮಾಡಬೇಕಾದ ದಾಳಿಗಳ ಸ್ಥಳಗಳನ್ನ ಗುರುತಿಸಿದೆ ಅದರ ಹಿಟ್‌ಲಿಸ್ಟ್‌ ಹೀಗಿದೆ…

* ಪ್ರಮುಖ ವಿದ್ಯುತ್ ಸ್ಥಾವರಗಳು
* ಪರಮಾಣು ಕೇಂದ್ರಗಳು
* ತಾಂತ್ರಿಕ ಮತ್ತು ಸಂಶೋಧನ ವಿಶ್ವ ವಿದ್ಯಾಲಯಗಳು
* ಐಆರ್‌ಜಿಸಿ ಕಚೇರಿಗಳು
* ಉಪ್ಪು ನೀರಿನ ಸಂಸ್ಕರಣಾ ಘಟಕಗಳು

ಹೀಗೆ ಇರಾನ್ ಪ್ರಮುಖ ಮೂಲಸೌಕರ್ಯಗಳ ಪಟ್ಟಿ ಮಾಡಿರುವ ಅಮೆರಿಕ, ಅಧ್ಯಕ್ಷರ ಅನುಮತಿಗೆ ಕಾಯುತ್ತಿದೆ. ಈಗಾಗಲೇ ಇರಾನ್ ಮೇಲೆ ಭೂದಾಳಿಗೆ ಯುಸ್‌ ಸೇನೆ ಸಿದ್ಧವಾಗಿದೆ. ಈಗ ಇರಾನ್ ಟ್ರಂಪ್ ಬೆದರಿಕೆಗೆ ಬಗ್ಗದಿದ್ದರೆ ಭೀಕರ ದಾಳಿಗಳು ನಡೆಯುವ ಸಾಧ್ಯತೆಗಳು ಕಂಡು ಬರುತ್ತಿದೆ. ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

13,000ಕ್ಕೂ ಹೆಚ್ಚು ಇರಾನಿನ ಗುರಿ ಹೊಡೆದುರುಳಿಸಿದ ದೊಡ್ಡಣ್ಣ
ಕಳೆದ 5 ವಾರಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ 13,000 ಕ್ಕೂ ಹೆಚ್ಚು ಇರಾನಿನ ಗುರಿಗಳನ್ನು ಹೊಡೆದುರುಳಿಸಿದೆ ಎಂದು ಅಮೆರಿಕ ಹೇಳಿಕೊಂಡಿದೆ. 155 ಕ್ಕೂ ಹೆಚ್ಚು ಇರಾನಿನ ಹಡಗುಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ಸೆಂಟ್ರಲ್ ಕಮಾಂಡ್‌ನಿಂದ ಮಾಹಿತಿ ನೀಡಿದೆ. ಅಮೆರಿಕ ಪರಮಾಣು ಚಾಲಿತ ವಿಮಾನವಾಹಕ ನೌಕೆಗಳು, ಜಲಾಂತರ್ಗಾಮಿ ನೌಕೆಗಳು ಆಪರೇಷನ್ ಎಪಿಕ್ ಫ್ಯೂರಿಯಲ್ಲಿ ಭಾಗವಹಿಸುತ್ತಿವೆ. ಜೊತೆಗೆ ಎಫ್-35 ಸ್ಟೆಲ್ತ್ ಫೈಟರ್ ಜೆಟ್‌ಗಳಿಂದ ಬಿ-52 ಬಾಂಬರ್‌ಗಳು ಕೂಡಾ ಈ ಯುದ್ಧದಲ್ಲಿ ಭಾಗಿಯಾಗಿವೆ ಎಂದು ಹೇಳಿದೆ.

Share This Article