ಬೆಂಗಳೂರು: ಆರ್ಸಿಬಿ (RCB) ಹಾಗೂ ಸಿಎಸ್ಕೆ (CSK) ಪಂದ್ಯಕ್ಕೂ ಮುನ್ನ ಬ್ಲ್ಯಾಕ್ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ಏಳು ಜನರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಜಗದೀಶ್, ಸತ್ಯನಾರಾಯಣ, ಹರ್ಷ, ವಿನಯ್, ಶಾಹೀದ್, ಲಿಖಿತ್, ಪುನೀತ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: IPL 2026 | ಗೆದ್ದರೂ ಸಿಗದ ಪಟ್ಟ – ಗಂಟೆಗಳಲ್ಲೇ ಆರ್ಸಿಬಿ ದಾಖಲೆ ಪುಡಿಗಟ್ಟಿದ ಚೆನ್ನೈ
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹೆಚ್ಚಿನ ಹಣಕ್ಕಾಗಿ ಬ್ಲ್ಯಾಕ್ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದರು. ಈ ವೇಳೆ ಸಿಸಿಬಿ ಪೊಲೀಸರು ಮಾನಿಟರಿಂಗ್ ಮಾಡಿದ್ದು, ಆರೋಪಿಗಳು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರತ್ಯೇಕ ಮೂರು ಎಫ್ಐಆರ್ಗಳು ದಾಖಲಾಗಿವೆ.

