ದೆಹಲಿ ವಿವಿಯ ಎರಡು ಕಾಲೇಜುಗಳಿಗೆ ಬಾಂಬ್ ಬೆದರಿಕೆ

1 Min Read
ನವದೆಹಲಿ: ದೆಹಲಿ ವಿವಿಯ ಎರಡು ಪ್ರಮುಖ ಕಾಲೇಜುಗಳಿಗೆ ಇಂದು (ಏ.6) ಬೆಳಿಗ್ಗೆ ಬಾಂಬ್ ಬೆದರಿಕೆ (Bomb Threat) ಮೇಲ್ ಬಂದಿದ್ದು, ಕಾಲೇಜುಗಳನ್ನು ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ (Delhi University) ಎರಡು ಪ್ರಮುಖ ಕಾಲೇಜುಗಳಾದ ರಾಮ್‌ಜಾಸ್ ಕಾಲೇಜು (Ramjas College) ಮತ್ತು ಮಿರಾಂಡಾ ಕಾಲೇಜಿಗೆ (Miranda College) ಇಂದು ಬೆಳಿಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಇಮೇಲ್‌ನಲ್ಲಿ ಕಾಲೇಜು ಸ್ಫೋಟಿಸುವ ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆ ಎರಡೂ ಕ್ಯಾಂಪಸ್‌ಗಳನ್ನು ಖಾಲಿ ಮಾಡಿಸಲಾಗಿದೆ.ಇದನ್ನೂ ಓದಿ: ಅಮೆರಿಕ – ಇಸ್ರೇಲಿ ದಾಳಿಯಲ್ಲಿ ಇರಾನ್‌ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಹತ್ಯೆ

ಬೆದರಿಕೆ ಇಮೇಲ್ ಬಂದ ಕೂಡಲೇ ಕಾಲೇಜುಗಳಲ್ಲಿ ಗೊಂದಲಮಯ ವಾತಾವರಣ ಉಂಟಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೂಡಲೇ ದೆಹಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಬಾಂಬ್ ನಿಷ್ಕಿçÃಯ ತಂಡ ಮತ್ತು ಡಾಗ್ ಸ್ಕ್ವಾಡ್ಗಳನ್ನು ನಿಯೋಜಿಸಿದ್ದಾರೆ. ಸದ್ಯ ಕಾಲೇಜು ಆವರಣದಲ್ಲಿ ಸಂಪೂರ್ಣವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈವರೆಗೆ ಯಾವುದೇ ಸ್ಫೋಟಕ ವಸ್ತು ಅಥವಾ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದು ಸುಳ್ಳು ಬಾಂಬ್ ಬೆದರಿಕೆಯಾಗಿರಬಹುದು ಎನ್ನಲಾಗಿದೆ. ಸದ್ಯ ಬೆದರಿಕೆ ಇಮೇಲ್ ಕಳುಹಿಸಿದವರನ್ನು ಪತ್ತೆಹಚ್ಚಲು ಪೊಲೀಸರ ಸೈಬರ್ ಸೆಲ್ ತನಿಖೆ ಆರಂಭಿಸಿದೆ. ಇಮೇಲ್ ಮೂಲವನ್ನು ಗುರುತಿಸಲು ಮತ್ತು ಬೆದರಿಕೆಯ ಹಿಂದಿನ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: 6 ತಿಂಗಳ ಹಿಂದೆ ಮಾಡ್ಕೊಂಡಿದ್ದ ವೀಡಿಯೋ ಈಗ ವೈರಲ್ ಮಾಡುತ್ತಿದ್ದಾರೆ: ಹುಬ್ಬಳ್ಳಿ ಲವ್ ಜಿಹಾದ್ ಸಂತ್ರಸ್ತೆ

Share This Article