ಟೆಹ್ರಾನ್: ಅಮೆರಿಕ – ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ (Majid Khademi) ಹತ್ಯೆಯಾಗಿದ್ದಾರೆ ಎಂದು ಐಆರ್‌ಜಿಸಿ ಅಧಿಕೃತವಾಗಿ ಹೇಳಿಕೊಂಡಿದೆ. ಆದ್ರೆ ಖಾದೇಮಿ ಸಾವನ್ನಪ್ಪಿದ್ದ ಸ್ಥಳದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.
ಇರಾನ್ ದಾಳಿಗೆ ಪ್ರತೀಕಾರವಾಗಿ ಇಂದು (ಸೋಮವಾರ) ಟೆಹ್ರಾನ್ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಸತತವಾಗಿ ವಾಯುದಾಳಿ (US Iarael Strikes) ನಡೆಸುತ್ತಿವೆ. ಇದರಿಂದ ಘರ್ಷಣೆ ತೀವ್ರಸ್ವರೂಪ ಪಡೆದುಕೊಂಡಿರುವ ನಡುವೆ ಗುಪ್ತಚರ ಮುಖ್ಯಸ್ಥನ ಹತ್ಯೆಯಾಗಿದೆ. ಇದನ್ನೂ ಓದಿ: 7,000 ಅಡಿ ಎತ್ತರ, ಪರ್ವತಗಳ ಬಿರುಕಿನ ಮಧ್ಯೆ ಅವಿತಿದ್ದ ಅಮೆರಿಕ ಪೈಲಟ್ – ರಹಸ್ಯ ಕಾರ್ಯಾಚರಣೆಯೇ ರೋಚಕ!
ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥರಾಗಿದ್ದ ಮೇಜರ್ ಜನರಲ್ ಮಜೀದ್ ಖಾದೇಮಿ ಇಂದು ಮುಂಜಾನೆ ಅಮೆರಿಕ-ಇದ್ರೇಲ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಐಆರ್‌ಜಿಸಿ ತನ್ನ ಅಧಿಕೃತ ಟೆಲಿಗ್ರಾಮ್ ಚಾನೆಲ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಕಳೆದ ಜೂನ್ ತಿಂಗಳಲ್ಲಿ ನಡೆದಿದ್ದ 12 ದಿನಗಳ ಯುದ್ಧದ ವೇಳೆ ಇಸ್ರೇಲ್, ಜನರಲ್ ಮೊಹಮ್ಮದ್ ಕಜೆಮಿ ಅವರನ್ನ ಹತ್ಯೆ ಮಾಡಿತ್ತು. ಆ ಬಳಿಕ ಖಾದೇಮಿ ಗುಪ್ತಚರ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದನ್ನೂ ಓದಿ: ಅಮೆರಿಕ – ಇರಾನ್ ಮಧ್ಯೆ 2 ಹಂತದ ಕದನ ವಿರಾಮ ಲೆಕ್ಕಾಚಾರ – 45 ದಿನಗಳ ವಿರಾಮಕ್ಕಾಗಿ ಷರತ್ತುಗಳ ಚರ್ಚೆ
ಸುಮಾರು ಅರ್ಧಶತಮಾನಗಳಿಗೂ ಹೆಚ್ಚು ಕಾಲ ಐಆರ್‌ಜಿಸಿನಲ್ಲಿ ತೊಡಗಿಸಿಕೊಂಡಿದ್ದ ಖಾದೇಮಿ, ಪ್ರಾಮಾಣಿಕ ಮತ್ತು ಧೈರ್ಯಶಾಲಿಯೂ ಆಗಿದ್ದರು. ಗುಪ್ತಚರ, ಭದ್ರತಾ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದರು. ಶತ್ರುಗಳನ್ನು ಎದುರಿಸುವಾಗ ಉತ್ತಮ ಕಾರ್ಯತಂತ್ರ ರೂಪಿಸುತ್ತಿದ್ದರು. ಅವರ ಪ್ರಯತ್ನಗಳು ಮುಂದಿನ ಹಲವು ವರ್ಷಗಳವರೆಗೂ ದೇಶದ ಗುಪ್ತಚರ ಸಂಸ್ಥೆಗೆ ಮಾರ್ಗದರ್ಶಕವಾಗಿರಲಿದೆ ಎಂದು ಹೇಳುತ್ತಾ ಇರಾನ್ ಸೇನೆ ಸಂತಾಪ ಸೂಚಿಸಿದೆ.
6 ಮಕ್ಕಳು ಸೇರಿ 34 ಮಂದಿ ಸಾವು
ಇನ್ನೂ ಅಮೆರಿಕ – ಇಸ್ರೇಲ್ ಸೋಮವಾರ (ಇಂದು) ಇರಾನ್ ಮೇಲೆ ನಡೆಸಿದ ವಾಯುದಾಳಿಯಲ್ಲಿ 6 ಮಕ್ಕಳು ಸೇರಿ 34 ಮಂದಿ ಸಾವನ್ನಪ್ಪಿದ್ದಾರೆ. ಹಾರ್ಮುಜ್ ಜಲಸಂಧಿಯನ್ನ ತೆರೆಯಲು ಟ್ರಂಪ್ ಡೆಡ್‌ಲೈನ್ ಕೊಟ್ಟಿದ್ದು, ಕದನ ವಿರಾಮ ಮಾತುಕತೆ ಪ್ರಸ್ತಾಪ ನಡೆಯುತ್ತಿರುವ ಹೊತ್ತಿನಲ್ಲೇ ಅಮೆರಿಕ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿವೆ. ಇದನ್ನೂ ಓದಿ: 6 ಮಕ್ಕಳು ಸೇರಿ 34 ಮಂದಿ ಸಾವಿಗೆ ಇರಾನ್ ಪ್ರತೀಕಾರ – ಇಸ್ರೇಲ್‌ನ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ಫೋಟ



