ಸಿದ್ದರಾಮಯ್ಯ ಮತ್ತೆ ಸಿಎಂ ಆಗಿ ದಾವಣಗೆರೆಗೆ ಬರಲ್ಲ: ಭವಿಷ್ಯ ನುಡಿದ ಛಲವಾದಿ ನಾರಾಯಣಸ್ವಾಮಿ

1 Min Read

– ಹಿಂದೂಗಳ ಮತಕ್ಕೆ 7000, ಮುಸ್ಲಿಮರಿಗೆ 10,000 ದರ ನಿಗದಿ ಆರೋಪ

ದಾವಣಗೆರೆ: ಸಿದ್ದರಾಮಯ್ಯ (Siddaramaiah) ಅವರು ದಾವಣಗೆರೆ ದಕ್ಷಿಣ (Davanagere south) ಕ್ಷೇತ್ರದ ಉಪಚುನಾವಣೆ (Byelection) ಪ್ರಚಾರ ಮುಗಿಸಿ ಬೆಂಗಳೂರಿಗೆ ಹೋದ್ರೆ ಮತ್ತೆ ಸಿಎಂ ಆಗಿ ದಾವಣಗೆರೆಗೆ ಬರಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಭವಿಷ್ಯ ನುಡಿದರು.

ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಸೋಲುವ ಭೀತಿ ಕಾಡುತ್ತಿದೆ. ಹಿಂದೂಗಳ ಮತಕ್ಕೆ 7000 ರೂ., ಮುಸ್ಲಿಮರ ಮತಕ್ಕೆ 10,000 ರೂ. ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ನಮ್ಮ ಗೃಹ ಇಲಾಖೆ ಸತ್ತು ಹೋಗಿದ್ಯಾ? ಇದೆಂಥಾ ಗುಲಾಮಗಿರಿ ಸರ್ಕಾರ? – ಛಲವಾದಿ ನಾರಾಯಣಸ್ವಾಮಿ ನಿಗಿನಿಗಿ

ಸಿದ್ದರಾಮಯ್ಯ ಅವರಿಗೆ ಆಪತ್ತು ಬಂದಾಗ ಮಾತ್ರ ಅಹಿಂದ ನೆನಪಾಗುತ್ತದೆ. ದಾವಣಗೆರೆಗೆ ಬಂದ್ರೆ ಅಹಿಂದಗೆ ಮತ ನೀಡಬೇಡಿ ಎನ್ನುತ್ತಾರೆ. ಬಾಗಲಕೋಟೆಗೆ ಪ್ರಚಾರಕ್ಕೆ ಹೋದ್ರೆ ಅಹಿಂದಗೆ ಮತಹಾಕಿ ಎನ್ನುತ್ತಾರೆ. ಅವರಿಗೆ ಸೋಲುವ ಭೀತಿ ಕಾಡುತ್ತಿದೆ. ನಮ್ಮ ಅಭ್ಯರ್ಥಿ ಇಲ್ಲಿ ಸಂಪತ್ತಿಗೆ ಸವಾಲ್ ಆಗಿ ನಿಂತಿದ್ದಾರೆ. ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ಕರ್ನಾಟಕದ ಅಪ್ರಬುದ್ಧ ವಿರೋಧ ಪಕ್ಷದ ನಾಯಕ: ಪ್ರದೀಪ್ ಈಶ್ವರ್

Share This Article