ಅಂದು ಪಂತ್‌ಗೆ ಕ್ಲಾಸ್‌ – ಇಂದು ಬಲವಾಗಿ ಅಪ್ಪಿ ಸಂಭ್ರಮಿಸಿದ ಗೋಯೆಂಕಾ

1 Min Read

ಹೈದರಾಬಾದ್‌: ಸನ್‌ರೈಸರ್ಸ್‌ ಹೈದರಾಬಾದ್‌(SRH) ವಿರುದ್ಧ ಲಕ್ನೋ ಸೂಪರ್‌ ಜೈಂಟ್ಸ್‌ (LSG) ರೋಚಕ 5 ವಿಕೆಟ್‌ ಗೆಲುವು ಸಾಧಿಸಿದ ಬಳಿಕ ಮಾಲೀಕ ಸಂಜೀವ್‌ ಗೋಯೆಂಕಾ ನಾಯಕ ರಿಷಭ್‌ ಪಂತ್‌ ಅವರನ್ನು ಬಲವಾಗಿ ಅಪ್ಪಿಕೊಂಡು ಸಂಭ್ರಮಿಸಿದ್ದಾರೆ.

ತಂಡ ಜಯಗಳಿಸಿದ ಬಳಿಕ ಮೈದಾನದ ಒಳಗಡೆ ಪಂತ್‌(Rishabh Pant) ಅವರನ್ನು ಅಲಂಗಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಂತ್‌ ಅವರು ಗೋಯೆಂಕಾ(Sanjiv Goenka) ಅವರ ಮಾತಿಗೆ ನಕ್ಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇಂದಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಹೈದರಾಬಾದ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 156 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ಒಂದು ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ ನಷ್ಟಕ್ಕೆ 160 ರನ್‌ ಹೊಡೆದು ಜಯಗಳಿಸಿತು. ಇದನ್ನೂ ಓದಿ: ನಾನು ಐಪಿಎಲ್‌ ಅಧ್ಯಕ್ಷನಾಗಿದ್ದರೆ ಗೋಯೆಂಕಾ ಬ್ಯಾನ್‌ – ಲಲಿತ್‌ ಮೋದಿ ಕೆಂಡಾಮಂಡಲ


ಪಂತ್‌ ಔಟಾಗದೇ 68 ರನ್‌(50 ಎಸೆತ, 9 ಬೌಂಡರಿ) ಹೊಡೆದರು. ಪಂತ್‌ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಆದರೆ ಇಂದು ಯಾವುದೇ ಸಿಕ್ಸ್‌ ಸಿಡಿಸದೇ ಕೇವಲ ಬೌಂಡರಿ ಹೊಡೆಯುವ ಮೂಲಕ ಜವಾಬ್ದಾರಿಯುತ ಆಟವಾಡಿದರು. ಇದನ್ನೂ ಓದಿ: ಶಮಿ ಬೆಂಕಿ ಬೌಲಿಂಗ್‌, ಕೊನೆಯ ಓವರ್‌ನಲ್ಲಿ ಪಂತ್‌ 3 ಬೌಂಡರಿ – ಲಕ್ನೋಗೆ ರೋಚಕ ಜಯ

ಆರಂಭಿಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಪಂದ್ಯ ಸೋತ ಬಳಿಕ ಮೈದಾನದಲ್ಲಿ ನಾಯಕ ರಿಷಭ್‌ ಪಂತ್‌(Rishabh Pant) ಅವರನ್ನು ಸಂಜಯ್‌ ಗೋಯೆಂಕಾ ತರಾಟೆಗೆ ತೆಗೆದುಕೊಂಡಿದ್ದರು. ಈ ವಿಚಾರಕ್ಕೆ ನೆಟ್ಟಿಗರು ಗೋಯೆಂಕಾ ವಿರುದ್ಧ ಸಿಟ್ಟು ಹೊರಹಾಕಿದ್ದರು.
Share This Article