ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಕೇರಳದ ಮಹಿಳೆ ಮೂರು ದಿನಗಳ ಬಳಿಕ ಪತ್ತೆ

1 Min Read

ಮಡಿಕೇರಿ: ತಾಲೂಕಿನ (Madikeri) ತಡಿಯಂಡಮೋಳ್ ಬೆಟ್ಟದಲ್ಲಿ (Tadiyandamol Hills) ಗುರುವಾರ (ಏ.2) ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ (Kerala) ಮಹಿಳೆ (Woman) ಶರಣ್ಯ (35) ಭಾನುವಾರ (ಏ.5) ಪತ್ತೆಯಾಗಿದ್ದಾರೆ.

ಸ್ಥಳೀಯ ಕುಡಿಯ ಜನಾಂಗದವರು ಹುಡುಕಾಟ ನಡೆಸುವಾಗ ಕಾಡಿನೊಳಗೆ ಮಹಿಳೆ ಪತ್ತೆಯಾಗಿದ್ದು, ಅವರನ್ನು ಕಾಡಿನಿಂದ ಕರೆದುಕೊಂಡು ಬರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇವರ ಪತ್ತೆಗಾಗಿ ಅರಣ್ಯ, ಪೊಲೀಸ್, ನಕ್ಸಲ್ ನಿಗ್ರಹ ದಳ ಹಾಗೂ ಸ್ಥಳೀಯರು ಸೇರಿದಂತೆ ಒಟ್ಟು 9 ತಂಡಗಳನ್ನು ನಿಯೋಜಿಸಲಾಗಿತ್ತು. ಥರ್ಮಲ್ ಡ್ರೋನ್ ಕ್ಯಾಮೆರಾ, ಶ್ವಾನದಳವನ್ನೂ ಬಳಸಲಾಗಿತ್ತು. ಇದನ್ನೂ ಓದಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೊರಟಿದ್ದ ಮಹಿಳೆ ನಾಪತ್ತೆ

ಕೇರಳದಿಂದ ಒಬ್ಬರೇ ಬಂದಿದ್ದ ಅವರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ಚಾರಣಕ್ಕಾಗಿ ಹೊರಟಿದ್ದರು. ತಾವು ತಂಗಿದ್ದ ಹೋಂ ಸ್ಟೇಯವರನ್ನು ಗುರುವಾರ ಮಧ್ಯಾಹ್ನ ಸಂಪರ್ಕಿಸಿ, ದಾರಿ ತಪ್ಪಿರುವುದಾಗಿ ಹೇಳಿದ್ದರು. ಬಳಿಕ ಅವರ ಮೊಬೈಲ್ ಸ್ವಿಚ್‌ ಆಫ್‌ ಆಗಿತ್ತು. ಇನ್ನೂ ಈ ಮಹಿಳೆ ಕಾಣೆಯಾದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, SDRF ತಂಡ ಸೇರಿದಂತೆ ಹಲವಾರು ಜನರು ಹುಡುಕಾಟದ ಕಾರ್ಯಾಚರಣೆಯ ಫಲವಾಗಿ ಅವರು ಸಿಕ್ಕಿದ್ದಾರೆ. ಇದನ್ನೂ ಓದಿ: ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಕೇರಳದ ಮಹಿಳೆ ಮಿಸ್ಸಿಂಗ್‌ – 4ನೇ ದಿನವೂ ಮುಂದುವರಿದ ಶೋಧ

Share This Article